ಭಾರತ ತಂಡಕ್ಕೆ ಒಬ್ಬ ಎಬಿಡಿ ಸಿಕ್ಕಿದ್ದಾನೆ ಎಂದ ಪಾರ್ಥಿವ್ ಪಟೇಲ್, ಆಯ್ಕೆ ಮಾಡಿ ಈತನೇ ಭಾರತದ ಎಬಿಡಿ ಎಂದದ್ದು ಯಾರನ್ನು ಗೊತ್ತೇ??

ಭಾರತ ತಂಡಕ್ಕೆ ಒಬ್ಬ ಎಬಿಡಿ ಸಿಕ್ಕಿದ್ದಾನೆ ಎಂದ ಪಾರ್ಥಿವ್ ಪಟೇಲ್, ಆಯ್ಕೆ ಮಾಡಿ ಈತನೇ ಭಾರತದ ಎಬಿಡಿ ಎಂದದ್ದು ಯಾರನ್ನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಟಿ 20 ಪಂದ್ಯದಲ್ಲಿ ಭಾರತ ತಂಡ ಜಯಿಸುವ ಮೂಲಕ ಸರಣಿಯಲ್ಲಿ ೨-೧ ರಿಂದ ಮುನ್ನಡೆ ಸಾಧಿಸಿದೆ. ಆರಂಭಿಕ ಆಟಗಾರರಾಗಿ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದ ಸೂರ್ಯ ಕುಮಾರ್ ಯಾದವ್, ಮೂರನೇ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಗೆಲುವಿನ ದಡ ಹತ್ತಿಸಿದ್ದರು.

ಸೂರ್ಯ ಕುಮಾರ್ ಯಾದವ್ ರವರ ಅಮೋಘ ಬ್ಯಾಟಿಂಗ್ ಬಗ್ಗೆ ಹಲವಾರು ಜನ ಹಿರಿಯ ಹಾಗೂ ಮಾಜಿ ಆಟಗಾರರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಪಾರ್ಥಿವ್ ಪಟೇಲ್ ಸೂರ್ಯ ಕುಮಾರ್ ಯಾದವ್ ರವರನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಸೂರ್ಯ ಕುಮಾರ್ ಯಾದವ್ ಭಾರತ ತಂಡದ ಎಬಿ ಡಿ ವಿಲಿಯರ್ಸ್ ಇದ್ದಂತೆ ಎಂದು ಬಣ್ಣಿಸಿದ್ದಾರೆ. ಅವರು ಮಿಸ್ಟರ್ 360 ಡಿಗ್ರಿ ಆಡುವ ಹಾಗೆ ಇವರು ಸಹ ಆಡುತ್ತಾರೆ. ನಿಧಾನಗತಿಯ ಪಿಚ್ ನಲ್ಲಿ ಹೇಗೆ ಬ್ಯಾಟ್ ಬೀಸಬೇಕು ಎಂಬುದನ್ನು ಅರಿತುಕೊಂಡಿದ್ದಾರೆ. ಬೌಲರ್ ಹೇಗೆಯೇ ಬೌಲಿಂಗ್ ಮಾಡಿದರೂ, ಫೀಲ್ಡ್ ಗೆ ತಕ್ಕಂತೆ ನಾನು ಬ್ಯಾಟಿಂಗ್ ಮಾಡುತ್ತೇನೆ ಎಂಬುದು ಸೂರ್ಯ ಕುಮಾರ್ ಯಾದವ್ ಹಾಗೂ ಎಬಿ ಡಿ ವಿಲಿಯರ್ಸ್ ರವರ ಬ್ಯಾಟಿಂಗ್ ಶೈಲಿ. ಹಾಗಾಗಿ ಅವರು ಟಿ 20 ಕ್ರಿಕೆಟ್ ನಲ್ಲಿ ಯಶಸ್ವಿಯಾಗಿದ್ದಾರೆ. ಮೈದಾನದ ಸುತ್ತಲೂ ಆಡಲು ಅತಿ ಹೆಚ್ಚು ಕೌಶಲ್ಯಗಳು ಹಾಗೂ ಅತಿಯಾದ ಆತ್ಮವಿಶ್ವಾಸ ಬೇಕಾಗುತ್ತದೆ. ಹೀಗಾಗಿ ಇವರು ಭಾರತ ತಂಡದ ಎಬಿ ಡಿ ವಿಲಿಯರ್ಸ್ ಇದ್ದಂತೆ ಎಂದು ಹೇಳಿದ್ದಾರೆ‌. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.