ದಿನೇಶ್ ಕಾರ್ತಿಕ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಆಕಾಶ್ ಚೋಪ್ರಾ. ದಿನೇಶ್ ಪ್ರದರ್ಶನ ನೋಡಿದ ಮೇಲೂ ಹೇಳಿದ್ದೇನು ಗೊತ್ತೇ??

ದಿನೇಶ್ ಕಾರ್ತಿಕ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಆಕಾಶ್ ಚೋಪ್ರಾ. ದಿನೇಶ್ ಪ್ರದರ್ಶನ ನೋಡಿದ ಮೇಲೂ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ ಭಾರತ ಅರ್ಹವಾಗಿಯೇ ಜಯಗಳಿಸಿತು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ಸರ್ವಾಂಗೀಣ ಪ್ರದರ್ಶನ ತೋರಿದ ಭಾರತ ತಂಡ ಬಹಳಷ್ಟು ದಿನಗಳ ನಂತರ ಉತ್ತಮ ಕ್ರಿಕೆಟ್ ಆಡಿತು. ನಾಯಕ ರೋಹಿತ್ ಶರ್ಮಾ ಹಾಗೂ ಸದ್ಯ ಭಾರತ ತಂಡದ ಉತ್ತಮ ಫೀನಿಶರ್ ಆಗಿರುವ ದಿನೇಶ್ ಕಾರ್ತಿಕ್ ರವರ ಸಾಹಸಮಯ ಬ್ಯಾಟಿಂಗ್ ನೆರವಿನಿಂದ 190 ರನ್ ಗಳ ಬೃಹತ್ ಮೊತ್ತ ದಾಖಲಿಸಿತ್ತು. ನಂತರ ಬೌಲಿಂಗ್ ನಲ್ಲಿ ವೇಗಿ ಅರ್ಶದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಆರ್.ಅಶ್ವಿನ್,ರವಿ ಬಿಷ್ಣೋಯಿ, ರವೀಂದ್ರ ಜಡೇಜಾ ರವರ ಸಂಘಟಿತ ಬೌಲಿಂಗ್ ನಿಂದ ವೆಸ್ಟ್ ಇಂಡೀಸ್ ತಂಡವನ್ನು ಬಹುಬೇಗ ಆಲೌಟ್ ಮಾಡಲಾಯಿತು.

ಇನ್ನು ಪಂದ್ಯ ಮುಗಿದ ನಂತರ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ವಿಕೇಟ್ ಕೀಪರ್ ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ಗೆ ನೀಡಲಾಯಿತು. ಅರ್ಧ ಶತಕ ಗಳಿಸಿದ್ದ ರೋಹಿತ್ ಶರ್ಮಾಗೆ ನೀಡಲಿಲ್ಲ. ಇದನ್ನು ಸಾಕಷ್ಟು ಕ್ರಿಕೆಟ್ ಅಭಿಮಾನಿಗಳು ಪ್ರಶ್ನಿಸಿದ್ದರು. ಆದರೇ ಅಭಿಮಾನಿಗಳ ಎಲ್ಲಾ ಪ್ರಶ್ನೆಗಳಿಗೆ ಈಗ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ತಮ್ಮ ಯೂ ಟ್ಯೂಬ್ ಚಾನೆಲ್ ನಲ್ಲಿ ಉತ್ತರ ನೀಡಿದ್ದಾರೆ.

ರೋಹಿತ್ ಶರ್ಮಾ ಆರಂಭಿಕ ರಾಗಿ ಬಂದು ತಂಡಕ್ಕೆ ಉತ್ತಮ ಬುನಾದಿ ಹಾಕಿಕೊಟ್ಟರು ನಿಜ. ಆದರೇ ದಿನೇಶ್ ಕಾರ್ತಿಕ್ ಕ್ರೀಸ್ ಗೆ ಬಂದಾಗ ಭಾರತ ತಂಡ ಸಂಕಷ್ಟದಲ್ಲಿತ್ತು. ಪ್ರಮುಖ ಆರು ವಿಕೆಟ್ ಕಳೆದುಕೊಂಡು 16 ಓವರ್ ಗಳಲ್ಲಿ 135ರನ್ ಗಳಿಸಿತ್ತು. ಅಂತಹ ಸಂದರ್ಭದಲ್ಲಿ ಭಾರತ ತಂಡ 160ರನ್ ಗಳಿಸಿದರೇ ಹೆಚ್ಚು ಎಂದು ಎಲ್ಲರೂ ನೀರಿಕ್ಷಿಸಿದ್ದರು. ಆದರೇ ಪಂದ್ಯದ ಗತಿಯನ್ನೇ ಬದಲಿಸಿದ ದಿನೇಶ್ ಕಾರ್ತಿಕ್ ತಮ್ಮ ಆಕ್ರಮಣಕಾರಿ ಆಟದಿಂದ ಕೇವಲ 19 ಎಸೆತಗಳಲ್ಲಿ 41ರನ್ ಗಳಿಸಿ ತಂಡದ ಮೊತ್ತವನ್ನು 190ಕ್ಕೆ ಹಿಗ್ಗಿಸಲು ನೆರವಾದರು.

190 ರನ್ ಗಳ ದೊಡ್ಡ ಮೊತ್ತವನ್ನು ಚೇಸ್ ಮಾಡುವ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ತಂಡ ಒತ್ತಡಕ್ಕೆ ಒಳಗಾಗಿ ತನ್ನ ಪ್ರಮುಖ ವಿಕೇಟ್ ಗಳನ್ನು ಕಳೆದುಕೊಳ್ಳುತ್ತಾ ಸಾಗಿತು. ಹೀಗಾಗಿ ಭಾರತ ತಂಡ ಸುಲಭವಾಗಿ ಗೆಲುವು ಸಾಧಿಸಿತು. ಕಾರ್ತಿಕ್ ಆ ಇನ್ನಿಂಗ್ಸ್ ಆಡದಿದ್ದರೇ, ತಂಡದ ಟಾರ್ಗೆಟ್ ಕಡಿಮೆಯಾಗಿ, ವೆಸ್ಟ್ ಇಂಡೀಸ್ ತಂಡ ಹೆಚ್ಚಿನ ಒತ್ತಡಕ್ಕೆ ಒಳಗಾಗದೇ, ಗೆಲುವಿನ ದಡ ಮುಟ್ಟುತ್ತಿತ್ತು. ಹಾಗಾಗಿ ಭಾರತ ತಂಡದ ಗೆಲುವಿನ ರೂವಾರಿ ದಿನೇಶ್ ಕಾರ್ತಿಕ್. ಅರ್ಹವಾಗಿಯೇ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ