ಬಿಸಿಸಿಐ ಮೇಲೆ ಮುಗಿ ಬಿದ್ದ ಅಭಿಮಾನಿಗಳು, ಉತ್ತಮ ಪ್ರದರ್ಶನ ನೀಡಿದ ಹರ್ಷಲ್ ತಂಡದಲ್ಲಿ ಯಾಕೆ ಇಲ್ಲ ಗೊತ್ತೇ?? ಸ್ಪಷ್ಟನೆ ನೀಡಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತ ತಂಡ ಏಕಪಕ್ಷೀಯವಾಗಿ ಗೆದ್ದುಕೊಂಡಿತು. ಆದರೇ ಸದ್ಯ ನಡೆಯುತ್ತಿರುವ ಟಿ 20 ಸರಣಿಯಲ್ಲಿ ಮಾತ್ರ ಸಮಬಲದ ಹೋರಾಟ ನಡೆಯುತ್ತಿದೆ. ಮೊದಲ ಪಂದ್ಯವನ್ನು ಭಾರತ ಗೆದ್ದಿದ್ದರೇ, ಎರಡನೇ ಪಂದ್ಯವನ್ನು ವೆಸ್ಟ್ ಇಂಡೀಸ್ ಗೆದ್ದು ತಿರುಗೇಟು ನೀಡಿತ್ತು. ಉಳಿದ ಮೂರು ಪಂದ್ಯಗಳಲ್ಲಿ ಕನಿಷ್ಠ ಎರಡನ್ನು ಗೆಲ್ಲುವ ಸರಣಿಯನ್ನು ಗೆಲ್ಲುವ ಆಸೆಯನ್ನು ಭಾರತ ತಂಡ ಜೀವಂತವಾಗಿ ಉಳಿಸಿಕೊಳ್ಳಬೇಕಿದೆ.
ಈ ನಡುವೆ ಭಾರತ ತಂಡದ ಆಡುವ ಅಂತಿಮ ಹನ್ನೊಂದರ ಬಳಗದಲ್ಲಿ ಟಿ 20 ಕ್ರಿಕೆಟ್ ಗೆಂದು ಹೇಳಿ ಮಾಡಿಸಿರುವ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ್ಪಲ್ ಪಟೇಲ್ ಖ್ಯಾತಿಯ ಹರ್ಷಲ್ ಪಟೇಲ್ ರನ್ನು ಏಕೆ ಆಡಿಸುತ್ತಿಲ್ಲ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಸದ್ಯ ಟಿ 20 ಕ್ರಿಕೆಟ್ ನಲ್ಲಿ ಮಾತ್ರ ಆಡುವ ಹರ್ಷಲ್ ಪಟೇಲ್ ರನ್ನು ಆಯ್ಕೆಗೆ ಪರಿಗಣಿಸದೇ ಇರುವುದು ಹಲವಾರು ಅಚ್ಚರಿಗಳಿಗೆ ಕಾರಣವಾಗಿತ್ತು. ತಮ್ಮ ಸ್ಲೋವರ್ ಎಸೆತಗಳಿಂದ ಟಿ 20 ಕ್ರಿಕೆಟ್ ನಲ್ಲಿ ವಿಕೇಟ್ ಟೇಕಿಂಗ್ ಬೌಲರ್ ಆಗಿರುವ ಹರ್ಷಲ್ ಪಟೇಲ್ ಗೆ ಸ್ಥಾನ ನೀಡದ ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ವಿರುದ್ಧ ಹಲವಾರು ಅಪಸ್ವರಗಳು ಕೇಳಿ ಬಂದಿದ್ದವು.
ಆದರೇ ಅದಕ್ಕೆ ಈಗ ಉತ್ತರ ದೊರೆತಿದ್ದು ಹರ್ಷಲ್ ಪಟೇಲ್ ರವರಿಗೆ ಅಭ್ಯಾಸ ಸಂದರ್ಭದಲ್ಲಿ ಪಕ್ಕೆಲುಬಿಗೆ ಗಾಯವಾಗಿತ್ತು. ಅವರಿನ್ನು ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಮುಂಬರುವ ಏಷ್ಯಾ ಕಪ್ ಹಾಗೂ ಟಿ 20 ವಿಶ್ವಕಪ್ ದೃಷ್ಟಿಯಿಂದ ಅವರಿಗೆ ಆಡಿಸಿರಲಿಲ್ಲ. ಅವರು ಸಂಪೂರ್ಣ ಗುಣಮುಖರಾದರೇ ನಾಲ್ಕನೇ ಟಿ 20 ಪಂದ್ಯದಿಂದ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.