ಏಷ್ಯಾ ಕಪ್ ನಲ್ಲಿ ದಿನೇಶ್ ಕಾರ್ತಿಕ್ ರವರ ಸ್ಥಾನ ಫಿಕ್ಸ್ ಆಗುತ್ತಿದ್ದಂತೆ ಇಬ್ಬರು ಸ್ಟಾರ್ ಆಟಗಾರರು ಮನೆಗೆ ಖಚಿತ: ಯಾರ್ಯಾರು ಗೊತ್ತೇ??

ಏಷ್ಯಾ ಕಪ್ ನಲ್ಲಿ ದಿನೇಶ್ ಕಾರ್ತಿಕ್ ರವರ ಸ್ಥಾನ ಫಿಕ್ಸ್ ಆಗುತ್ತಿದ್ದಂತೆ ಇಬ್ಬರು ಸ್ಟಾರ್ ಆಟಗಾರರು ಮನೆಗೆ ಖಚಿತ: ಯಾರ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯದ ಮಟ್ಟಿಗೆ ವಿದೇಶಿ ಸರಣಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಚೆನ್ನಾಗಿ ಪ್ರದರ್ಶನ ನೀಡುತ್ತಿದ್ದು ಬಿಸಿಸಿಐ ಆಯ್ಕೆ ಗಾರರ ಮುಂದೆ ಯಾರನ್ನು ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ತಂಡಗಳಿಗೆ ಸೆಲೆಕ್ಟ್ ಮಾಡಬೇಕು ಎನ್ನುವ ದೊಡ್ಡ ಗೊಂದಲವೇ ಮೂಡಿ ನಿಂತಿದೆ ಎಂದರೆ ತಪ್ಪಾಗಲಾರದು. ಅದರಲ್ಲೂ ಇತ್ತೀಚಿಗಷ್ಟೇ ಕೇಳಿ ಬಂದಿರುವ ಸುದ್ದಿಯ ಪ್ರಕಾರ ಏಷ್ಯಾ ಕಪ್ ನಲ್ಲಿ ಆಯ್ಕೆ ಮಾಡುವ ಆಟಗಾರರನ್ನೇ ಟಿ 20 ವಿಶ್ವಕಪ್ ನಲ್ಲಿ ಕೂಡ ಆಯ್ಕೆ ಮಾಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಐಸಿಸಿ ನಿಯಮದ ಪ್ರಕಾರ ಆಗಸ್ಟ್ 7 ತಂಡವನ್ನು ಪ್ರಕಟಿಸಲು ಇರುವ ಕೊನೆಯ ದಿನಾಂಕವಾಗಿದೆ. ಹೀಗಾಗಿ ಈ ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆಯುತ್ತಾರೋ ಅವರು ಏಷ್ಯಾಕಪ್ ನಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದರೆ ಟಿ 20 ವಿಶ್ವಕಪ್ ನಲ್ಲಿ ಆಯ್ಕೆ ಆಗಬಹುದಾಗಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ವಿರಾಟ್ ಕೊಹ್ಲಿ ರೋಹಿತ್ ಶರ್ಮ ಜಸ್ಪ್ರೀತ್ ಭುಮ್ರ ರಿಷಬ್ ಪಂತ್ ಹಾರ್ದಿಕ್ ಪಾಂಡ್ಯ ಹಾಗೂ ದಿನೇಶ್ ಕಾರ್ತಿಕ್ ರವರು ತಂಡದಲ್ಲಿ ಸ್ಥಾನ ಪಡೆಯುವುದು ಕನ್ಫರ್ಮ್ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ತಂಡಕ್ಕೆ ಮರು ಆಯ್ಕೆಯಾಗಿ ಅತ್ಯುತ್ತಮ ಪ್ರದರ್ಶನವನ್ನು ತೋರ್ಪಡಿಸುತ್ತಿರುವ ದಿನೇಶ್ ಕಾರ್ತಿಕ್ ರವರು ತಂಡಕ್ಕೆ ಬಂದರೆ ಇಬ್ಬರು ಆಟಗಾರರು ಹೊರಹೋಗುವುದು ಗ್ಯಾರಂಟಿ ಎಂಬುದಾಗಿ ಬಿಸಿಸಿಐ ಒಲಮೂಲಗಳು ಮಾತನಾಡಿಕೊಳ್ಳುತ್ತಿವೆ.

ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ರಿಷಬ್ ಪಂತ್ ರವರು ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದಾರೆ ಹಾಗೂ ದಿನೇಶ್ ಕಾರ್ತಿಕ್ ರವರನ್ನು ಕೂಡ ಸೇರಿಸಿಕೊಂಡರೆ ಅವರು ಕೂಡ ಬ್ಯಾಕಪ್ ಆಗಿರುತ್ತಾರೆ. ಇನ್ನು ಇದರ ನಡುವೆ ಕೆಎಲ್ ರಾಹುಲ್ ರವರು ಕೂಡ ತಂಡಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಮತ್ತಿಬ್ಬರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿರುವ ಇಶಾನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ತಂಡದಿಂದ ಗೇಟ್ ಪಾಸ್ ಪಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಕ್ರಿಕೆಟ್ ಮೂಲಗಳು ತಿಳಿಸಿವೆ.