ಕೊಹ್ಲಿ,ಸೂರ್ಯ,ಪಂತ್, ಹಾರ್ದಿಕ ಇವರ್ಯಾರು ಅಲ್ಲ, ಭಾರತ ತಂಡ ಏಷ್ಯಾ ಕಪ್ ಗೆಲ್ಲಬೇಕು ಆತನೊಬ್ಬ ಇರಲೇ ಬೇಕಂತೆ. ಯಾರು ಗೊತ್ತೇ??
ಕೊಹ್ಲಿ,ಸೂರ್ಯ,ಪಂತ್, ಹಾರ್ದಿಕ ಇವರ್ಯಾರು ಅಲ್ಲ, ಭಾರತ ತಂಡ ಏಷ್ಯಾ ಕಪ್ ಗೆಲ್ಲಬೇಕು ಆತನೊಬ್ಬ ಇರಲೇ ಬೇಕಂತೆ. ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಐಪಿಎಲ್ ಮುಗಿಸಿದ ನಂತರ ಆಡಿರುವಂತಹ ಬಹುತೇಕ ಎಲ್ಲಾ ಸರಣಿಗಳಲ್ಲಿಯೂ ಕೂಡ ಗೆಲುವನ್ನು ಸಾಧಿಸಿದೆ ಎಂಬುದಾಗಿ ಹೇಳಬಹುದಾಗಿದೆ. ಅದರಲ್ಲೂ ಪ್ರಮುಖವಾಗಿ ವಿದೇಶಿ ನೆಲೆಗಳಲ್ಲಿ ಅಂದರೆ ಐರ್ಲೆಂಡ್ ಇಂಗ್ಲೆಂಡ್ ಹಾಗೂ ಸದ್ಯಕ್ಕೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡ ಅಮೋಘವಾದ ಪ್ರದರ್ಶನವನ್ನು ನೀಡುತ್ತಿದೆ. ವಿದೇಶಿ ಸರಣಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡ ಅತ್ಯದ್ಭುತ ಪ್ರದರ್ಶನವನ್ನು ನೀಡುತ್ತಿರುವುದು ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ನಿಜಕ್ಕೂ ತಂಡದ ಪಾಲಿಗೆ ಉತ್ತಮವಾಗಿದೆ ಎಂದು ಹೇಳಬಹುದಾಗಿದೆ.
ಇನ್ನು ಇದೇ ತಿಂಗಳ ಕೊನೆಯಲಿ ಹಾಗೂ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಮೆಂಟ್ ಗಳು ಭಾರತದ ದೃಷ್ಟಿಕೋನದಲ್ಲಿ ಸಾಕಷ್ಟು ಪ್ರಮುಖವಾಗಿದೆ. ಯಾಕೆಂದರೆ ಕಳೆದ ಬಾರಿ ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ನೌಕೌಟ್ ಹಂತಕ್ಕೆ ತೇರ್ಗಡೆಯಾಗಲು ವಿಫಲವಾಗಿತ್ತು. ಹೀಗಾಗಿ ಕೆಲವೊಂದು ಆಟಗಾರರನ್ನು ಟಿ ಟ್ವೆಂಟಿ ವಿಶ್ವಕಪ್ ನಲ್ಲಿ ಆಯ್ಕೆ ಮಾಡುವುದು ಪ್ರಮುಖವಾಗಿದ್ದು ಪಾಕಿಸ್ತಾನ ಮೂಲದ ಕ್ರಿಕೆಟಿಗ ಆಗಿರುವ ಧಾನಿಷ್ ಕನೇರಿಯ ಈ ಒಬ್ಬ ಆಟಗಾರ ಖಂಡಿತವಾಗಿ ಈ ಎರಡು ಟೂರ್ನಮೆಂಟ್ಗಳಲ್ಲಿ ಇರಲೇಬೇಕು ಎಂಬುದಾಗಿ ಪ್ರತಿಪಾದಿಸಿದ್ದಾರೆ.
ಹೌದು ಗೆಳೆಯರೇ ಅವರಿನ್ಯಾರು ಅಲ್ಲ ಭಾರತೀಯ ಕ್ರಿಕೆಟ್ ತಂಡದ ನಾಯಕ ಆಗಿರುವ ರೋಹಿತ್ ಶರ್ಮ. ರೋಹಿತ್ ಶರ್ಮಾ ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ ಟ್ವೆಂಟಿ ಪದ್ಯದಲ್ಲಿ ಇಂಜುರಿಯಾಗಿದ್ದು, ಬೇಕಾದರೆ ಉಳಿದ ಎರಡು ಪಂದ್ಯಗಳಿಂದ ವಿರಾಮವನ್ನು ತೆಗೆದುಕೊಂಡು ನೇರವಾಗಿ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಅನ್ನು ಆಡಲಿ ಆದರೆ, ಈ ಎರಡು ಟೂರ್ನಮೆಂಟ್ಗಳಲ್ಲಿ ಅವರು ಇರಲೇಬೇಕು ಎಂಬುದಾಗಿ ದಾನೇಶ್ ಕನೇರಿಯಾ ಹೇಳಿದ್ದಾರೆ.