ಹಲವಾರು ಟೀಕೆಗಳನ್ನು ಎದುರಿಸುತ್ತಿರುವ ದ್ರಾವಿಡ್ ರವರಿಗೆ ಮತ್ತೊಂದು ಶಾಕ್ ನೀಡಿದ ವೆಂಕಟೇಶ್ ಪ್ರಸಾದ್. ಹೇಳಿದ್ದೇನು ಗೊತ್ತೇ??

ಹಲವಾರು ಟೀಕೆಗಳನ್ನು ಎದುರಿಸುತ್ತಿರುವ ದ್ರಾವಿಡ್ ರವರಿಗೆ ಮತ್ತೊಂದು ಶಾಕ್ ನೀಡಿದ ವೆಂಕಟೇಶ್ ಪ್ರಸಾದ್. ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವಂತೆ ರವಿಶಾಸ್ತ್ರಿ ಅವರ ನಂತರ ಭಾರತೀಯ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಬಂದವರು ನಮ್ಮ ಕನ್ನಡದ ಹೆಮ್ಮೆಯ ರಾಹುಲ್ ದ್ರಾವಿಡ್ ರವರು. ರಾಹುಲ್ ದ್ರಾವಿಡ್ ರವರು ಕೋಚ್ ಆಗಿ ಬಂದ ನಂತರ ಭಾರತೀಯ ಕ್ರಿಕೆಟ್ ತಂಡ ಇದುವರೆಗೂ ಹಲವಾರು ವಿದೇಶಿ ಸರಣಿಗಳು ಸೇರಿದಂತೆ ಹಲವಾರು ಬಲಿಷ್ಠ ತಂಡಗಳ ಎದುರು ಸರಣಿಯನ್ನು ಗೆದ್ದಿದೆ.

ಹೀಗಿದ್ದರೂ ಕೂಡ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ನಡೆಯುತ್ತಿರುವಂತಹ ಭಾರಿ ಬದಲಾವಣೆಗಳು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಯಾಕೆಂದರೆ ಕುಲ್ಲಂ ಕುಲ್ಲಾ ಆಗಿ ಮಾಜಿ ಕ್ರಿಕೆಟಿಗರು ದ್ರಾವಿಡ್ ರವರ ಕುರಿತಂತೆ ತಮ್ಮ ಅಸಮಾಧಾನದ ಹೊಗೆಯನ್ನು ಹೊರ ಹಾಕುತ್ತಿದ್ದಾರೆ. ಅದರಲ್ಲೂ ವೆಸ್ಟ್ ಇಂಡೀಸ್ ಸರಣಿಯಲ್ಲಿ ಒಬ್ಬ ಆಟಗಾರರನ್ನು ತಂಡದಲ್ಲಿ ಹಾಕಿಕೊಂಡಿರುವ ಕುರಿತಂತೆ ಮತ್ತೊಬ್ಬ ಕನ್ನಡಿಗ ಮಾಜಿ ಕ್ರಿಕೆಟಿಗ ಆಗಿರುವ ವೆಂಕಟೇಶ್ ಪ್ರಸಾದ್ ರವರು ದ್ರಾವಿಡ್ ರವರನ್ನು ಪ್ರಶ್ನಿಸಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಶ್ರೇಯಸ್ ಅಯ್ಯರ್ ರವರು ಇತ್ತೀಚಿನ ದಿನಗಳಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದಾರೆ ವೆಸ್ಟ್ ಇಂಡೀಸ್ ಸರಣಿಯಲ್ಲಿ ಕೂಡ ಅವರು ಅಷ್ಟೇನೂ ಉತ್ತಮ ಪ್ರದರ್ಶನವನ್ನು ನೀಡುತ್ತಿಲ್ಲ.

ಇಂಗ್ಲೆಂಡ್ ಸರಣಿಯಲ್ಲಿ ಕೂಡ ವಿರಾಟ್ ಕೊಹ್ಲಿ ರವರ ಬದಲಿಗೆ ಶ್ರೇಯಸ್ ಅಯ್ಯರ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಾಗ ಅವರ ಕಳಪೆ ಪ್ರದರ್ಶನವನ್ನು ನೋಡಿ ಎಲ್ಲರೂ ಕೂಡ ಅವರ ಆಯ್ಕೆಯನ್ನು ವಿರೋಧಿಸಿದ್ದರು. ಈಗ ಅದೇ ಕಳಪೆ ಫಾರ್ಮ್ ನಲ್ಲಿರುವ ಶ್ರೇಯಸ್ ಅಯ್ಯರ್ ಅವರ ಬದಲಿಗೆ ಇಶಾನ್ ಕಿಶನ್ ದೀಪಕ್ ‌ಹೂಡಾ ಸಂಜು ಸ್ಯಾಮ್ಸನ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಬಹುದಾಗಿತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿರುವುದು ನಿಜಕ್ಕೂ ಕಳಪೆ ನಿರ್ಧಾರ ಎಂಬುದಾಗಿ ವೆಂಕಟೇಶ್ ಪ್ರಸಾದ್ ಕೋಚ್ ರಾಹುಲ್ ದ್ರಾವಿಡ್ ರವರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ನಮ್ಮೊಂದಿಗೆ ಶೇರ್ ಮಾಡಿಕೊಳ್ಳಿ.