ಫಾರ್ಮ್ ನಲ್ಲಿ ಇಲ್ಲದೆ ಇದ್ದರೂ ನೇರವಾಗಿ ಏಷ್ಯಾ ಕಪ್ ಗೆ ಬರುತ್ತಿರುವ ಕೊಹ್ಲಿರವರ ಏಷ್ಯಾ ಕಪ್ ಪಾತ್ರದ ಕುರಿತು, ಶಾಕಿಂಗ್ ಹೇಳಿಕೆ ಕೊಟ್ಟ ಪಾರ್ಥಿವ್. ಏನು ಗೊತ್ತೇ??

ಫಾರ್ಮ್ ನಲ್ಲಿ ಇಲ್ಲದೆ ಇದ್ದರೂ ನೇರವಾಗಿ ಏಷ್ಯಾ ಕಪ್ ಗೆ ಬರುತ್ತಿರುವ ಕೊಹ್ಲಿರವರ ಏಷ್ಯಾ ಕಪ್ ಪಾತ್ರದ ಕುರಿತು, ಶಾಕಿಂಗ್ ಹೇಳಿಕೆ ಕೊಟ್ಟ ಪಾರ್ಥಿವ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯ ಭಾರತ ತಂಡದ ರನ್ ಮಶೀನ್ ಎಂದೇ ಖ್ಯಾತರಾದ ವಿರಾಟ್ ಕೊಹ್ಲಿರವರ ಫಾರ್ಮ್ ಈಗ ಕಳಾಹೀನವಾಗಿದೆ. ವಿರಾಟ್ ಕೊಹ್ಲಿ ಎಂದಿನಂತೆ ಮರಳಿ ಫಾರ್ಮ್ ಗೆ ಮರಳಲಿ ಎಂಬುದು ಅನೇಕ ಅಭಿಮಾನಿಗಳ ಆಸೆಯಾಗಿದೆ. ಸದ್ಯ ಕುಟುಂಬದ ಜೊತೆ ಅತಿ ದೊಡ್ಡ ವಿಶ್ರಾಂತಿಯಲ್ಲಿರುವ ವಿರಾಟ್ ಕೊಹ್ಲಿ, ಜಿಂಬಾಬ್ವೆ ಪ್ರವಾಸಕ್ಕೆ ಪುನಃ ತಂಡ ಕೂಡಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು.ಆದರೇ ಜಿಂಬಾಬ್ವೆ ಪ್ರವಾಸದಲ್ಲಿಯೂ ಸಹ ಕಾಣಿಸಿಕೊಂಡಿಲ್ಲ. ನೆರವಾಗಿ ಏಷ್ಯಾ ಕಪ್ ವೇಳೆ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಮರಳುತ್ತಾರೆ.

ಇನ್ನು ವಿರಾಟ್ ಕೊಹ್ಲಿ ಸ್ಥಾನದ ಬಗ್ಗೆ ಅಚ್ಚರಿ ಎಂಬ ಹೇಳಿಕೆ ನೀಡಿರುವ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಸದ್ಯ ಭಾರತ ತಂಡದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಗಾಯದ ಪರಿಸ್ಥಿತಿಯಿಂದ ಏಷ್ಯಾ ಕಪ್ ವೇಳೆ ತಂಡಕ್ಕೆ ಮರಳುವ ಸಾಧ್ಯತೆ ಕಡಿಮೆ ಇದೆ ಹೇಳಲಾಗಿದೆ.

ಹೀಗಾಗಿ ಅವರ ಅನುಪಸ್ಥಿತಿಯಲ್ಲಿ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ. ಒಂದು ವೇಳೆ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಿದ್ದೇ ಆದರೇ ಖಂಡಿತ ಅದು ಭಾರತ ತಂಡಕ್ಕೆ ವರದಾನವಾಗಲಿದೆ. ಏಕಾಂಗಿಯಾಗಿ ಭಾರತ ತಂಡವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಭಾರತ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗೆಲ್ಲಬೇಕೆಂದರೇ ಮುಖ್ಯವಾಗಿ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ