ಕೆ.ಎಲ್ ಗೆ ಅಗ್ನಿ ಪರೀಕ್ಷೆ: ಎಲ್ಲವೂ ಸರಿ ಹೋದ ಮೇಲು ತಂಡಕ್ಕೆ ಮರಳಲು ಅಡ್ಡಗಾಲು ಹಾಕಬಹುದಾದ ವ್ಯಕ್ತಿ ಯಾರು ಗೊತ್ತೇ?? ಇವರಿಗೆ ರಾಹುಲ್ ಮೇಲೆ ನಂಬಿಕೆ ಇಲ್ಲವೇ?

ಕೆ.ಎಲ್ ಗೆ ಅಗ್ನಿ ಪರೀಕ್ಷೆ: ಎಲ್ಲವೂ ಸರಿ ಹೋದ ಮೇಲು ತಂಡಕ್ಕೆ ಮರಳಲು ಅಡ್ಡಗಾಲು ಹಾಕಬಹುದಾದ ವ್ಯಕ್ತಿ ಯಾರು ಗೊತ್ತೇ?? ಇವರಿಗೆ ರಾಹುಲ್ ಮೇಲೆ ನಂಬಿಕೆ ಇಲ್ಲವೇ?

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಆಡುತ್ತಿದೆ. ಈ ಹಿಂದೆ ಹಲವಾರು ಬಾರಿ ಭಾರತೀಯ ಕ್ರಿಕೆಟ್ ತಂಡ ಇತ್ತೀಚಿನ ದಿನಗಳಲ್ಲಿ ಹಲವಾರು ಪ್ರಯೋಗಾತ್ಮಕ ಬದಲಾವಣೆಗಳನ್ನು ತರುತ್ತಿರುವುದನ್ನು ನಾವು ಗಮನಿಸುತ್ತಿದ್ದೇವೆ. ಅದಕ್ಕೆ ಒಂದು ದೊಡ್ಡ ಹಾಗೂ ಜೀವಂತ ಉದಾಹರಣೆ ಹೇಳುವುದಾದರೆ ಭಾರತೀಯ ಕ್ರಿಕೆಟ್ ತಂಡ ಈ ವರ್ಷ ಇಲ್ಲಿಯವರೆಗೂ ಬರೋಬ್ಬರಿ 7 ನಾಯಕರನ್ನು ಟ್ರೈ ಮಾಡಿದೆ.

ಅಷ್ಟೇ ಯಾಕೆ ಇತ್ತೀಚಿಗಷ್ಟೇ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿಟ್ವೆಂಟಿ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ರವರನ್ನು ರೋಹಿತ್ ಶರ್ಮಾ ರವರ ಜೊತೆಗೆ ಓಪನರ್ ಆಗಿ ಕಳುಹಿಸಿ ಕೊಡಲಾಗಿತ್ತು. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೆ ಎಲ್ ರಾಹುಲ್ ರವರು ಭಾರತೀಯ ಕ್ರಿಕೆಟ್ ತಂಡದ ಅದರಲ್ಲೂ ಟಿ ಟ್ವೆಂಟಿ ಕ್ರಿಕೆಟ್ ತಂಡದ ಖಾಯಂ ಓಪನರ್ ಆಗಿದ್ದರು ಆದರೆ ಇಂಜುರಿಯ ಕಾರಣದಿಂದಾಗಿ ಅವರು ಈಗಾಗಲೇ ಈ ವರ್ಷದಲ್ಲಿ ಬಹುತೇಕ ಎಲ್ಲಾ ಸರಣಿಗಳನ್ನು ಮಿಸ್ ಮಾಡಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಆದರೆ ವಿಶ್ವಕಪ್ ಹಿನ್ನಲೆಯಲ್ಲಿ ಟೀಮ್ ಮ್ಯಾನೇಜ್ಮೆಂಟ್ ಹಾಗೂ ಕೋಚ್ ರಾಹುಲ್ ದ್ರಾವಿಡ್ ರವರು ಕೆ ಎಲ್ ರಾಹುಲ್ ರವರ ಮೇಲೆ ನಂಬಿಕೆ ಕಳೆದುಕೊಂಡ ರೀತಿಯಲ್ಲಿ ಆಡುತ್ತಿದ್ದಾರೆ ಎಂದು ಹೇಳಬಹುದಾಗಿದೆ ಅದಕ್ಕೆ ವ್ಯಾಲಿಡ್ ಕಾರಣ ಕೂಡ ಇದೆ.

ಯಾಕೆಂದರೆ ಈ ಎಲ್ಲಾ ಪ್ರಯತ್ನಗಳು ವಿಶ್ವಕಪ್ ಹಿನ್ನೆಲೆಯಲ್ಲಿ ನಡೆಯುತ್ತಿದೆ. ಅದೂ ಕೂಡ ರಾಹುಲ್ ರವರ ಓಪನರ್ ಸ್ಥಾನದಲ್ಲಿಯೇ ಈಗಾಗಲೇ ರಿಷಭ್ ಪಂತ್ ಸೂರ್ಯ ಕುಮಾರ್ ಯಾದವ್ ಸೇರಿದಂತೆ ಹಲವಾರು ಆಟಗಾರರ ಪ್ರಯೋಗ ತಂಡದಲ್ಲಿ ನಡೆಯುತ್ತಿದೆ. ಇದು ತಂಡದ ಕೋಚ್ ಅಥವಾ ಟೀಮ್ ಮ್ಯಾನೇಜ್ಮೆಂಟ್ ರಾಹುಲ್ ರವರ ಮೇಲೆ ನಂಬಿಕೆ ಕಳೆದುಕೊಂಡಿದೆಯಾ ಎಂಬ ಅನುಮಾನವನ್ನು ಮೂಡಿಸುವಂತೆ ಮಾಡುತ್ತಿದೆ.