ಈ ಬಾರಿ ಭಾರತದ ಟಿ 20 ವಿಶ್ವಕಪ್ ಗೆಲ್ಲಬೇಕು ಎಂದರೆ ಈ ಮೂವರು ವೇಗಿಗಳು ಇರಲೇ ಬೇಕಂತೆ. ಯಾರ್ಯಾರು ಗೊತ್ತೇ?? ಅಭಿಮಾನಿಗಳು ಬೇಡ ಎಂದದ್ದು ಯಾರನ್ನು ಗೊತ್ತೇ??

ಈ ಬಾರಿ ಭಾರತದ ಟಿ 20 ವಿಶ್ವಕಪ್ ಗೆಲ್ಲಬೇಕು ಎಂದರೆ ಈ ಮೂವರು ವೇಗಿಗಳು ಇರಲೇ ಬೇಕಂತೆ. ಯಾರ್ಯಾರು ಗೊತ್ತೇ?? ಅಭಿಮಾನಿಗಳು ಬೇಡ ಎಂದದ್ದು ಯಾರನ್ನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಹಲವಾರು ವರ್ಷಗಳಿಂದ ಭಾರತ ತಂಡ ಒಂದೇ ಒಂದು ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಎಂ.ಎಸ್.ಧೋನಿ ನಾಯಕತ್ವದಲ್ಲಿ 2013ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಪ್ ಎತ್ತಿ ಹಿಡಿದಿತ್ತು ಟೀಂ ಇಂಡಿಯಾ. ಆ ನಂತರ ಎಂಟು ವರ್ಷಗಳ ಕಾಲ ಇದುವರೆಗೂ ಒಂದೇ ಒಂದು ಭಾರಿ ಸಹ ಐಸಿಸಿ ಟ್ರೋಫಿ ಗೆದ್ದಿಲ್ಲ. ಹೊಸ ನಾಯಕ ಹಾಗೂ ಹೊಸ ಕೋಚ್ ನೇತೃತ್ವದಲ್ಲಿ ಈ ಭಾರಿ ಐಸಿಸಿ ಟ್ರೋಫಿ ಎತ್ತಿಹಿಡಿಯುವ ನೀರಿಕ್ಷೆ ಇದೆ.

ಈ ನಡುವೆ ಭಾರತ ತಂಡದ ಮಾಜಿ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಭಾರತ ತಂಡ ಈ ಭಾರಿ ಟಿ 20 ವಿಶ್ವಕಪ್ ಗೆ ಈ ಮೂವರು ಬೌಲರ್ ಗಳನ್ನು ಆಯ್ಕೆ ಮಾಡಿಕೊಳ್ಳಲೇಬೇಕು ಎಂದು ಹೇಳಿದ್ದಾರೆ. ಭಾರತ ತಂಡದ ಪ್ಲೇಯಿಂಗ್ ಇಲೆವೆನ್ ನಲ್ಲಿ ವೇಗದ ಬೌಲರ್ ಗಳಾದ ಜಸಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಇರಲೇಬೇಕು ಎಂದು ಹೇಳಿದ್ದಾರೆ.

ಭುವನೇಶ್ವರ್ ಹಾಗೂ ಶಮಿ ಪವರ್ ಪ್ಲೇ ನಲ್ಲಿ ಉತ್ತಮ ಬೌಲಿಂಗ್ ಮಾಡಿದರೇ ಜಸಪ್ರಿತ್ ಬುಮ್ರಾ ಡೆತ್ ಓವರ್ ಹಾಗೂ ಮಿಡಲ್ ಓವರ್ ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ. ಈ ಮೂವರಿಗೂ ಸಹ ಉತ್ತಮ ಅನುಭವವಿದೆ. ವಿಶ್ವಕಪ್ ನಲ್ಲಿ ಅನುಭವಿ ಬೌಲರ್ ಗಳಿದ್ದರೇ ಅದು ತಂಡದ ಹಿತದೃಷ್ಟಿಯಿಂದ ಉತ್ತಮ. ಹೇಗಿದ್ದರೂ ಬ್ಯಾಕ್ ಅಪ್ ಬೌಲರ್ ಗಳಾಗಿ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಇರುತ್ತಾರೆ. ಸ್ಪಿನ್ನರ್ ಆಗಿ ಯುಜವೇಂದ್ರ ಚಾಹಲ್ ಇದ್ದಾರೆ. ಹಾಗಾಗಿ ಭಾರತ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ. ಆದರೆ ಅಭಿಮಾನಿಗಳು ಹರ್ಷಲ್ ರವರನ್ನು ಹಾಕಿಕೊಳ್ಳಿ, ಶಮಿ ಬೇಡ ಎಂದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.