ಕನ್ನಡಿಗ ಕೆ ಲ್ ರಾಹುಲ್ ರವರಿಗೆ ಮತ್ತೊಂದು ಶಾಕ್: ಮಹಾ ಯೋಜನೆಯಲ್ಲಿ ಕೈ ಬಿಡಲು ರಾಹುಲ್ ದ್ರಾವಿಡ್ ಪ್ಲಾನ್?? ಏನಾಗುತ್ತಿದೆ ಗೊತ್ತೇ? ಟೀಮ್ ಇಂಡಿಯಾದಲ್ಲಿ??

ಕನ್ನಡಿಗ ಕೆ ಲ್ ರಾಹುಲ್ ರವರಿಗೆ ಮತ್ತೊಂದು ಶಾಕ್: ಮಹಾ ಯೋಜನೆಯಲ್ಲಿ ಕೈ ಬಿಡಲು ರಾಹುಲ್ ದ್ರಾವಿಡ್ ಪ್ಲಾನ್?? ಏನಾಗುತ್ತಿದೆ ಗೊತ್ತೇ? ಟೀಮ್ ಇಂಡಿಯಾದಲ್ಲಿ??-

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಆಗಿದ್ದರೆ ಉಪನಾಯಕನಾಗಿ ಕೆಎಲ್ ರಾಹುಲ್ ರವರನ್ನು ನೇಮಿಸಲಾಗಿತ್ತು. ಆದರೆ ಇತ್ತೀಚಿಗಷ್ಟೇ ಹಲವಾರು ಬಾರಿ ಇಂಜುರಿಗೆ ಒಳಗಾಗಿರುವ ಕೆಎಲ್ ರಾಹುಲ್ ರವರು ಹರ್ನಿಯಾ ಶಸ್ತ್ರಚಿಕಿತ್ಸೆ ಸೇರಿದಂತೆ ಹಲವಾರು ವೈದ್ಯಕೀಯ ತಪಾಸಣೆ ಹಾಗೂ ಫಿಟ್ನೆಸ್ ಟೆಸ್ಟ್ ಗಳಿಗೆ ಒಳಗಾಗಿದ್ದಾರೆ ಆದರೂ ಕೂಡ ಸೌತ್ ಆಫ್ರಿಕಾ ಐರ್ಲ್ಯಾಂಡ್ ಇಂಗ್ಲೆಂಡ್ ಹಾಗೂ ಸದ್ಯಕ್ಕೆ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಳಿಗೆ ಕೂಡ ಕೆಎಲ್ ರಾಹುಲ್ ರವರು ಗೈರು ಹಾಜರಾಗಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ.

ಇದೇ ವರ್ಷದ ಅಕ್ಟೋಬರ್ ಹಾಗೂ ನವಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಅನ್ನು ದೃಷ್ಟಿಯಲ್ಲಿರಿಸಿಕೊಂಡು ಕೆ ಎಲ್ ರಾಹುಲ್ ರವರ ಕ್ರಿಕೆಟ್ ಜೀವನದಲ್ಲಿ ಸದ್ಯದ ಮಟ್ಟಿಗೆ ನಡೆಯುತ್ತಿರುವ ಬೆಳವಣಿಗೆಯನ್ನು ನೋಡುತ್ತಿದ್ದರೆ ನಿಜಕ್ಕೂ ಕೂಡ ಅವರು ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗುವುದು 100% ಅನುಮಾನ ಎಂದು ಹೇಳಲಾಗುತ್ತಿದೆ. ಯಾಕೆಂದರೆ ವೆಸ್ಟ್ ಇಂಡೀಸ್ ಸರಣಿಗೆ ಅವರು ಮರಳುತ್ತಾರೆ ಎಂಬುದಾಗಿ ಎಲ್ಲರೂ ಮಾತನಾಡಿಕೊಂಡಿದ್ದರು ಆದರೆ ಈಗಾಗ ಮೊದಲ ಏಕದಿನ ಟಿ ಟ್ವೆಂಟಿ ಪಂದ್ಯ ಕೂಡ ಮುಗಿದಿದ್ದು ಇನ್ನೂ ಕೂಡ ಅವರ ಪತ್ತೆ ಇಲ್ಲ ಎಂದು ಹೇಳಬಹುದಾಗಿದೆ.

ವೆಸ್ಟ್ ಇಂಡೀಸ್ ಸರಣಿಗೆ ತಂಡಕ್ಕೆ ಮರಳಿ ಬರುತ್ತಾರೆ ಎಂಬುದಾಗಿ ಕೆ ಎಲ್ ರಾಹುಲ್ ರವರ ಕುರಿತಂತೆ ಎಲ್ಲಾ ನಿರೀಕ್ಷೆಗಳು ಇದ್ದವು ಆದರೆ ಅವರಿಗೆ ಮಹಾಮಾರಿ ಪಾಸಿಟಿವ್ ಆದ ಕಾರಣದಿಂದಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಹೀಗಾಗಿ ಅವರ ಜಾಗಕ್ಕೆ ಸಂಜು ಸ್ಯಾಮ್ಸಂಗ್ ರವರು ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಬ್ಯಾಕಪ್ ರೂಪದಲ್ಲಿ ಬಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ವರ್ಷ ಕೆಎಲ್ ರಾಹುಲ್ ರವರು ಯಾವುದೇ ಅಂತರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯವನ್ನು ಆಡಿಲ್ಲ ಹೀಗಾಗಿ ಈ ವರ್ಷ ನಡೆಯಲಿರುವ ಟಿ ಟ್ವೆಂಟಿ ವಿಶ್ವಕಪ್ ಅನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ದಟ್ಟವಾಗಿ ಕ್ರಿಕೆಟ್ ಜಗತ್ತಿನಲ್ಲಿ ಹರಿದಾಡುತ್ತಿದೆ.

ಕೆ ಎಲ್ ರಾಹುಲ್ ರವರು ಒಬ್ಬ ಅತ್ಯುತ್ತಮ ಟಿ 20 ಕ್ರಿಕೆಟಿಗ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಐಪಿಎಲ್ ನಲ್ಲಿ ಸತತವಾಗಿ 500ಕ್ಕಿಂತ ಅಧಿಕರನ್ನುಗಳನ್ನು ಹಲವಾರು ಸೀಸನ್ ಗಳಿಂದ ಅವರು ಬಾರಿಸುತ್ತಿದ್ದಾರೆ ಈ ಸೀಸನ್ ನಲ್ಲಿ ಕೂಡ ಅವರು ಬಾರಿಸಿದ್ದಾರೆ. ಆದರೆ 2022ರಲ್ಲಿ ಈಗಾಗಲೇ ಆರು ಸರಣಿಗಳಿಂದ ಬರೋಬ್ಬರಿ 21 ಟಿ 20 ಪಂದ್ಯಗಳನ್ನು ಕೆ ಎಲ್ ರಾಹುಲ್ ರವರು ಮಿಸ್ ಮಾಡಿಕೊಂಡಿದ್ದಾರೆ. ಬೆಂಬಿಡದ ಫಿಟ್ನೆಸ್ ಸಮಸ್ಯೆ ಹಾಗೂ ಇಂಜುರಿಯ ಕಾರಣಗಳಿಂದಾಗಿ ಈ ವರ್ಷ ಒಂದೇ ಒಂದು ಅಂತರಾಷ್ಟ್ರೀಯ ಟಿ20 ಪಂದ್ಯವನ್ನು ಕೂಡ ಅವರು ಆಡಿಲ್ಲ ಎಂಬುದು ಬೇಸರದ ವಿಚಾರವಾಗಿದ್ದು ಇದೇ ಹಿನ್ನೆಲೆಯಲ್ಲಿ ಅವರು ಟಿ ಟ್ವೆಂಟಿ ವಿಶ್ವಕಪ್ ತಂಡದಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಕೇಳಿ ಬರುತ್ತಿದೆ.

ಈಗಾಗಲೇ ಯಾವುದೇ ಟಿ ಟ್ವೆಂಟಿ ಪಂದ್ಯಗಳನ್ನು ಆಡದಿರುವ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ರವರನ್ನು ರಾಹುಲ್ ದ್ರಾವಿಡ್ ರವರು ವಿಶ್ವಕಪ್ ತಂಡದಲ್ಲಿ ಸೇರಿಸಿಕೊಳ್ಳುವುದು ಬಹುತೇಕ ಅನುಮಾನವಾಗಿದೆ ಯಾಕೆಂದರೆ ಅವರು ಮುಂದಿನ ತಿಂಗಳು ಪ್ರಾರಂಭವಾಗಲಿರುವ ಏಷ್ಯಾಕಪ್ ಟಿ20 ಟೂರ್ನಮೆಂಟ್ ನಲ್ಲಿ ಕೂಡ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುವುದು ಅನುಮಾನವಾಗಿದೆ ಎಂಬುದಾಗಿ ಕೇಳಿ ಬರುತ್ತಿದೆ. ಯಾವುದೇ ಅಂತರಾಷ್ಟ್ರೀಯ ಪ್ರಮುಖ ಟಿ 20 ಪಂದ್ಯಗಳನ್ನು ಆಡದೆ ನೇರವಾಗಿ ಕೆ ಎಲ್ ರಾಹುಲ್ ರವರಿಗೆ ವಿಶ್ವಕಪ್ ತಂಡದಲ್ಲಿ ಪಾಸ್ ನೀಡುವುದಕ್ಕೆ ರಾಹುಲ್ ದ್ರಾವಿಡ್ ಸಿದ್ದರಿಲ್ಲ ಎಂಬುದಾಗಿ ಒಳ ಸುದ್ದಿಗಳು ಕೇಳಿ ಬರುತ್ತಿವೆ.

ಒಂದು ವೇಳೆ ಕೆಎಲ್ ರಾಹುಲ್ ರವರು ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಅನ್ನು ಮಿಸ್ ಮಾಡಿಕೊಂಡರೆ ಕೇವಲ ರಾಹುಲ್ ರವರಿಗೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ತಂಡಕ್ಕೂ ಕೂಡ ಇದೊಂದು ಹಿನ್ನಡೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಯಾಕೆಂದರೆ ಟಿ ಟ್ವೆಂಟಿ ಮಾದರಿಯ ಕ್ರಿಕೆಟ್ ನಲ್ಲಿ ಅವರು ಒಬ್ಬ ಭರವಸೆಯ ಆರಂಭಿಕ ಆಟಗಾರನಾಗಿ ತಮ್ಮ ಸ್ಥಾನವನ್ನು ಸಮರ್ಥಿಸಿಕೊಂಡಿದ್ದರು ಆದರೆ ಇಂಜುರಿ ಹಾಗೂ ಫಿಟ್ನೆಸ್ ಕಾರಣದಿಂದಾಗಿ ಅವರು ತಂಡದಿಂದ ಸ್ಥಾನವನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಕೂಡ ಕಪ್ ಗೆಲ್ಲುವ ಫೇವರಿಟ್ ತಂಡ ಎಂದು ಅನಿಸಿಕೊಂಡಿರುವ ಟೀಮ್ ಇಂಡಿಯಾಗೆ ಕೊಂಚಮಟ್ಟದ ಹಿನ್ನಡೆಯನ್ನು ನೀಡಬಹುದೆಂಬುದಾಗಿ ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.