ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಸರಣಿ ಗೆದ್ದ ತಕ್ಷಣ ನಾಲ್ಕನೇ ಟಿ 20ಗೆ ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ಸೂಚಿಸಿದ ಪಾರ್ಥಿವ್ ಪಟೇಲ್, ಯಾರು ಆಡಬೇಕಂತೆ ಗೊತ್ತೆ??

290

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಸರಣಿ ರೋಚಕ ಹಂತದತ್ತ ಸಾಗುತ್ತಿದೆ. ಆಡಿರುವ ಮೂರು ಪಂದ್ಯಗಳಲ್ಲಿ ಭಾರತ ತಂಡ ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದು ಮುನ್ನಡೆಯಲ್ಲಿದೆ. ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಜಯಿಸಲು ಯೋಜನೆ ಹಾಕಿಕೊಂಡಿದೆ.ಆದರೇ ಯಾವಾಗ ಬೇಕಿದ್ದರೂ ಪುನರಾಗಮನ ಮಾಡುವ ಸಾಮರ್ಥ್ಯ ಹೊಂದಿರುವ ವೆಸ್ಟ್ ಇಂಡೀಸ್ ತಂಡ ಭಾರತಕ್ಕೆ ತಿರುಗೇಟು ನೀಡಲು ಯೋಜನೆ ಹಾಕಿಕೊಂಡಿದೆ.

ಇನ್ನು ನಾಲ್ಕನೇ ಟಿ 20 ಪಂದ್ಯದ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಪಾರ್ಥಿವ್ ಪಟೇಲ್, ತಂಡದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ. ಸದ್ಯ ಮೂರನೇ ಕ್ರಮಾಂಕದಲ್ಲಿ ಆಡುತ್ತಿರುವ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್, ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಅವರ ಸ್ಟ್ರೈಕ್ ರೇಟ್ 100ಕ್ಕಿಂತ ಕಡಿಮೆ ಇದೆ. ಹಾಗಾಗಿ ಅವರ ಬದಲು ಮೂರನೇ ಕ್ರಮಾಂಕದಲ್ಲಿ ಪಿಂಚ್ ಹಿಟ್ಟರ್ ದೀಪಕ್ ಹೂಡಾ ರನ್ನು ಆಡಿಸುವುದು ಉತ್ತಮ ಆಯ್ಕೆ ಎಂದು ಹೇಳಿದ್ದಾರೆ.

ಸದ್ಯ ಬೆಂಚು ಕಾಯಿಸುತ್ತಿರುವ ಇಶಾನ್ ಕಿಶನ್ ರನ್ನು ಆರಂಭಿಕರನ್ನಾಗಿಸಿ, ಸೂರ್ಯ ಕುಮಾರ್ ಯಾದವ್ ರನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸಬಹುದು. ಜೊತೆಗೆ ದುಬಾರಿಯಾಗಿರುವ ಆವೇಶ್ ಖಾನ್ ಬದಲು, ಹರ್ಷಲ್ ಪಟೇಲ್ ರನ್ನು ಆಡಿಸಿ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ತಂಡ ಇಂತಿದೆ: ರೋಹಿತ್ ಶರ್ಮಾ, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯ ಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್,ರವಿ ಬಿಷ್ಣೋಯಿ, ಅರ್ಶದೀಪ್ ಸಿಂಗ್.

Get real time updates directly on you device, subscribe now.