ಕರುನಾಡ ವಾಣಿ
ಇದು ನಿಮ್ಮ ಧ್ವನಿ

ತಂಡದಲ್ಲಿ ಏನೇನೋ ಬದಲಾವಣೆ ಮಾಡಿ ಟೀಕೆಗೆ ಗುರಿಯಾಗಿರುವ ರೋಹಿತ್, ದ್ರಾವಿಡ್ ಬಗ್ಗೆ ಮೌನ ಮುರಿದ ಪಾಂಡ್ಯ. ಹೇಳಿದ್ದೇನು ಗೊತ್ತೇ??

5,404

ನಮಸ್ಕಾರ ಸ್ನೇಹಿತರೇ ಈ ಕ್ರಿಕೇಟಿಗನ ಕೆರಿಯರ್ ಮುಗಿದೆ ಹೋಯಿತು ಎಂದು ಹಲವಾರು ಜನ ತಮ್ಮ ಪಾಡಿಗೆ ತಾವು ಷರಾ ಬರೆದುಕೊಂಡಿದ್ದರು. ಈತನ ಬದಲು ವೆಂಕಟೇಶ್ ಅಯ್ಯರ್ ಎಂಬ ಇನ್ನೊಬ್ಬ ಆಟಗಾರ ಸಹ ಟೀಂ ಇಂಡಿಯಾದ ವೇಗದ ಬೌಲರ್ ಕಮ್ ಆಲ್ ರೌಂಡರ್ ಕೋಟಾದಡಿ ಸ್ಥಾನ ಸಹ ಪಡೆದಿದ್ದ. ಆದರೇ ಅವೆಲ್ಲ ಲೆಕ್ಕಚಾರಗಳನ್ನು ತಲೆಕೆಳಗು ಮಾಡಿ ಈಗ ಟೀಂ ಇಂಡಿಯಾದಲ್ಲಿ ಅಬ್ಬರಿಸುತ್ತಿರುವ ಆಟಗಾರ ಬೇರೆ ಯಾರು ಅಲ್ಲ ಅದು ಹಾರ್ದಿಕ್ ಪಾಂಡ್ಯ.

ಬರೋಡಾದ ಈ ಆಲ್ ರೌಂಡರ್ ಐಪಿಎಲ್ ನಲ್ಲಿ ಬಹುಬೇಗ ಮಿಂಚಿ ಟೀಂ ಇಂಡಿಯಾದ ಅವಿಭಾಜ್ಯ ಅಂಗವಾದರು. ಆದರೇ ಆ ನಂತರ ಪದೇ ಪದೇ ಗಾಯದ ಸಮಸ್ಯೆ ಕಾರಣ ತಂಡದಿಂದ ಹೊರಗುಳಿದರು. ಆ ನಂತರ ತಂಡಕ್ಕೆ ಬಂದರೂ ಕಳಪೆ ಫಾರ್ಮ್ ನಿಂದ ತಂಡದಿಂದ ಹೊರಗುಳಿದರು. ಆದರೇ ಈ ವರ್ಷದ ಐಪಿಎಲ್ ನಿಂದ ಅವರ ಅದೃಷ್ಟ ಬದಲಾಗಿ, ಐಪಿಎಲ್ ನಲ್ಲಿ ಅವರು ನಾಯಕತ್ವ ವಹಿಸಿದ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಆ ನಂತರ ಭಾರತ ತಂಡದಲ್ಲಿಯೂ ಸಹ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದರು.

ಅದಲ್ಲದೇ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ತಂಡದ ನಾಯಕತ್ವವನ್ನು ಸಹ ವಹಿಸಿದ್ದರು. ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡುತ್ತಿರುವ ಪಾಂಡ್ಯ ತಂಡದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟಿದ್ದಾರೆ. ಬನ್ನಿ ಅದೇನು ಎಂದು ತಿಳಿಯೋಣ. ಭಾರತ ತಂಡದ ಯಶಸ್ಸಿಗೆ ಮುಖ್ಯ ಕಾರಣ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ತಂಡದ ಆಟಗಾರಿಗೆ ನೀಡಿದ ಸ್ವಾತಂತ್ರ್ಯ. ಫಲಿತಾಂಶ ಏನೇ ಇರಲಿ, ಸ್ವತಂತ್ರವಾಗಿ ಆಟವಾಡಿ ಎಂದಿದ್ದಾರೆ. ಇದೇ ನಮ್ಮ ಯಶಸ್ಸಿನ ಗುಟ್ಟು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ