ಭಾರತದ ಬೌಲಿಂಗ್ ಭವಿಷ್ಯ ಉತ್ತಮ: ವಿಶ್ವ ಕ್ರಿಕೆಟ್ ನ ಭವಿಷ್ಯದ ಡೇಂಜರ್ ಬೌಲರ್ ಅನ್ನು ಹೆಸರಿಸಿದ ಭುವಿ: ಆ ಯುವ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿತ್ತು. ಆದರೇ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡದ ನಡುವಿನ ಟಿ 20 ಸರಣಿ ಮಾತ್ರ ರೋಚಕವಾಗಿ ಸಾಗುತ್ತಿದೆ. ಎರಡು ತಂಡಗಳು ಸಮಬಲದ ಪ್ರದರ್ಶನ ನೀಡುತ್ತಿದ್ದು ಯಾವ ತಂಡ ವಿಜಯಶಾಲಿಯಾಗುತ್ತದೆ ಎಂಬುದು ಇನ್ನು ಸಹ ತಿಳಿದಿಲ್ಲ. ಈ ನಡುವೆ ಭಾರತ ತಂಡ ಮೊದಲ ಪಂದ್ಯ ಜಯಿಸಿದಾಗ ಎಲ್ಲರ ಬಾಯಲ್ಲಿ ಕೇಳಿಬಂದ ಹೆಸರೆಂದರೇ ಅದು ಪಂಜಾಬ್ ನ ಪುತ್ಥರ್ ಅರ್ಷದೀಪ್ ಸಿಂಗ್.

ಹೌದು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಂಜಾಬ್ ಪುತ್ಥರ್ ಈಗ ವಿಂಡೀಸ್ ವಿರುದ್ಧದ ಪಂದ್ಯದಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಈ ಬಗ್ಗೆ ಭಾರತ ತಂಡದ ಅನುಭವಿ ವೇಗದ ಬೌಲರ್ ಆಗಿರುವ ಭುವನೇಶ್ವರ್ ಕುಮಾರ್ ಸಹ ಮಾತನಾಡಿದ್ದಾರೆ. ಎಡಗೈ ವೇಗಿ ಅರ್ಶದೀಪ್ ಸಿಂಗ್ ರಲ್ಲಿ ಬಹಳಷ್ಟು ಕ್ವಾಲಿಟಿ ಗಳಿವೆ. ಚೆಂಡನ್ನು ಅವರು ಉತ್ತಮವಾಗಿ ಸ್ವಿಂಗ್ ಮಾಡುತ್ತಾರೆ. ಪವರ್ ಪ್ಲೇಯಲ್ಲಿ, ಮಧ್ಯಮ ಓವರ್ ಗಳಲ್ಲಿ, ಸ್ಲಾಗ್ ಓವರ್ ಗಳಲ್ಲಿ ಹೀಗೆ ಎಲ್ಲಾ ಹಂತದಲ್ಲಿಯೂ ಉತ್ತಮ ಬೌಲಿಂಗ್ ಮಾಡುವ ಕೌಶಲ್ಯ ಹೊಂದಿದ್ದಾರೆ.

ಇದರ ಜೊತೆ ಜೊತೆಗೆ ಯಾರ್ಕರ್, ಸ್ಲೋ ಬೌನ್ಸರ್ , ಶಾರ್ಟ್ ಪಿಚ್ ಬಾಲ್ ಗಳನ್ನು ಯಾವ ಹಂತದಲ್ಲಿ ಪ್ರಯೋಗಿಸಬೇಕು ಎಂಬುದನ್ನು ಅವರು ಚೆನ್ನಾಗಿ ಅರಿತುಕೊಂಡಿದ್ದಾರೆ. ಕೆಲವೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದರೂ, ಇಷ್ಟೊಂದು ಅನುಭವ ಅವರಲ್ಲಿರುವುದು ನಿಜಕ್ಕೂ ಶ್ಲಾಘನೀಯ. ಭವಿಷ್ಯದಲ್ಲಿ ಅವರು ಇತರ ತಂಡಗಳಿಗೆ ಅಪಾಯಕಾರಿ ಬೌಲರ್ ಆಗುವುದರಲ್ಲಿ ಸಂಶಯವೇ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.