ಕೊನೆಗೂ ಅಂದುಕೊಂಡಂತೆ ಆಯ್ತು: ರಾಹುಲ್ ರವರಿಗೆ ಬಿಸಿಸಿಐ ಕಡೆಯಿಂದ ಮೊದಲ ಶಾಕ್: ಹಾರ್ಧಿಕ್ ಪಾಂಡ್ಯಗೆ ಬಂಪರ್. ಏನು ಗೊತ್ತೇ??

ಕೊನೆಗೂ ಅಂದುಕೊಂಡಂತೆ ಆಯ್ತು: ರಾಹುಲ್ ರವರಿಗೆ ಬಿಸಿಸಿಐ ಕಡೆಯಿಂದ ಮೊದಲ ಶಾಕ್: ಹಾರ್ಧಿಕ್ ಪಾಂಡ್ಯಗೆ ಬಂಪರ್. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಸದ್ಯದ ಮಟ್ಟಿಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯನ್ನು ಆಡುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಆಡಿದ ನಂತರ ಭಾರತೀಯ ಕ್ರಿಕೆಟ್ ತಂಡ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಗು ಮುನ್ನವೇ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಕೂಡ ಆಡಬೇಕಾಗಿದೆ. ಇದರ ನಡುವಲ್ಲಿ ತಂಡದಲ್ಲಿ ಹಲವಾರು ಬದಲಾವಣೆಗಳು ಕಂಡುಬರುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಬಿಸಿಸಿಐ ಒಳ ಮೂಲಗಳಿಂದ ಕೇಳಿ ಬಂದಿರುವ ಸುದ್ದಿಯ ಪ್ರಕಾರ ನಾವು ಲೆಕ್ಕಾಚಾರ ಹಾಕಬಹುದಾಗಿದೆ.

ಹೌದು ಗೆಳೆಯರೇ ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಲೇಟೆಸ್ಟ್ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಕೆಎಲ್ ರಾಹುಲ್ ರವರಿಗೆ ಕಹಿ ಸುದ್ದಿ ಹಾಗೂ ಹಾರ್ದಿಕ ಪಾಂಡ್ಯ ರವರಿಗೆ ಸಿಹಿ ಸುದ್ದಿ ಸಿಗಲಿದೆ. ಹೌದು ಗೆಳೆಯರೇ, ಇದುವರೆಗೂ ತಂಡದ ಉಪನಾಯಕನಾಗಿ ನೇಮಕವಾಗಿದ್ದ ಕೆ ಎಲ್ ರಾಹುಲ್ ರವರು ಇಂಜುರಿ ಹಾಗೂ ಫಿಟ್ನೆಸ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ತಂಡದಿಂದ ಸತತ ಸರಣಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ ಹಾಗೂ ಮುಂದೆ ಕೂಡ ತಂಡದಲ್ಲಿ ಆಯ್ಕೆ ಆಗುವಾಗ ಮತ್ತೆ ಇದೆ ಪರಿಸ್ಥಿತಿ ಬರದಿರಲು ಸಾಧ್ಯವಿಲ್ಲ ಎಂಬುದಾಗಿ ಹೇಳಲು ಕೂಡ ಸಾಧ್ಯವಿಲ್ಲ. ಹೀಗಾಗಿ ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ ಕೆಎಲ್ ರಾಹುಲ್ ರವರನ್ನು ಉಪನಾಯಕನ ಹುದ್ದೆಯಿಂದ ಕೆಳಗಿಳಿಸಿ ಹಾರ್ದಿಕ ಅವರನ್ನು ತಂಡದ ಉಪನಾಯಕನನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಾಗಿದೆ.

ಹಾರ್ದಿಕ್ ಪಾಂಡ್ಯ ರವರು ಇಂಜುರಿಯಿಂದ ತಂಡಕ್ಕೆ ವಾಪಸಾದ ನಂತರ ಬಹುತೇಕ ಎಲ್ಲಾ ಸರಣಿಗಳಲ್ಲಿ ಕೂಡ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡು ವಿಭಾಗಗಳಲ್ಲಿ ತಂಡಕ್ಕೆ ನೆರವಾಗಿದ್ದಾರೆ. ಎಲ್ಲದಕ್ಕಿಂತ ಪ್ರಮುಖವಾಗಿ ಇಂಟರ್ನ್ಯಾಷನಲ್ ಕ್ವಾಲಿಟಿ ಅನ್ನು ಹೊಂದಿರುವ ಐಪಿಎಲ್ ನಲ್ಲಿ ಕೂಡ ಚೊಚ್ಚಲ ಆವೃತ್ತಿಯಲ್ಲಿಯೇ ನಾಯಕನಾಗಿ ಟ್ರೋಫಿ ಗೆದ್ದಿದ್ದಾರೆ. ಹೀಗಾಗಿ ಅವರು ಟಿ20 ವಿಶ್ವಕಪ್ ತಂಡದಲ್ಲಿ ಅಥವಾ ಏಷ್ಯಾಕಪ್ ಸಂದರ್ಭದಲ್ಲಿಯೇ ತಂಡದ ಉಪನಾಯಕನಾಗಿ ನೇಮಕವಾಗುವುದು ನಿಶ್ಚಿತ ಎಂಬುದಾಗಿ ಕೇಳಿಬಂದಿದೆ. ಕೆ ಎಲ್ ರಾಹುಲ್ ರವರ ಮುಂದಿನ ದಿನಗಳಲ್ಲಿ ತಂಡದ ಓಪನಿಂಗ್ ಬ್ಯಾಟ್ಸ್ಮನ್ ಹಾಗೂ ವಿಕೆಟ್ ಕೀಪರ್ ಸ್ಥಾನದಲ್ಲಿ ಕೂಡ ಕಾಣಿಸಿಕೊಳ್ಳಬಹುದು ಎಂಬುದಾಗಿ ಸುದ್ದಿಗಳು ಬಲವಾಗಿ ಕೇಳಿ ಬರುತ್ತಿದೆ.