ನೀತಾ ಅಂಬಾನಿಗೆ ಬಿಗ್ ಶಾಕ್ ನೀಡಲು ಮುಂದಾದ ಬಿಸಿಸಿಐ: 23758 ಕೋಟಿ ಕೊಟ್ಟು ಖರೀದಿ ಮಾಡಿದ್ದ ಪ್ರಸಾರ ಹಕ್ಕುಗಳ ಮೇಲೆ ತೂಗುಗತ್ತಿ. ಏನಾಗುತ್ತಿದೆ ಗೊತ್ತೇ??

ನಿಂತ ಅಂಬಾನಿಗೆ ಬಿಗ್ ಶಾಕ್ ನೀಡಲು ಮುಂದಾದ ಬಿಸಿಸಿಐ: 23758 ಕೋಟಿ ಕೊಟ್ಟು ಖರೀದಿ ಮಾಡಿದ್ದ ಪ್ರಸಾರ ಹಕ್ಕುಗಳ ಮೇಲೆ ತೂಗುಗತ್ತಿ. ಏನಾಗುತ್ತಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಐಪಿಎಲ್ ಎಂದರೇ ಅದು ಕ್ರೇಜ್ ರೀತಿ. ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿನ ಹಬ್ಬ. ಐಪಿಎಲ್ ನಡೆಯುವ ಆ ಎರಡು ತಿಂಗಳು ಪ್ರತಿ ದಿನ ಹಬ್ಬದ ರೀತಿ ಸಂಭ್ರಮಿಸುತ್ತಾರೆ. ಐಪಿಎಲ್ ಎಂಬ ಮಿಲಿಯನ್ ಡಾಲರ್ ಬೇಬಿ, ಸೀಸನ್ ನಿಂದ ಸೀಸನ್ ಗೆ ಮತ್ತಷ್ಟು ದೊಡ್ಡದಾಗುತ್ತ ಬರುತ್ತಿದೆ. ಈ ಭಾರಿಯ ಪ್ರಸಾರದ ಹಕ್ಕುಗಳಿಂದಲೇ ಕೋಟಿ ಕೋಟಿ ದುಡ್ಡನ್ನು ಬಾಚಿಕೊಂಡಿತು. ಈ ಭಾರಿಯ ಪ್ರಸಾರದ ಹಕ್ಕುಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗ ಸಂಸ್ಥೆಯಾದ ವಯೋಕಾಮ್ ಖರೀದಿಸಿತ್ತು.

ಆದರೇ ಖರೀದಿಸಿದ ವಿಷಯ ಈಗ ವಿವಾದಕ್ಕೆ ತಿರುಗಿದ್ದು, ಐಪಿಎಲ್ ನಲ್ಲಿ ಆಡುವ ಫ್ರಾಂಚೈಸಿ ಆಗಿರುವ ಮುಂಬೈ ಇಂಡಿಯನ್ಸ್ ತಂಡದ ಒಡೆತನ ಕೂಡ ರಿಲಯನ್ಸ್ ಇಂಡಸ್ಟ್ರೀಸ್ ದ್ದೇ ಆಗಿದೆ. ಹೀಗಾಗಿ ಇದು ವಿವಾದಕ್ಕೆ ಕಾರಣವಾಗಿದೆ. ಮುಂಬೈ ಇಂಡಿಯನ್ಸ್ ತಂಡದ ಒಡತಿಯಾಗಿರುವ ನೀತಾ ಅಂಬಾನಿಯವರು ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ಪಾಲುದಾರರಾಗಿದ್ದಾರೆ.

ಇದರ ಜೊತೆ ಜೊತೆಗೆ ರಿಲಯನ್ಸ್ ಸಂಸ್ಥೆಯ ಒಟಿಟಿ ಆಗಿರುವ ವಯೋಕಾಮ್ ಇಂಡಸ್ಟ್ರೀಸ್ ನಲ್ಲಿಯೂ ಸಹ ಪಾಲು ಹೊಂದಿದ್ದಾರೆ. ಇದು ಈಗ ಸಂಘರ್ಷಕ್ಕೆ ಕಾರಣವಾಗಿದೆ. ಬಿಸಿಸಿಐ ಗೆ ಸದಸ್ಯರೊಬ್ಬರು ಇದನ್ನು ವೈಯುಕ್ತಿಕ ಹಿತಾಸಕ್ತಿ ಸಂಘರ್ಷ ಎಂದು ಹೇಳಿದ್ದಾರೆ. ಈ ಸಂಬಂಧ ನೀತಾ ಅಂಬಾನಿಯವರಿಗೆ ಬಿಸಿಸಿಐ ನೋಟಿಸ್ ಸಹ ನೀಡಿದ್ದು, ನೋಟಿಸ್ ಗೆ ಉತ್ತರ ನೀಡುವಂತೆ ಸೂಚಿಸಿದೆ. ತಂಡದ ಮಾಲೀಕರೊಬ್ಬರು, ಪ್ರಸಾರ ಖಾತೆಯ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಐಪಿಎಲ್ ಪ್ರಸಾರ ಖಾತೆಯ ಹಕ್ಕು ಅಂಬಾನಿ ಮಾಲೀಕತ್ವದ ವಯೋಕಾಮ್ ಇಂಡಸ್ಟ್ರೀಸ್ ನಿಂದ ಕೈ ತಪ್ಪಬಹುದು ಎಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.