ಆಯ್ಕೆ ಸಮಿತಿಗೆ ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ ವಾಸ್ಸಿಮ್: ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡಬೇಕು ಅಂತೇ ಗೊತ್ತೇ??
ಆಯ್ಕೆ ಸಮಿತಿಗೆ ಪರೋಕ್ಷವಾಗಿ ಸಂದೇಶ ರವಾನೆ ಮಾಡಿದ ವಾಸ್ಸಿಮ್: ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟಿಂಗ್ ಮಾಡಬೇಕು ಅಂತೇ ಗೊತ್ತೇ??
ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡ ಕ್ರಮ ಅಂಕಗಳಲ್ಲಿ ತನ್ನ ಹೊಸ ಹೊಸ ಬದಲಾವಣೆಗಳನ್ನು ಹಾಗೂ ಪ್ರಯೋಗಾತ್ಮಕ ವಿಚಾರಗಳನ್ನು ಕೂಡ ಪ್ರಯೋಗಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆದರೆ ಇದೇ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಆಗಿರುವ ವಾಸಿಂ ಜಾಫರ್ ರವರು ಮೂರನೇ ಕ್ರಮಾಂಕದಲ್ಲಿ ಯಾರು ಆಡಬೇಕು ಎನ್ನುವುದರ ಕುರಿತಂತೆ, ಪರೋಕ್ಷವಾಗಿಯೇ ಸೂಚನೆ ಹಾಗೂ ವಾರ್ನಿಂಗ್ ಅನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ.
ಹೌದು ಗೆಳೆಯರೇ ಪ್ರತಿಯೊಂದು ಫಾರ್ಮೆಟ್ ಗಳಲ್ಲಿ ಅದರಲ್ಲೂ ಕೂಡ ನಿಯಮಿತ ಓವರ್ ಗಳ ಫಾರ್ಮ್ಯಾಟ್ ನಲ್ಲಿ ಮೂರನೇ ಕ್ರಮಾಂಕ ಎನ್ನುವುದು ಅತ್ಯಂತ ಜವಾಬ್ದಾರಿಯುತ ಕ್ರಮಾಂಕ ವಾಗಿರುತ್ತದೆ ತಂಡ ಈ ಆಟಗಾರನ ಮೇಲೆ ಹಾಗೂ ಈತನ ಅನುಭವದ ಮೇಲೆ ಅವಲಂಬಿತವಾಗಬೇಕಾದ ಪರಿಸ್ಥಿತಿ ಕೂಡ ಕಂಡುಬರುತ್ತದೆ ಹಾಗಾಗಿ ಆತ ಆ ಕ್ರಮಾಂಕವನ್ನು ಆಧರಿಸಿ ಆಡುವಂತಹ ಆಟಗಾರ ಆಗಿರಬೇಕು. ಹೀಗಾಗಿ ಬಿಸಿಸಿಐಗೆ ಟಿ20 ಯಲ್ಲಿ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಅವರನ್ನು ಆಡಿಸಬೇಕು ಎಂಬುದಾಗಿ ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. 2019 ರಿಂದ ಇದುವರೆಗೂ ಕೂಡ ವಿರಾಟ್ ಕೊಹ್ಲಿ ಅವರ ಬ್ಯಾಟಿನಿಂದ ಅಷ್ಟೊಂದು ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲವಾದರೂ ಕೂಡ ಒಮ್ಮೆ ವಿರಾಟ್ ಕೊಹ್ಲಿ ಫಾರ್ಮ್ ಗೆ ಬಂದರೆ ತಂಡದ ಮ್ಯಾಚ್ ವಿನ್ನರ್ ಪರ್ಫಾರ್ಮರ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ವಾಸಿಂ ಜಾಫರ್ ರವರು ಭರವಸೆ ವ್ಯಕ್ತಪಡಿಸಿದ್ದಾರೆ.
ಎಲ್ಲದಕ್ಕಿಂತ ಪ್ರಮುಖವಾಗಿ ಆರಂಭಿಕ ಆಟಗಾರರಾಗಿ ಕೆ ಎಲ್ ರಾಹುಲ್ ರವರು ಹಾಗೂ ರೋಹಿತ ಶರ್ಮ ಜೊತೆಯಾಗಿ ಆಡಿದರೆ ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ರವರು ತಂಡವನ್ನು ಪ್ರತಿನಿಧಿಸಿದರೆ ಉಳಿದ ಕ್ರಮಾಂಕದಲ್ಲಿ ರಿಷಬ್ ಪಂತ್ ಸಂಜು ಸ್ಯಾಮ್ಸಂಗ್ ಹಾಗೂ ಇಶಾನ್ ಕಿಶನ್ ಸ್ಥಾನವನ್ನು ಅದಲು-ಬದಲು ಮಾಡಿಕೊಂಡು ಆಡಿದರೆ ಖಂಡಿತವಾಗಿ ಟೀಮ್ ಇಂಡಿಯಾ ಮುಂದಿನ ದಿನಗಳಲ್ಲಿ ಅದರಲ್ಲೂ ಕೂಡ t20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿರಲಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ವಾಸಿಮ್ ಜಾಫರ್ ಹೇಳಿದ್ದಾರೆ. ವಾಸಿಮ್ ಜಾಫರ್ ಅವರ ಈ ಹೇಳಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ.