ಮನೆಯಲ್ಲಿ ಯಾರು ಬೇಕಾದರೂ ಸರಿ, ಆದರೆ ಆ ಒಬ್ಬ ಸ್ಪರ್ದಿ ಇರಬಾರದಿತ್ತು ಎಂದ ಜನತೆ: ಯಾಕೆ ಗೊತ್ತೇ?? ಜನರು ರೊಚ್ಚಿಗೆದ್ದಿದ್ದೂ ಯಾಕೆ ಗೊತ್ತೇ??

ಮನೆಯಲ್ಲಿ ಯಾರು ಬೇಕಾದರೂ ಸರಿ, ಆದರೆ ಆ ಒಬ್ಬ ಸ್ಪರ್ದಿ ಇರಬಾರದಿತ್ತು ಎಂದ ಜನತೆ: ಯಾಕೆ ಗೊತ್ತೇ?? ಜನರು ರೊಚ್ಚಿಗೆದ್ದಿದ್ದೂ ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಎನ್ನುವುದು ಬೇರೆ ಭಾಷೆಗಳಂತೆ ಕನ್ನಡದ ಕಿರುತೆರೆಯಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಹಾಗೂ ವೀಕ್ಷಕ ಬಳಗವನ್ನು ಹೊಂದಿರುವಂತಹ ಶ್ರೀಮಂತ ಹಾಗೂ ದೊಡ್ಡ ಮಟ್ಟದ ರಿಯಾಲಿಟಿ ಶೋ ಕಾರ್ಯಕ್ರಮ. ಈಗಾಗಲೇ ಎಂಟು ಸೀಸನ್ ಗಳನ್ನು ಕನ್ನಡದಲ್ಲಿ ಮುಗಿಸಿದೆ.

ಹೀಗಾಗಿ ಈ ಬಾರಿ ಆರಂಭವಾಗುವ ಸೀಸನ್ ಬಿಗ್ ಬಾಸ್ ಕನ್ನಡ ಸೀಸನ್ 9 ಆಗಿರುತ್ತದೆ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು ಆದರೆ ಈ ಬಾರಿ ಆರಂಭವಾಗಿದ್ದು ಬಿಗ್ ಬಾಸ್ ಕನ್ನಡ ಸೀಸನ್ 1. ಹೌದು ಗೆಳೆಯರೇ ಮೊದಲ ಬಾರಿಗೆ ಓಟಿಟಿ ಅಂದರೆ ವೂಟ್ ಅಪ್ಲಿಕೇಶನ್ ನಲ್ಲಿ ತೆಲುಗು ಹಾಗು ಹಿಂದಿ ಭಾಷೆಗಳಂತೆ 24 ಗಂಟೆಗಳ ಪ್ರಸಾರವನ್ನು ಹೊಂದಿರುವ ಕಾರ್ಯಕ್ರಮವಾಗಿದೆ. ಈಗಾಗಲೇ ಬೇರೆ ಭಾಷೆಗಳಲ್ಲಿ ಯಶಸ್ಸನ್ನು ಕಂಡಿರುವ ಈ ಕಾರ್ಯಕ್ರಮ ಮೊದಲ ಆವೃತ್ತಿಯ ಪ್ರಸಾರವನ್ನು ಈಗ ಆರಂಭಿಸಿದ್ದು ಈ ಕಾರ್ಯಕ್ರಮಕ್ಕೆ ಕೂಡ ಕಿಚ್ಚ ಸುದೀಪ್ ರವರ ನಿರೂಪಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನು ಓದಿ. ಈ ಬಾರಿ ಗೆಲ್ಲುವವರು ಯಾರು ಎಂಬುದನ್ನು ಬಿಚ್ಚಿಟ್ಟ ಆರ್ಯವರ್ಧನ್: ನಂಬರ್ ಗುರೂಜಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಅವರು ಅಲ್ಲವಂತೆ

ಪ್ರತಿಯೊಂದು ಬಿಗ್ ಬಾಸ್ ಸೀಸನ್ ಆರಂಭವಾದಾಗಲು ಕೂಡ ಕೆಲವೊಮ್ಮೆ ಪ್ರೇಕ್ಷಕರು ಕೆಲವೊಂದು ಸ್ಪರ್ದಿಗಳನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಮೆಚ್ಚುಗೆಯನ್ನು ಸೂಚಿಸುತ್ತಾರೆ. ಇನ್ನು ಕೆಲವು ಸ್ಪರ್ಧಿಗಳನ್ನು ಆಯ್ಕೆ ಮಾಡಿರುವ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಈ ಬಾರಿ ಒಬ್ಬ ಸ್ಪರ್ಧಿಯನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಬಿಗ್ ಬಾಸ್ ಪ್ರೇಕ್ಷಕ ಕೂಡ ವಾಹಿನಿಯನ್ನು ಹಾಗೂ ಕಾರ್ಯಕ್ರಮದ ಆಯೋಜಕರನ್ನು ಬಯ್ಯುತ್ತಿದ್ದಾರೆ.

ಸ್ನೇಹಿತರೆ ಈ ಬಾರಿಯ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಸೋನು ಶ್ರೀನಿವಾಸ ಗೌಡ ಅವರನ್ನು ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೂಡ ವಾಹಿನಿಯ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಯೊಬ್ಬರೂ ಕೂಡ ಕಾರ್ಯಕ್ರಮದ ಮೇಲೆ ಹಾಗೂ ವಾಹಿನಿಯ ಮೇಲೆ ಇರುವಂತಹ ಗೌರವವನ್ನು ನೀವು ಕಳೆದುಕೊಂಡಿದ್ದೀರಿ ಎನ್ನುವುದಾಗಿ, ಪೋಸ್ಟ್ಗಳ ಕಾಮೆಂಟ್ ಸ್ಥಳದಲ್ಲಿ ಕಾಮೆಂಟ್ ಮೂಲಕ ತಮ್ಮ ಅಸಮಾಧಾನದ ಹೊಗೆಯನ್ನು ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ.

ಕಾಮೆಂಟ್ ಮೂಲಕ ತಿಳಿದು ಬಂದಿರುವ ಹಿನ್ನೆಲೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ಕುರಿತಂತೆ ಕೆಲವೊಂದು ಅಹಿತಕರ ಫೋಟೋಗಳು ಹಾಗೂ ವಿಡಿಯೋಗಳು ಕೆಲವು ಸಮಯಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಇದೇ ಕಾರಣಕ್ಕಾಗಿ ಅಂತಹ ವ್ಯಕ್ತಿಗಳನ್ನು ಯಾಕೆ ಕಾರ್ಯಕ್ರಮಕ್ಕೆ ಆಯ್ಕೆ ಮಾಡುತ್ತೀರಿ ಎಂಬುದಾಗಿ ಕಾಮೆಂಟ್ ನಲ್ಲಿ ಕಾರ್ಯಕ್ರಮದ ರೆಗ್ಯುಲರ್ ವೀಕ್ಷಕರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಕೆಲವರಂತೂ ಈ ಬಾರಿಯ ಕಾರ್ಯಕ್ರಮವನ್ನು ನಾವು ನೋಡುವುದಿಲ್ಲ ಎಂಬುದಾಗಿ ಕೂಡ ಕಾಮೆಂಟ್ ಮಾಡಿರುವುದು ಕಂಡು ಬಂದಿದೆ. ಇದನ್ನು ಓದಿ. ಈ ಬಾರಿ ಗೆಲ್ಲುವವರು ಯಾರು ಎಂಬುದನ್ನು ಬಿಚ್ಚಿಟ್ಟ ಆರ್ಯವರ್ಧನ್: ನಂಬರ್ ಗುರೂಜಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಅವರು ಅಲ್ಲವಂತೆ

ಹೀಗಾಗಿ ಈ ಬಾರಿ ಸೋನು ಶ್ರೀನಿವಾಸ್ ಗೌಡ ಅವರನ್ನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧಿಯಾಗಿ ಆಯ್ಕೆ ಮಾಡಿರುವುದು ವ್ಯಾಪಕವಾಗಿ ಜನರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬುದು ಇದರಲ್ಲಿ ದಟ್ಟವಾಗಿ ಕಂಡುಬರುತ್ತದೆ. ಕಾಮೆಂಟ್ ನಲ್ಲಿ ಪ್ರೇಕ್ಷಕರು ಹಿಗ್ಗಾಮುಗ್ಗ ಸೋನು ಶ್ರೀನಿವಾಸ್ ಗೌಡ ಅವರ ಆಯ್ಕೆಯನ್ನು ವಿರೋಧಿಸಿದ್ದಾರೆ ಎಂಬುದು ಕಾಮೆಂಟ್ ನಲ್ಲಿ ಅವರು ಬಳಸಿರುವ ಪದಗಳ ಆಯ್ಕೆಯ ಮೂಲಕ ನಾವು ಕಂಡುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ವಾಹಿನಿ ಪ್ರೇಕ್ಷಕರ ಅಸಮಾಧಾನದ ಕುರಿತಂತೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಒಟ್ಟಾರೆಯಾಗಿ ಸದ್ಯದ ಪರಿಸ್ಥಿತಿಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ಆಯ್ಕೆ ಎನ್ನುವುದು ಪ್ರತಿಯೊಬ್ಬರ ಅಸಮಾಧಾನಕ್ಕೆ ಗುರಿಯಾಗಿದೆ.