ಮುಂದಿನ ಏಕದಿನ ವಿಶ್ವಕಪ್ ವೇಳೆಗೆ ಬಾರಿ ಹಿನ್ನೆಡೆಯಾಗುವ ಸಾಧ್ಯತೆ: ರೋಹಿತ್, ದ್ರಾವಿಡ್ ಹಾಗೂ ಬಿಸಿಸಿಐ ಗೆ ಟೆನ್ಶನ್ ಶುರು. ಏನಾಗುತ್ತಿದೆ ಗೊತ್ತೇ ಟೀಮ್ ಇಂಡಿಯಾ ದಲ್ಲಿ??
ಮುಂದಿನ ಏಕದಿನ ವಿಶ್ವಕಪ್ ವೇಳೆಗೆ ಬಾರಿ ಹಿನ್ನೆಡೆಯಾಗುವ ಸಾಧ್ಯತೆ: ರೋಹಿತ್, ದ್ರಾವಿಡ್ ಹಾಗೂ ಬಿಸಿಸಿಐ ಗೆ ಟೆನ್ಶನ್ ಶುರು. ಏನಾಗುತ್ತಿದೆ ಗೊತ್ತೇ ಟೀಮ್ ಇಂಡಿಯಾ ದಲ್ಲಿ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಸದ್ಯದ ಮಟ್ಟಿಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಸರಣಿಯನ್ನು ಆಡುತ್ತಿದೆ. ಇದಾದ ನಂತರ ಜಿಂಬಾಬ್ವೆ ಸರಣಿಯ ನಂತರ ನೇರವಾಗಿ ಏಷ್ಯಾ ಕಪ್ ಅನ್ನು ಆಡಲಿರುವ ಭಾರತೀಯ ಕ್ರಿಕೆಟ್ ತಂಡ ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಗಾಗಿ ಸರ್ವಸನ್ನಧ್ದವಾಗಿದೆ ಎಂದು ಹೇಳಬಹುದಾಗಿದೆ ತಯಾರಿಯೂ ಕೂಡ ಅದೇ ದೃಷ್ಟಿಕೋನದಲ್ಲಿ ನಡೆಯುತ್ತಿದೆ.
ಇನ್ನು ಭಾರತೀಯ ಕ್ರಿಕೆಟ್ ತಂಡ ಸದ್ಯದ ಮಟ್ಟಿಗೆ ಈ ಬಾರಿ ನಡೆಯಲಿರುವ ಟಿ 20 ವಿಶ್ವಕಪ್ ಗೆಲ್ಲಲೇ ಬೇಕು ಎನ್ನುವ ದೃಷ್ಟಿಯಲ್ಲಿ ಹಲವಾರು ಸರ್ಕಸ್ ಗಳನ್ನು ಮಾಡುತ್ತಿದೆ ಈಗಾಗಲೇ ಈ ವರ್ಷದಲ್ಲಿ ಏಳು ನಾಯಕರ ಬದಲಾವಣೆ ಕೂಡ ನಡೆದಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇದಕ್ಕೆ ಪ್ರಮುಖ ಕಾರಣ ಕೂಡ ಒಂದಿದ್ದು ಕಳೆದ ವರ್ಷ ನಡೆದಿರುವ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ನಾಲ್ಕು ಹಂತಕ್ಕೆ ಕೂಡ ತೇರ್ಗಡೆ ಆಗದೆ ಲೀಗ್ ಹಂತದಲ್ಲಿಯೇ ಸೋಲನ್ನು ಅನುಭವಿಸಿ ದೊಡ್ಡ ಮಟ್ಟದ ಮುಖಭಂಗವನ್ನು ಅನುಭವಿಸಿತ್ತು.
ಹೀಗಾಗಿ ಈ ಬಾರಿ ಬಿಸಿಸಿಐ ಸೇರಿದಂತೆ ನಾಯಕ ರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ರವರು ಈ ಬಾರಿ ಗೆಲ್ಲಲೇ ಬೇಕು ಎನ್ನುವ ಕಾರಣಕ್ಕಾಗಿ ಹಲವಾರು ಕಾರ್ಯತಂತ್ರಗಳನ್ನು ರೂಪಿಸಿಕೊಂಡಿದ್ದಾರೆ. ಇವೆಲ್ಲ ಟಿ ಟ್ವೆಂಟಿ ವಿಶ್ವಕಪ್ ಗಾಗಿ ನಡೆಯುತ್ತಿರುವ ತಯಾರಿಯಾದರೆ ಮುಂದಿನ ವರ್ಷ ಭಾರತದಲ್ಲಿಯೇ ಏಕದಿನ ವಿಶ್ವಕಪ್ ಕೂಡ ನಡೆಯಲಿದೆ.
ಇದು ಹಲವಾರು ಅನುಭವಿ ಆಟಗಾರರಿಗೆ ಕೊನೆಯ ಏಕದಿನ ವಿಶ್ವಕಪ್ ಆಗಿ ಪರಿಣಮಿಸಿದರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. 2011ರಲ್ಲಿ ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದ ನಂತರ ಯಾರೂ ಕೂಡ ಏಕದಿನ ವಿಶ್ವ ಕಪ್ ನಲ್ಲಾಗಲಿ ಅಥವಾ ಟಿ20 ವಿಶ್ವಕಪ್ ನಲ್ಲಾಗಲಿ ಭಾರತಕ್ಕೆ ಟ್ರೋಫಿಯನ್ನು ಇದುವರೆಗೂ ತಂದಿಲ್ಲ. ಹೀಗಾಗಿ ನಾಯಕರೋಹಿತ್ ಶರ್ಮ ಹಾಗೂ ಕೋಚ್ ರಾಹುಲ್ ದ್ರಾವಿಡ್ ರವರಿಗೆ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ನಷ್ಟೇ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಕೂಡ ಪ್ರಾಮುಖ್ಯತೆಯನ್ನು ಹೊಂದಿದೆ.
ಆದರೆ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಗೂ ಮುನ್ನವೇ ಭಾರತ ಕ್ರಿಕೆಟ್ ತಂಡಕ್ಕೆ ಒಂದು ಶಾಕಿಂಗ್ ವಿಚಾರ ಸಿಗಲಿದೆ ಎಂಬುದಾಗಿ ಗಾಳಿ ಸುದ್ದಿ ಬಲವಾಗಿ ಹರಡುತ್ತಿದೆ. ಹೌದು ಗೆಳೆಯರೇ, ಭಾರತೀಯ ಕ್ರಿಕೆಟ್ ತಂಡಕ್ಕೆ ಕಪಿಲ್ ದೇವ್ ಅವರ ನಂತರ ಒಬ್ಬ ಪರ್ಫೆಕ್ಟ್ ವೇಗಿ ಹಾಗೂ ಬ್ಯಾಟಿಂಗ್ ಆಲ್-ರೌಂಡರ್ ಸಿಕ್ಕಿದ್ದಾರೆ ಎಂದರೆ ಅದು ಹಾರ್ದಿಕ್ ಪಾಂಡ್ಯ ಮಾತ್ರ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ತಂಡದ ಪ್ರಮುಖ ಆಟಗಾರನಾಗಿ ಹಲವಾರು ಪಂದ್ಯಗಳನ್ನು ಭಾರತದ ತಂಡಕ್ಕೆ ಗೆಲ್ಲಿಸಿ ಕೊಟ್ಟಿರುವ ಅದ್ಭುತ ಪ್ರತಿಭೆ ಎಂದು ಹೇಳಬಹುದಾಗಿದೆ.
ಕಳೆದ ವರ್ಷ ಹಿಂಜರಿಯ ಕಾರಣದಿಂದಾಗಿ ತಂಡದಿಂದ ಹೊರಗೆ ಉಳಿದಿದ್ದ ಹಾರ್ದಿಕ್ ಪಾಂಡ್ಯ ಐಪಿಎಲ್ ನಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಮೊದಲ ಆವೃತ್ತಿಯಲ್ಲಿಯೇ ಕಪ್ ಗೆದ್ದು ಮತ್ತೆ ಭಾರತೀಯ ಕ್ರಿಕೆಟ್ ತಂಡಕ್ಕೆ ವಾಪಸು ಮರಳಲು ಯಶಸ್ವಿಯಾಗಿದ್ದಾರೆ.
ವಾಪಸು ಮರಳಿರುವ ಹಾರ್ದಿಕ್ ಪಾಂಡ್ಯ ಈಗಾಗಲೇ ತಮ್ಮ ಹಳೆಯ ಫಾರ್ಮ್ ನಲ್ಲಿ ಮುಂದುವರೆದು ಮತ್ತೊಮ್ಮೆ ಭಾರತೀಯ ಕ್ರಿಕೆಟ್ ತಂಡದ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮಾ ರವರ ಟ್ರಂಪ್ ಕಾರ್ಡ್ ಪ್ಲೇಯರ್, ಹಾರ್ದಿಕ್ ಪಾಂಡ್ಯ ಎಂದರೆ ನಿಜಕ್ಕೂ ಕೂಡ ಅತಿಶಯೋಕ್ತಿಯಲ್ಲ. ಆದರೆ ಟಿ20 ವಿಶ್ವಕಪ್ ಮುಗಿಯುತಿದ್ದಂತೆ ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟ್ ಪ್ರೇಮಿಗಳಿಗೆ ದೊಡ್ಡ ಮಟ್ಟದ ಆಶ್ಚರ್ಯವನ್ನು ನೀಡಲು ಹೊರಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಹೌದು ಗೆಳೆಯರೇ ಈ ಬಾರಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮುಗಿಯುತ್ತಿದ್ದಂತೆ ಏಕದಿನ ಕ್ರಿಕೆಟ್ ತಂಡಕ್ಕೆ ನಿವೃತ್ತಿಯನ್ನು ಘೋಷಿಸುವ ನಿರ್ಧಾರವನ್ನು ಹಾರ್ದಿಕ್ ಪಾಂಡ್ಯ ಮಾಡಿದ್ದಾರೆ ಎಂಬುದಾಗಿ ಇಂಡಿಯಾ ಟುಡೇ ಗೆ ನೀಡಿರುವ ಸಂದರ್ಶನದಲ್ಲಿ ತಿಳಿದು ಬಂದಿದೆ. ಇದಕ್ಕೆ ಅವರು ಸಂಪೂರ್ಣ ವಿವರವಾದ ಕಾರಣವನ್ನು ಕೂಡ ಹೇಳಿದ್ದು ಒಬ್ಬ ಕ್ರಿಕೆಟ್ ಪ್ರೇಮಿಯಾಗಿ ಅವರ ಸ್ಟ್ರಗಲ್ ಅನ್ನು ಕೂಡ ನಾವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.
ಟಿ ಟ್ವೆಂಟಿ ಕ್ರಿಕೆಟ್ ಹಾಗೂ ಏಕದಿನ ಕ್ರಿಕೆಟ್ 2 ಫಾರ್ಮ್ಯಾಟ್ ಗಳ ಬ್ಯುಸಿ ಶೆಡ್ಯೂಲ್ ಕಾರಣದಿಂದಾಗಿ ಫಿಟ್ನೆಸ್ ಅನ್ನು ಪದೇಪದೇ ಕಳೆದುಕೊಳ್ಳುತ್ತಿರುವುದು ಇದು ದೈಹಿಕ ಆರೋಗ್ಯದ ಏರುಪೇರಿಗೂ ಕೂಡ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಅಂದರೆ ಟಿ ಟ್ವೆಂಟಿ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ತಂಡಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂಬುದಾಗಿ ಹೇಳಿದ್ದಾರೆ ಇದು ಮುಂದಿನ ದಿನಗಳಲ್ಲಿ ಎಷ್ಟು ನಿಜವಾಗಿ ಪರಿಣಮಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಯಾಕೆಂದರೆ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಅತ್ಯಂತ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಅವರು ತಂಡದಲ್ಲಿ ಇರಬೇಕಾದ್ದು ಪ್ರಮುಖವಾಗಿದೆ ಇದರ ಮೇಲೆ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.