ಬಿಸಿಸಿಐ ಗೆ ಖಡಕ್ ಸಂದೇಶ ರವಾನೆ ಮಾಡಿದ ಕೊಹ್ಲಿ: ಬಿಸಿಸಿಐ ಮಾಡಿದ ತಪ್ಪಿಗೆ ಕಿಂಗ್ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ??

ಬಿಸಿಸಿಐ ಗೆ ಖಡಕ್ ಸಂದೇಶ ರವಾನೆ ಮಾಡಿದ ಕೊಹ್ಲಿ: ಬಿಸಿಸಿಐ ಮಾಡಿದ ತಪ್ಪಿಗೆ ಕಿಂಗ್ ಕೊಹ್ಲಿ ಪ್ರತಿಕ್ರಿಯೆ ಹೇಗಿತ್ತು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡದ ರನ್ ಮಶೀನ್ ಆಗಿದ್ದ ವಿರಾಟ್ ಕೊಹ್ಲಿ ಬ್ಯಾಟ್ ನಿಂದ ಈಗ ರನ್ನುಗಳೇ ಬರುತ್ತಿಲ್ಲ. ಎರಡು ವರ್ಷಗಳಿಂದ ಸತತ ವೈಫಲ್ಯ ಎದುರಿಸುತ್ತಿರುವ ವಿರಾಟ್ ಕೊಹ್ಲಿಯವರನ್ನು ವಿಶ್ರಾಂತಿ ನೆಪದಲ್ಲಿ ಬಿಸಿಸಿಐ ಕೆಲವು ಸರಣಿಗೆ ಕೈ ಬಿಟ್ಟಿತ್ತು. ಸದ್ಯ ಈಗ ನಡೆಯುತ್ತಿರುವ ವೆಸ್ಟ್ ಇಂಡೀಸ್ ತಂಡದ ವಿರುದ್ಧ ನಡೆಯುತ್ತಿರುವ ಸರಣಿಯಲ್ಲಿ ಕೈ ಬಿಟ್ಟು ಮುಂದೆ ನಡೆಯಲಿರುವ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆಡುತ್ತಾರೆ ಎಂದು ಹೇಳಲಾಗಿತ್ತು.

ಆದರೇ ಜಿಂಬಾಬ್ವೆ ವಿರುದ್ಧ ಸರಣಿಗೆ ತಂಡವನ್ನು ಪ್ರಕಟಿಸಿದಾಗ ಅಲ್ಲಿ ಪುನಃ ವಿರಾಟ್ ಕೊಹ್ಲಿಗೆ ತಂಡದಿಂದ ಕೋಕ್ ನೀಡಲಾಗಿತ್ತು. ವಿರಾಟ್ ಕೊಹ್ಲಿಗೆ ಮಾತ್ರವಲ್ಲದೇ ತಂಡದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ರಿಷಭ್ ಪಂತ್, ಜಸಪ್ರಿತ್ ಬುಮ್ರಾ, ಮಹಮದ್ ಶಮಿಗೂ ಸಹ ವಿಶ್ರಾಂತಿ ನೀಡಲಾಗಿತ್ತು. ಬಿಸಿಸಿಐ ನ ಈ ನಡೆಯಿಂದ ಎಚ್ಚೆತ್ತುಗೊಂಡಿರುವ ವಿರಾಟ್ ಕೊಹ್ಲಿ ಈಗ ತಾವು ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ ಗೆ ಲಭ್ಯವಿದ್ದೆನೆ ಎಂದು ಹೇಳಿದ್ದಾರೆ. ಈ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್ ಆಡಲು ವಿರಾಟ್ ಕೊಹ್ಲಿ ಮರಳಿ ರೆಡಿಯಾಗಿದ್ದಾರೆ.

ಬಿಸಿಸಿಐ ಬೇಕಂತಲೇ ವಿರಾಟ್ ರನ್ನು ದೂರವಿಟ್ಟಿತಾ ಎಂಬ ಪ್ರಶ್ನೆಗೆ ಉತ್ತರಗಳು ಬೇರೆ ಬಂದಿವೆ. ಸದ್ಯ ಕುಟುಂಬದ ಜೊತೆ ಲಂಡನ್ ನಲ್ಲಿ ಕಾಲ ಕಳೆಯುತ್ತಿರುವ ವಿರಾಟ್ ಕೊಹ್ಲಿ ಏಷ್ಯಾ ಕಪ್ ಗೂ ಮುನ್ನ ತಮಗೆ ಎರಡು ವಾರ ವಿಶ್ರಾಂತಿ ಬೇಕು ಎಂದು ಹೇಳಿದ್ದರಂತೆ. ಆದರೇ ಜಿಂಬಾಬ್ವೆ ಸರಣಿಗೂ ಮತ್ತು ಏಷ್ಯಾ ಕಪ್ ಗೂ ಅಷ್ಟು ಅಂತರವಿಲ್ಲ. ಹಾಗಾಗಿ ವಿರಾಟ್ ಕೊಹ್ಲಿ ಯವರನ್ನು ಜಿಂಬಾಬ್ವೆ ಸರಣಿಗೆ ಪರಿಗಣಿಸದೇ, ನೇರವಾಗಿ ಏಷ್ಯಾ ಕಪ್ ಗೆ ಪರಿಗಣಿಸಲಾಗುವುದು ಎಂದು ಬಿಸಿಸಿಐ ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.