ಈ ಬಾರಿ ಗೆಲ್ಲುವವರು ಯಾರು ಎಂಬುದನ್ನು ಬಿಚ್ಚಿಟ್ಟ ಆರ್ಯವರ್ಧನ್: ನಂಬರ್ ಗುರೂಜಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಅವರು ಅಲ್ಲವಂತೆ
ಈ ಬಾರಿ ಗೆಲ್ಲುವವರು ಯಾರು ಎಂಬುದನ್ನು ಬಿಚ್ಚಿಟ್ಟ ಆರ್ಯವರ್ಧನ್: ನಂಬರ್ ಗುರೂಜಿ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?? ಅವರು ಅಲ್ಲವಂತೆ
ನಮಸ್ಕಾರ ಸ್ನೇಹಿತರೇ ಕೊನೆಗೂ ಎಲ್ಲರೂ ಕಾಯುತ್ತಿದ್ದ ಕನ್ನಡದ ಅತ್ಯಂತ ಮನೋರಂಜನಾತ್ಮಕ ಕಾರ್ಯಕ್ರಮ ಆಗಿರುವ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಪ್ರಾರಂಭವಾಗಿದೆ. ಈ ಬಾರಿ ಹಿಂದಿಯಂತೆ ಕನ್ನಡದಲ್ಲಿ ಕೂಡ ಈ ಕಾರ್ಯಕ್ರಮ ಪ್ರಾರಂಭವಾಗಿದ್ದು ಈ ಕಾರ್ಯಕ್ರಮವನ್ನು ಕೂಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಿರೂಪಕನಾಗಿ ನಡೆಸಿಕೊಡಲಿದ್ದಾರೆ. ವೂಟ್ ಅಪ್ಲಿಕೇಶನ್ ನಲ್ಲಿ ಎರಡು ನಿಮಿಷಗಳ ಅಂತರದಲ್ಲಿ 24 ಗಂಟೆಗಳ ಕಾಲ ಈ ಕಾರ್ಯಕ್ರಮ ಪ್ರಸಾರವಾಗಲಿದೆ ಎಂಬುದು ಮತ್ತೊಂದು ವಿಶೇಷ ವಿಚಾರ.
ಇನ್ನು ಈ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅಭ್ಯರ್ಥಿಯಾಗಿ ತಮ್ಮ ಸಂಖ್ಯಾಶಾಸ್ತ್ರದಿಂದ ಟಿವಿ ಮಾಧ್ಯಮಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರಚಾರವನ್ನು ಪಡೆದುಕೊಂಡಿದ್ದ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಕೂಡ ಅಭ್ಯರ್ಥಿಯಾಗಿ ಮನೆಯೊಳಗೆ ಹೋಗಿದ್ದಾರೆ. ಸಂಖ್ಯೆ ಎಂದರೆ ನಾನು ನಾನು ಅಂದ್ರೆ ಸಂಖ್ಯೆ ಎಂದು ತಮ್ಮ ಕುರಿತಂತೆ ಬೇಜಾನ್ ಹೊಗಳುತ್ತಿದ್ದ ಆರ್ಯವರ್ಧನ್ ರವರು ಈ ಬಾರಿ ಈ ಬಿಗ್ ಬಾಸ್ ಅನ್ನು ಯಾರು ಗೆಲ್ಲಲಿದ್ದಾರೆ ಎಂಬುದನ್ನು ಕೂಡ ಬಹಿರಂಗವಾಗಿ ಹೇಳಿದ್ದಾರೆ.
ಈ ಬಾರಿಯ ಓ ಟಿ ಟಿ ಬಿಗ್ ಬಾಸ್ ನ ಮೊದಲನೇ ಅಭ್ಯರ್ಥಿಯಾಗಿ ಆರ್ಯವರ್ಧನ್ ಅವರೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಕೇವಲ ಇಷ್ಟು ಮಾತ್ರವಲ್ಲದೆ ಬಿಗ್ ಬಾಸ್ ನಲ್ಲಿಯೂ ಕೂಡ ತಮ್ಮ ಸಂಖ್ಯಾ ಶಾಸ್ತ್ರದ ಭವಿಷ್ಯವನ್ನು ಈಗಾಗಲೇ ನುಡಿದಿದ್ದಾರೆ. ಹೌದು ಅವರು ಹೇಳಿರುವ ಸಂಖ್ಯೆಯಲ್ಲಿ ಕಾರ್ಯಕ್ರಮವನ್ನು ಗೆಲ್ಲುವ ಅವಕಾಶ ಅವರಿಗೆ ಇಲ್ಲ ಎಂಬುದಾಗಿ ತಿಳಿದು ಬಂದಿದ್ದು ನೆಟ್ಟಿಗರು ಈ ಕುರಿತಂತೆ ಆರ್ಯವರ್ಧನ್ ರವರ ಕಾಲೆಳಿದಿದ್ದಾರೆ. ಹಾಗಿದ್ದರೆ ಆರ್ಯವರ್ಧನ್ ರವರು ಈ ಬಾರಿಯ ಈ ಓ ಟಿ ಟಿ ಬಿಗ್ ಬಾಸ್ ಅನ್ನು ಗೆಲ್ಲುವ ಸಾಧ್ಯತೆ ಹೊಂದಿರುವ ಮೂರು ಸಂಖ್ಯೆಯನ್ನು ಹಾಗೂ ಆ ಸಂಖ್ಯೆಯಲ್ಲಿ ಇರುವ ಅಭ್ಯರ್ಥಿಗಳು ಯಾರು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಬಿಗ್ ಬಾಸ್ ಮನೆಗೆ ಕಾಲಿಡುತ್ತಾ ಆರ್ಯವರ್ಧನ್ ರವರು ಈಗಾಗಲೇ ಮೂರು ನಂಬರ್ ಅನ್ನು ಸೂಚಿಸಿದ್ದು, ಆ ಕ್ರಮ ಸಂಖ್ಯೆಯಲ್ಲಿ ಬಂದಿರುವ ಅಭ್ಯರ್ಥಿಗಳು ಖಂಡಿತವಾಗಿ ಗೆಲ್ಲಲಿದ್ದಾರೆ ಎಂಬುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಿದ್ದಾರೆ. ಹಾಗಿದ್ದರೆ ಆ ಸಂಖ್ಯೆಗಳು ಯಾವುವು ಎಂಬುದನ್ನು ನೋಡುವುದಾದರೆ 3 5 6. ಹೌದು ಈ ಕ್ರಮ ಸಂಖ್ಯೆಯಲ್ಲಿ ಬಿಗ್ ಬಾಸ್ ಮನೆಗೆ ಕಾಲಿಟ್ಟವರು ಈ ಬಾರಿ ಬಿಗ್ ಬಾಸ್ ಅನ್ನು ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಆರ್ಯವರ್ಧನ್ ಹೇಳಿದ್ದಾರೆ.
ಹಾಗಿದ್ದರೆ ಈ ಕ್ರಮ ಸಂಖ್ಯೆಯಲ್ಲಿ ಬಿಗ್ ಬಾಸ್ ಮನೆಗೆ ಕಾಲಿಟ್ಟವರು ಯಾರು ಎಂಬುದನ್ನು ನೋಡುವುದಾದರೆ, ಮೂರನೇ ಕ್ರಮಾಂಕದಲ್ಲಿ ತುಳು ಸಿನಿಮಾಗಳಲ್ಲಿ ಹಾಗೂ ಆರ್ ಜೆ ಆಗಿ ಕಾರ್ಯನಿರ್ವಹಿಸುತ್ತಿರುವ ರೂಪೇಶ್ ಶೆಟ್ಟಿ ಕಾಣಿಸಿಕೊಳ್ಳುತ್ತಾರೆ. ಇನ್ನು ಐದನೇ ಕ್ರಮಾಂಕದಲ್ಲಿ ಸಾನಿಯಾ ಗೌಡ ಹಾಗೂ 6ನೇ ಕ್ರಮಾಂಕದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ರವರು ಕೂಡ ಕಾಣಿಸಿಕೊಂಡಿದ್ದಾರೆ ಹೀಗಾಗಿ ಈ ಮೂವರನ್ನು ಕಾರ್ಯಕ್ರಮವನ್ನು ಗೆಲ್ಲುವ ಸಂಭಾವ್ಯರು ಎಂಬುದಾಗಿ ಪ್ರತಿಪಾದಿಸಿದ್ದಾರೆ.
ಈಗಾಗಲೇ ನೀವು ತಿಳಿದಿರುವ ಹಾಗೆ ಐಪಿಎಲ್ ಸಂದರ್ಭದಲ್ಲಿ ಕೂಡ ಕೆಲವೊಂದು ಪ್ರೆಡಿಕ್ಷನ್ ಅನ್ನು ಪಂದ್ಯ ಪ್ರಾರಂಭವಾಗುವುದಕ್ಕೆ ಮುನ್ನ ನೀಡಿ ಅದು ಹೆಚ್ಚಿನ ಮಟ್ಟಿಗೆ ಸುಳ್ಳಾಗಿದ್ದು ಕೂಡ ಈ ಹಿಂದೆ ಕೇಳಿ ಬಂದಿದ್ದು ನೆಟ್ಟಿಗರು ಈ ಬಾರಿ ಕೂಡ ನಿಮ್ಮ ಊಹೆ ಐಪಿಎಲ್ ರೀತಿ ನೇ ಆಗುತ್ತಾ ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ಅವರನ್ನು ರೇಗಿಸಿದ್ದಾರೆ. ಆರ್ಯವರ್ಧನ್ ಅವರ ಲೆಕ್ಕಾಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.