ಅಂದು ಒಂದು ಲಕ್ಷ ಕೊಟ್ಟರೆ ಬಿಗ್ ಬಾಸ್ ಗೆ ಹೋಗ್ತೇನೆ ಎಂದಿದ್ದ ಆರ್ಯವರ್ಧನ್, ಈಗ ಪಡೆಯುತ್ತಿರುವ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

ಅಂದು ಒಂದು ಲಕ್ಷ ಕೊಟ್ಟರೆ ಬಿಗ್ ಬಾಸ್ ಗೆ ಹೋಗ್ತೇನೆ ಎಂದಿದ್ದ ಆರ್ಯವರ್ಧನ್, ಈಗ ಪಡೆಯುತ್ತಿರುವ ಚಿಲ್ಲರೆ ಸಂಭಾವನೆ ಎಷ್ಟು ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂತೂ ಇಂತೂ ಕನ್ನಡ ಮಾಧ್ಯಮ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಈ ಬಾರಿ ಓ ಟಿ ಟಿ ಅಂದರೆ ವೂಟ್ ಅಪ್ಲಿಕೇಶನ್ ನಲ್ಲಿ ದಿನಪೂರ್ತಿ ಎಂದರೆ 24 ಗಂಟೆಗಳ ಕಾಲ ಪ್ರಸಾರ ಆರಂಭಿಸಿದೆ. ಅದರಲ್ಲಿ ವಿಶೇಷವಾಗಿ ಈ ಬಾರಿ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸದ್ದು ಮಾಡಿರುವ ಕೆಲವು ಜನಪ್ರಿಯ ವ್ಯಕ್ತಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಅದರಲ್ಲೂ ವಿಶೇಷವಾಗಿ ಸಂಖ್ಯಾಶಾಸ್ತ್ರದ ಮೂಲಕ ಸುದ್ದಿ ವಾಹಿನಿಗಳಲ್ಲಿ ದೊಡ್ಡಮಟ್ಟದಲ್ಲಿ ಜನಪ್ರಿಯ ರಾಗಿದ್ದ ಆರ್ಯವರ್ಧನ ರವರು ಈ ಬಾರಿ ಮೊದಲನೇ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. 42 ದಿನಗಳ ಈ ಚುಟುಕು ಬಿಗ್ ಬಾಸ್ ನಲ್ಲಿ ಅವರು ಈ ಬಾರಿ ಗೆಲ್ಲುತ್ತಾರ ಎಂಬುದನ್ನು ಕಾದು ನೋಡಬೇಕಾಗಿದೆ. ತಮ್ಮ ಸಂಖ್ಯಾಶಾಸ್ತ್ರದ ಮೂಲಕ ಬೇರೆಯವರ ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದ ಆರ್ಯವರ್ಧನ್ ಗುರೂಜಿ ರವರು ಈ ಬಾರಿ ಬಿಗ್ ಬಾಸ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಇದನ್ನು ಓದಿ. ಈ ಬಾರಿ ಗೆಲ್ಲುವವರು ಯಾರು ಎಂಬುದನ್ನು ಬಿಚ್ಚಿಟ್ಟ ಆರ್ಯವರ್ಧನ್: ನಂಬರ್ ಗುರೂಜಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಅವರು ಅಲ್ಲವಂತೆ

ಕೆಲವು ವರ್ಷಗಳ ಹಿಂದಷ್ಟೇ ಆರ್ಯವರ್ಧನ್ ಗುರೂಜಿ ರವರು ಬಿಗ್ ಬಾಸ್ ನವರು ನನಗೆ ಒಂದು ಲಕ್ಷ ರೂಪಾಯಿ ದಿನಕ್ಕೆ ಸಂಭಾವನೆ ಕೊಟ್ಟರೆ ನಾನು ಖಂಡಿತವಾಗಿ ಬಿಗ್ ಬಾಸ್ ಮನೆಗೆ ಹೋಗುತ್ತೇನೆ ಎಂಬುದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಆರ್ಯವರ್ಧನ್ ಗುರೂಜಿ ಅವರು ಈ ಮಾತನ್ನು ಹೇಳಿದ್ದು ದೊಡ್ಡ ಮಟ್ಟದ ವಿವಾದಕ್ಕೆ ಕೂಡ ಕಾರಣವಾಗಿತ್ತು. ಇದಾದ ನಂತರ ಇದರ ಕುರಿತಂತೆ ಯಾವುದೇ ಸುದ್ದಿಗಳು ಅವರಿಂದಾಗಲಿ ವಾಹಿನಿಯ ಕಡೆಯಿಂದಾಗಲಿ ಬಂದಿರಲಿಲ್ಲ.

ಆದರೆ ಈಗ ಪ್ರಾರಂಭವಾಗಿರುವ ಬಿಗ್ ಬಾಸ್ನ ಓಟಿಟಿ ಸೀಸನ್ 1ರ ಮೊದಲ ಅಭ್ಯರ್ಥಿಯಾಗಿ ಬಿಗ್ ಬಾಸ್ ಮನೆಗೆ ಒಳಗೆ ಹೋಗಿರುವ ಆರ್ಯವರ್ಧನ್ ಗುರೂಜಿ ಅವರು ಈಗ ಒಂದು ದಿನಕ್ಕೆ ಪಡೆಯುತ್ತಿರುವ ಸಂಭವನ ಕೇಳಿದರೆ ನೀವು ಕೂಡ ಆಶ್ಚರ್ಯ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದನ್ನು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಹೌದು ಸ್ನೇಹಿತರೆ, ಆರ್ಯವರ್ಧನ್ ಗುರೂಜಿ ಈ ಬಾರಿಯ ಬಿಗ್ ಬಾಸ್ ಓಟಿಟಿ ಸೀಸನ್ 1 ರ ಅಭ್ಯರ್ಥಿಯಾಗಿ ದಿನವೊಂದಕ್ಕೆ ಪಡೆಯುತ್ತಿರುವ ಸಂಭಾವನೆ ಕೇವಲ 40,000 ಮಾತ್ರ. ಇದನ್ನು ಓದಿ. ಮನೆಯಲ್ಲಿ ಯಾರು ಬೇಕಾದರೂ ಸರಿ, ಆದರೆ ಆ ಒಬ್ಬ ಸ್ಪರ್ದಿ ಇರಬಾರದಿತ್ತು ಎಂದ ಜನತೆ: ಯಾಕೆ ಗೊತ್ತೇ?? ಜನರು ರೊಚ್ಚಿಗೆದ್ದಿದ್ದೂ ಯಾಕೆ ಗೊತ್ತೇ??

ಖಂಡಿತವಾಗಿ ಇದೊಂದು ದೊಡ್ಡ ಮಟ್ಟದ ಮೊತ್ತವೇ ಸರಿ ಆದರೆ, ಅಂದು ಆರ್ಯವರ್ಧನ್ ಗುರೂಜಿ ರವರು ಒಂದು ಲಕ್ಷ ದಿನಕ್ಕೆ ಕೊಟ್ಟರೆ ಮಾತ್ರ ನಾನು ಹೋಗುತ್ತೇನೆ ಎಂಬುದಾಗಿ ಹೇಳಿದ್ದರು ಹೀಗಾಗಿ ಅಂದಿನ ಲೆಕ್ಕಾಚಾರಕ್ಕೆ ಹೋಲಿಸಿದರೆ ಆರ್ಯವರ್ಧನ್ ಗುರೂಜಿ ಅವರು 40,000 ರೂಪಾಯಿಗೆ ಬಿಗ್ ಬಾಸ್ ಮನೆ ಒಳಗೆ ಹೋಗಿರುವ ಹಿನ್ನೆಲೆಯಲ್ಲಿ ನೆಟ್ಟಿಗರು ಅವರನ್ನು ಗೇಲಿ ಮಾಡಲು ಪ್ರಾರಂಭಿಸಿದ್ದಾರೆ.

ಇನ್ನು ಬಿಗ್ ಬಾಸ್ ಆರಂಭ ಆಗುವುದಕ್ಕೂ ಮುನ್ನವೇ ಈ ಬಿಗ್ ಬಾಸ್ ಅನ್ನು ಗೆಲ್ಲುವವರ ಸಂಖ್ಯಾಶಾಸ್ತ್ರದ ಲೆಕ್ಕಾಚಾರದಲ್ಲಿ ತಾನೇ ಇಲ್ಲ ಎಂಬುದಾಗಿ ಹೇಳಿ ಕೂಡ ಈಗ ಬಿಗ್ ಬಾಸ್ ಆರಂಭದಲ್ಲಿಯೇ ಸುದ್ದಿಯಾಗಿದ್ದಾರೆ. ಈಗಾಗಲೇ ಪ್ರಾರಂಭವಾಗಿರುವ ಬಿಗ್ ಬಾಸ್ ಕನ್ನಡ ಓ ಟಿ ಟಿ ಸೀಸನ್ 1 ನ್ನು ಯಾರು ಗೆಲ್ಲಬಹುದು ಅಥವಾ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂಬುದನ್ನು ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.