ಇಬ್ಬರು ಯುವ ಆಟಗಾರರ ಭವಿಷ್ಯ ಅಪಾಯದಲ್ಲಿ: ಏನೋ ಮಾಡಲು ಹೋಗಿ, ಮತ್ತಿಬ್ಬರ ಭವಿಷ್ಯ ಹಾಳು ಮಾಡುತ್ತಿದ್ದಾರೆಯೇ ದ್ರಾವಿಡ್??

ನಮಸ್ಕಾರ ಸ್ನೇಹಿತರೆ ಭಾರತೀಯ ಕ್ರಿಕೆಟ್ ತಂಡ ಸಾಕಷ್ಟು ಪ್ರಯೋಗಾತ್ಮಕ ವಿಚಾರಗಳನ್ನು ಸದ್ಯ ನಡೆಯುತ್ತಿರುವ ವಿದೇಶಿ ಸರಣಿಗಳಲ್ಲಿ ಪ್ರಯೋಗ ಮಾಡುತ್ತಿದೆ ಎಂದು ಹೇಳಬಹುದಾಗಿದೆ. ಕೋಚ್ ರಾಹುಲ್ ದ್ರಾವಿಡ್ ಹಾಗೂ ನಾಯಕ ರೋಹಿತ್ ಶರ್ಮ ಹಲವಾರು ಬದಲಾವಣೆಗಳನ್ನು ಈಗಾಗಲೇ ನಡೆಸುತ್ತಿದ್ದು ಇದು ತಂಡದಲ್ಲಿ ವರ್ಕೌಟ್ ಆಗುತ್ತಿದೆ ಆದರೂ ಕೂಡ ಮುಂದಿನ ದಿನಗಳಲ್ಲಿ ಅಂದರೆ ಪ್ರಮುಖವಾಗಿರುವ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ನಲ್ಲಿ ಯಾವ ರೀತಿ ಇದು ಕಾರ್ಯರೂಪಕ್ಕೆ ಬರುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ.

ಅದರಲ್ಲೂ ಪ್ರಮುಖವಾಗಿ ಒಬ್ಬ ಯುವ ಆಲ್ ರೌಂಡರ್ ಆಟಗಾರನಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಪಡೆಯಲು ಕೋಚ್ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ತಡೆಗೋಡೆಯಾಗಿ ನಿಂತಿದ್ದಾರೆ ಅಥವಾ ಆತನ ಭವಿಷ್ಯವನ್ನು ಇನ್ನು ಮುಂದಕ್ಕೆ ದೂಡುತ್ತಿದ್ದಾರೆ ಎಂಬುದಾಗಿ ಮಾಜಿ ಕ್ರಿಕೆಟಿಗೆ ಕೆ ಶ್ರೀಕಾಂತ್ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಹೌದು ಗೆಳೆಯರೇ ಆಟಗಾರ ಇನ್ಯಾರು ಅಲ್ಲ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಭಾರತೀಯ ಕ್ರಿಕೆಟ್ ತಂಡಕ್ಕೆ ಕೂಡ ಇತ್ತೀಚಿನ ದಿನಗಳಲ್ಲಿ ಆಯ್ಕೆಯಾಗಿದ್ದ ದೀಪಕ್ ಹೂಡ. ಹೌದು ಗೆಳೆಯರೇ ದೀಪಕ್ ರವರನ್ನು ಐರ್ಲೆಂಡ್ ವಿರುದ್ಧದ ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು. ಅಲ್ಲಿ ಶತಕದ ಆಟವನ್ನು ಭರ್ಜರಿಯಾಗಿ ನೀಡಿದ ಆಲ್-ರೌಂಡರ್ ದೀಪಕ್ ಹೂಡ ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಭರವಸೆಯ ಹಾಗೂ ನಂಬುಗಸ್ತ ಆಲ್-ರೌಂಡರ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಭಾವಿಸಲಾಗಿತ್ತು. ಇಂಗ್ಲೆಂಡ್ ವಿರುದ್ಧದ ಪ್ರವಾಸದಲ್ಲಿ ಕೂಡ ಒಂದು ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಅತ್ಯಂತ ಚಿಕ್ಕ ಬ್ಯಾಟಿಂಗ್ ಕ್ರಮಾಂಕವನ್ನು ಆಡಿದರೂ ಕೂಡ ಅತಿ ಕಡಿಮೆ ಎಸೆತಗಳಲ್ಲಿ ಅತ್ಯಂತ ಹೆಚ್ಚಿನ ಗಳನ್ನು ಬಾರಿಸಲು ಯಶಸ್ವಿಯಾದರು.

ಆದರೂ ಕೂಡ ಅವರಿಗೆ ವಿರಾಟ್ ಕೊಹ್ಲಿ ರವರು ಕಳಪೆ ಫಾರ್ಮ್ ನಿಂದ ತಂಡದಿಂದ ಹೊರಹೋದ ಸಂದರ್ಭದಲ್ಲಿ ದೀಪಕ್ ಹೂಡಾಗೆ ಅವಕಾಶವನ್ನು ನೀಡುವ ಬದಲು ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶವನ್ನು ನೀಡಲಾಗಿತ್ತು ಆದರೆ ಶ್ರೇಯಸ್ ಅಯ್ಯರ್ ಅತ್ಯಂತ ಕಳಪೆ ಪ್ರದರ್ಶನವನ್ನು ತೋರ್ಪಡಿಸಿದ್ದರು. ಇಷ್ಟೊಂದು ಅತ್ಯುತ್ತಮ ಪ್ರದರ್ಶನ ನೀಡಿದರು ಕೂಡ ದೀಪಕ್ ಅವರಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಸಿಗುತ್ತಿಲ್ಲ ಆಡಿದ್ದು ಕೇವಲ ನಾಲ್ಕೇ ಅಂತಾರಾಷ್ಟ್ರೀಯ ಟಿ 20 ಕ್ರಿಕೆಟ್ ಪಂದ್ಯಗಳಾದರೂ ಕೂಡ 68.33 ರ ಸರಾಸರಿಯಲ್ಲಿ ಬರೋಬ್ಬರಿ 205 ರನ್ನುಗಳನ್ನು ಬಾರಿಸಿದ್ದಾರೆ. ಏನೇ ಆದರೂ ಮುಂದಿನ ಸರಣಿಗಳಲ್ಲಿ ಇವರಿಗೆ ಅವಕಾಶ ಸಿಗಲೇಬೇಕು ವಿಶ್ವಕಪ್ ಆಡುವಂತಹ ಸಾಮರ್ಥ್ಯ ಇವರಲ್ಲಿ ಕೂಡ ಇದೆ ಎಂಬುದಾಗಿ ಎಲ್ಲರೂ ವಾದಿಸುತ್ತಿದ್ದಾರೆ.