ಭಾರತ ತಂಡಕ್ಕೆ ಶಾಕ್ ನೀಡಿದ ರೋಹಿತ್ ಶರ್ಮ: ಈತನನ್ನು ನಂಬಿಕೊಂಡು ಹೇಗೆ ನಾಯಕನ್ನಾಗಿ ಮಾಡಿದ್ದೀರಿ ಎಂದ ಫ್ಯಾನ್ಸ್. ಏನಾಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯಕ್ಕೆ ಭಾರತ, ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಯನ್ನು ಆಡುತ್ತಿದೆ. ಇದಾದ ನಂತರ ಇದೇ ತಿಂಗಳ ಕೊನೆಯಲ್ಲಿ ಪ್ರಾರಂಭವಾಗಲಿರುವ ಏಷ್ಯಾ ಕಪ್ ಅನ್ನು ಕೂಡ ಆಡಲಿದೆ. ಆದರೆ ಇದೇ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಮತ್ತೊಂದು ತಲೆನೋ’ವು ಪ್ರಾರಂಭವಾಗಿದೆ. ಅದೇನೆಂದರೆ ಮೂರನೆಯ ಟಿ ಟ್ವೆಂಟಿ ಕ್ರಿಕೆಟ್ ಪಂದ್ಯವನ್ನು ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಗೆದ್ದಿರುವುದು ನಿಮಗೆಲ್ಲರಿಗೂ ಗೊತ್ತಿದೆ ಆದರೆ ಈ ಪಂದ್ಯದ ಸಂದರ್ಭದಲ್ಲಿ ತಂಡದ ನಾಯಕ ಆಗಿರುವ ರೋಹಿತ್ ಶರ್ಮಾ ರವರು ಇಂಜುರಿಗೆ ತುತ್ತಾಗಿದ್ದಾರೆ.

ಹೌದು ಗೆಳೆಯರೇ ಅಲ್ಜರಿ ಜೋಸೆಫ್ ರವರ ಎಸೆತದಲ್ಲಿ ಒಂದು ಭರ್ಜರಿ ಸಿಕ್ಸ್ ಹಾಗೂ ಬೌಂಡರಿಯನ್ನು ಸತತವಾಗಿ ರೋಹಿತ್ ಶರ್ಮಾ ರವರು ಬಾರಿಸುತ್ತಾರೆ ಆದರೆ ಮೂರನೇ ಎಸೆತವನ್ನು ಸಿಂಗಲ್ ಬಾರಿಸಿದ ನಂತರ ರೋಹಿತ್ ಶರ್ಮಾ ರವರು ಸ್ನಾಯು ಸೆಳೆತಕ್ಕೆ ಒಳಗಾಗುತ್ತಾರೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮ ರವರ ಬೆನ್ನು ನೋ’ವು ಎನ್ನುವುದು ಗಣನೀಯವಾಗಿ ಹೆಚ್ಚಾಗುತ್ತದೆ ಹೀಗಾಗಿ ಹೀಜಿಯೋ ಚಿಕಿತ್ಸೆ ನೀಡಿದರು ಕೂಡ ಅದು ಪರಿಣಾಮಕಾರಿಯಾಗಿ ಕಾಣಿಸಲಿಲ್ಲ. ಹೀಗಾಗಿ ರೋಹಿತ್ ಶರ್ಮಾ ರವರು ಮೈದಾನದಿಂದ ಹೊರ ಹೋಗಬೇಕಾಗಿ ಬಂದಿತ್ತು. ಉಳಿದಿರುವ ಕೊನೆಯ ಎರಡು ಪಂದ್ಯಗಳು ಅಮೆರಿಕಾದಲ್ಲಿ ನಡೆಯಲಿದ್ದು ರೋಹಿತ್ ಶರ್ಮಾ ಇದರಲ್ಲಿ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಅನುಮಾನದ ಪ್ರಶ್ನೆಯಾಗಿದೆ.

ಇನ್ನು ನೆಟ್ಟಿಗರು ಏಷ್ಯಾ ಕಪ್ ಹಾಗೂ t20 ವಿಶ್ವಕಪ್ ಇನ್ನೇನು ಕೆಲವೇ ಸಮಯಗಳ ಅಂತರದಲ್ಲಿ ಇರುವಾಗ ನಾಯಕ ಈಗ ಮತ್ತೊಮ್ಮೆ ಇಂಜುರಿಗೆ ತುತ್ತಾಗಿರುವುದು ನಿಜಕ್ಕೂ ಕೂಡ ಅಸಮಾಧಾನಕರ ವಿಚಾರ ಹೀಗೆ ಮುಂದುವರೆದರೆ ಹೇಗೆ ಎಂಬುದಾಗಿ ಹೇಳುತ್ತಿದ್ದಾರೆ. ಇತ್ತ ಬಿಸಿಸಿಐ ಕೂಡ ಇಂಜುರಿಗೆ ತುತ್ತಾಗಿರುವ ಆಟಗಾರರಿಗೆ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ವಿಶ್ರಾಂತಿ ಕೂಡ ನೀಡುತ್ತಿದೆ ಆದರೆ ರೋಹಿತ್ ಶರ್ಮ ರವರು ತಂಡದ ನಾಯಕ ಆಗಿರುವ ಹಿನ್ನೆಲೆಯಲ್ಲಿ ಅವರ ಕುರಿತಂತೆ ಬಿಸಿಸಿಐ ಯಾವ ನಿರ್ಧಾರವನ್ನು ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.