ಅಕ್ಷಯ್ ಕುಮಾರ್ ರವರ ಬಹು ನಿರೀಕ್ಷಿತ ರಾಮ ಸೇತು ಸಿನಿಮಾ ವಿರುದ್ಧ ಕೇಸ್ ದಾಖಲಿಸಲು ಮುಂದಾದ ಸುಬ್ರಮಣ್ಯನ್ ಸ್ವಾಮಿ. ಯಾಕೆ ಅಂತೇ ಗೊತ್ತೇ??
ಅಕ್ಷಯ್ ಕುಮಾರ್ ರವರ ಬಹು ನಿರೀಕ್ಷಿತ ರಾಮ ಸೇತು ಸಿನಿಮಾ ವಿರುದ್ಧ ಕೇಸ್ ದಾಖಲಿಸಲು ಮುಂದಾದ ಸುಬ್ರಮಣ್ಯನ್ ಸ್ವಾಮಿ. ಯಾಕೆ ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ಕೂಡ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಬಗ್ಗೆ ತಿಳಿದಿದೆ ಅಲ್ಲವೇ. ಅವರು ಕೆಲವು ಸಮಯಗಳ ಹಿಂದಷ್ಟೇ ರಾಮಸೇತುವಿನ ಕುರಿತಂತೆ ಸಿನಿಮಾ ಮಾಡುವ ಕುರಿತಂತೆ ಘೋಷಣೆ ಮಾಡಿದ್ದರು ಈ ಸಿನಿಮಾಗೆ ಜಾಕ್ವೆಲಿನ್ ಫರ್ನಾಂಡಿಸ್ ನಾಯಕಿಯಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ಇದೇ ವರ್ಷದ ದೀಪಾವಳಿಗೆ ದೇಶ ವಿದೇಶದಾದ್ಯಂತ ಅದ್ದೂರಿಯಾಗಿ ಬಿಡುಗಡೆ ಆಗಲು ತಯಾರಿಯನ್ನು ಮಾಡಿಕೊಂಡಿದೆ.
ಆದರೆ ಚಿತ್ರದ ಬಿಡುಗಡೆ ಈಗ ತಮಿಳುನಾಡಿನ ಬಿಜೆಪಿ ವರಿಷ್ಠ ನಾಯಕ ಆಗಿರುವ ಸುಬ್ರಮಣಿಯನ್ ಸ್ವಾಮಿ ಅವರ ಕಾರಣದಿಂದಾಗಿ ನಿಂತರು ಕೂಡ ಅಚ್ಚರಿ ಪಡಬೇಕಾಗಿಲ್ಲ ಯಾಕೆಂದರೆ ಚಿತ್ರದ ಬಿಡುಗಡೆಯ ರದ್ದನ್ನು ಕೋರಿ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಹೇಳಲಾಗುತ್ತಿದೆ. ಹೌದು ಗೆಳೆಯರೇ ಸಿನಿಮಾ ಇನ್ನೂ ಬಿಡುಗಡೆ ಆಗುವ ದಿನಾಂಕವನ್ನು ನಿಗದಿಪಡಿಸಿರುವುದು ಇದೇ ಅಕ್ಟೋಬರ್ 24ರಂದು ಆದರೆ ಸುಬ್ರಮಣ್ಯನ್ ಸ್ವಾಮಿ ರಾಮ ಸೇತು ಚಿತ್ರತಂಡ ಹಾಗೂ ಅಕ್ಷಯ್ ಕುಮಾರ್ ಅವರ ವಿರುದ್ಧ ಪ್ರಕರಣವನ್ನು ದಾಖಲಿಸುವ ನಿರ್ಧಾರವನ್ನು ಮಾಡಿದ್ದಾರೆ ಅದಕ್ಕೆ ಇರುವಂತಹ ಕಾರಣಗಳಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ನಿಮಗೆಲ್ಲರಿಗೂ ತಿಳಿದಿರುವಂತೆ ಅಕ್ಷಯ್ ಕುಮಾರ್ ಅವರು ಕೆನಡಾ ದೇಶದ ಪೌರತ್ವವನ್ನು ಹೊಂದಿರುವ ನಾಗರಿಕ ಆಗಿದ್ದಾರೆ. ರಾಮ ಸೇತು ಸಿನಿಮಾದಲ್ಲಿ ಅವರು ಇರುವ ಸತ್ಯವನ್ನು ತೋರಿಸುವುದಕ್ಕಿಂತ ಹೆಚ್ಚಾಗಿ ಸುಳ್ಳನ್ನು ಸಿನಿಮಾದ ಮೂಲಕ ಪ್ರೇಕ್ಷಕರಲ್ಲಿ ಹರಡುವ ಕಾರ್ಯವನ್ನು ಮಾಡಲಿದ್ದಾರೆ ಎಂಬುದಾಗಿ ಸುಬ್ರಮಣ್ಯನ್ ಸ್ವಾಮಿ ರವರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ವಿದೇಶಿ ಪೌರತ್ವವನ್ನು ಹೊಂದಿರುವ ಅಕ್ಷಯ್ ಕುಮಾರ್ ರವರು ಇದಕ್ಕೂ ಮುನ್ನ ತಮ್ಮ ದೇಶಕ್ಕೆ ಮರಳುವುದು ಉತ್ತಮ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿ ಚಿತ್ರ ಬಿಡುಗಡೆ ಮಾಡದಂತೆ ತಡೆಯಾಜ್ಞೆಯನ್ನು ಕೋರುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದಾಗಿ ಮೂಲಗಳು ತಿಳಿಸಿವೆ. ಇದು ಮುಂದಿನ ದಿನಗಳಲ್ಲಿ ಯಾವ ಹಂತವನ್ನು ತಲುಪಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.