ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಯಾವುದೇ ಕಾರಣಕ್ಕೂ ಅಶ್ವಿನ್ ರವರು ಬೇಡ, ಆತನ ಬದಲು ಈ ಆಟಗಾರನಿಗೆ ಚಾನ್ಸ್ ನೀಡಿ ಎಂದ ಕ್ರಿಕೆಟ್ ಪಂಡಿತ ಪಾರ್ಥಿವ್ ಪಟೇಲ್. ಯಾರಂತೆ ಗೊತ್ತೆ??

1,087

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡ ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ಟಿ 20 ಸರಣಿ ಆಡುತ್ತಿದೆ. ಆಡಿರುವ ಮೊದಲ ಪಂದ್ಯವನ್ನು ಯಶಸ್ವಿಯಾಗಿ ಗೆದ್ದಿರುವ ತಂಡ, ಸರಣಿಯನ್ನು ಜಯಿಸುವುದರ ಜೊತೆಗೆ ಕ್ಲೀನ್ ಸ್ವೀಪ್ ಸಹ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ವೆಸ್ಟ್ ಇಂಡೀಸ್ ಸರಣಿ ನಂತರ ಜಿಂಬಾಬ್ವೆ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದೆ. ಆ ನಂತರ ಏಷ್ಯಾ ಕಪ್ ಟಿ 20 ಸರಣಿ ಆಡಲಿದ್ದು ಆ ನಂತರ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ 20 ವಿಶ್ವಕಪ್ ನಲ್ಲಿ ಆಡಲಿದೆ.

ಇನ್ನು ಟೀಂ ಇಂಡಿಯಾದ ಭವಿಷ್ಯದ ಸಂಯೋಜನೆ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಪಾರ್ಥಿವ್ ಪಟೇಲ್ ಕೆಲವು ಸಲಹೆಗಳನ್ನು ನೀಡಿದ್ದಾರೆ. ಸದ್ಯ ಭಾರತ ತಂಡದ ಸ್ಪಿನ್ನರ್ ಗಳಾಗಿ ಆರ್.ಅಶ್ವಿನ್, ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ ರೇಸ್ ನಲ್ಲಿದ್ದಾರೆ. ಆದರೇ ಪಾರ್ಥಿವ್ ಪಟೇಲ್ ಪ್ರಕಾರ ಆರ್.ಅಶ್ವಿನ್ ಗೆ ಟಿ 20 ತಂಡದಲ್ಲಿ ಸ್ಥಾನ ನೀಡುವುದು ಸೂಕ್ತ ಅಲ್ಲ ಎಂದು ಹೇಳಿದ್ದಾರೆ. ಟಿ 20 ಕ್ರಿಕೆಟ್ ನಲ್ಲಿ ರಿಸ್ಟ್ ಸ್ಪಿನ್ನರ್ ಗಳಿಗೆ ಬೇಡಿಕೆ ಹೆಚ್ಚು. ನಾವು ರವೀಂದ್ರ ಜಡೇಜಾ ರವರನ್ನು ಆಲ್ ರೌಂಡರ್ ಲೆಕ್ಕದಲ್ಲಿ ಪರಿಗಣಿಸುತ್ತಿದ್ದೇವೆ.

ಹಾಗಾಗಿ ತಂಡದ ಉಳಿದ ಮೂರು ಸ್ಪಿನ್ನರ್ ಗಳಾಗಿ ಯುಜವೇಂದ್ರ ಚಾಹಲ್, ಕುಲದೀಪ್ ಯಾದವ್ ಮತ್ತು ರವಿ ಬಿಷ್ಣೋಯಿಯವರನ್ನು ಆಡಿಸುವುದು ಸೂಕ್ತ. ಆರ್ ಅಶ್ವಿನ್ ಒಬ್ಬ ಗೂಗ್ಲಿ ಹಾಕುವ ಬೌಲರ್. ಅವರ ಬದಲು ವಿಭಿನ್ನ ಶೈಲಿಯ, ರಿಸ್ಟ್ ಸ್ಪಿನ್ನರ್ ರವಿ ಬಿಷ್ಣೋಯಿ ಗೆ ಅವಕಾಶ ನೀಡುವುದು ತಂಡದ ಹಿತದೃಷ್ಟಿಯಿಂದ ಒಳ್ಳೆಯದು. ಟಿ 20 ಕ್ರಿಕೆಟ್ ನಲ್ಲಿ ಮಾಮೂಲಿ ಸ್ಪಿನ್ನರ್ ಗಳಿಗಿಂತ ರಿಸ್ಟ್ ಸ್ಪಿನ್ನರ್ ಗಳು ಹೆಚ್ಚು ಯಶಸ್ವಿಯಾಗುತ್ತಾರೆ. ಹಾಗಾಗಿ ಭಾರತ ಕ್ರಿಕೆಟ್ ತಂಡವನ್ನು ಟಿ 20 ಕ್ರಿಕೆಟ್ ವಿಶ್ವಕಪ್ ಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಆರ್.ಅಶ್ವಿನ್ ಬದಲು ರವಿ ಬಿಷ್ಣೋಯಿಯವರನ್ನು ಆಯ್ಕೆ ಮಾಡುವುದು ಸೂಕ್ತ ಎಂದು ಹೇಳಿದ್ದಾರೆ. ಪಾರ್ಥಿವ್ ಪಟೇಲ್ ರವರ ಈ ಹೇಳಿಕೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.