ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಬಿಗ್ ನ್ಯೂಸ್: ಕಿಂಗ್ ಕೊಹ್ಲಿ ಭಾರತ ತಂಡಕ್ಕೆ ವಾಪಸ್ಸಾಗುವುದು ಯಾವಾಗ ಅಂತೇ ಗೊತ್ತೇ?? ನೇರವಾಗಿ ಎಲ್ಲಿಗೆ ಬರುತ್ತಾರಂತೆ ಗೊತ್ತೇ??

4,137

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಜೀವನದ ಇತಿಹಾಸದಲ್ಲಿ ಅತ್ಯಂತ ಕಳಪೆ ಫಾರ್ಮ್ ನಲ್ಲಿ ಈಗ ಇದ್ದಾರೆ. ಹೀಗಾಗಿ ಅವರನ್ನು ತಂಡದಿಂದ ಬಿಸಿಸಿಐ ಆಯ್ಕೆ ಗಾರರು ಕೈ ಬಿಡುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಅದರಲ್ಲೂ ವಿಶೇಷವಾಗಿ ಅವರು ಈ ಬಾರಿಯ ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ತಂಡದಲ್ಲಿ ಆಯ್ಕೆ ಆಗಲೇಬೇಕು ಎನ್ನುವ ಇರದೇನು ಹೊಂದಿದ್ದು ದೇಶಕ್ಕಾಗಿ ಕಪ್ ಗೆಲ್ಲುವ ಸಾಧನೆಯನ್ನು ತನ್ನ ಪರಮೋಚ್ಚ ಧ್ಯೇಯ ಎಂದು ವಿರಾಟ್ ಕೊಹ್ಲಿ ಈಗಾಗಲೇ ಹೇಳಿದ್ದಾರೆ. ಆದರೆ ವಿರಾಟ್ ಕೊಹ್ಲಿ ರವರು ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿಶ್ರಾಂತಿ ತೆಗೆದುಕೊಳ್ಳುತ್ತಾರೆ ವೆಸ್ಟ್ ಇಂಡೀಸ್ ಸರಣಿಗೆ ಕೂಡ ಅವರು ಆಯ್ಕೆಯಾಗುವುದಿಲ್ಲ.

ಆದರೆ ಸಾಮಾನ್ಯವಾಗಿ ಕೇಳಿ ಬಂದ ಸುದ್ದಿ ಪ್ರಕಾರ ಏಷ್ಯಾಕಪ್ ಗೂ ಮುನ್ನ ವಿರಾಟ್ ಕೊಹ್ಲಿ ರವರು ಜಿಂಬಾಬ್ವೆ ವಿರುದ್ಧದ ಸರಣಿಗೆ ಆಯ್ಕೆಯಾಗಿ ಅಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ ಮಾತ್ರ ಅವರನ್ನು ಏಷ್ಯಾ ಕಪ್ ಹಾಗೂ ವಿಶ್ವಕಪ್ ತಂಡಗಳಿಗೆ ಆಯ್ಕೆ ಮಾಡಲಾಗುತ್ತದೆ ಎಂಬುದಾಗಿ ಬಿಸಿಸಿಐ ಮೂಲಗಳು ಹೇಳಿದ್ದವು. ಆದರೆ ಆಶ್ಚರ್ಯ ಎಂಬಂತೆ ಜಿಂಬಾಬ್ ವಿರುದ್ಧ ಸರಣಿಗೆ ಪ್ರಕಟವಾದ ತಂಡದಲ್ಲಿ ವಿರಾಟ್ ಕೊಹ್ಲಿ ಅವರ ಹೆಸರು ಇರಲಿಲ್ಲ. ಇದರಿಂದಾಗಿ ಎಲ್ಲರೂ ಕೂಡ ವಿರಾಟ್ ಕೊಹ್ಲಿ ರವರನ್ನು ಭಾರತೀಯ ಕ್ರಿಕೆಟ್ ತಂಡದಿಂದ ಹೊರ ಹಾಕುವ ಸಂಚು ನಡೆಯುತ್ತಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಂಡಿದ್ದರು ಆದರೆ ವಿರಾಟ್ ಕೊಹ್ಲಿ ಹಾಗೂ ಕ್ರಿಕೆಟ್ ಅಭಿಮಾನಿಗಳಿಗೆ ಈಗ ಆಶ್ಚರ್ಯಕರ ಸುದ್ದಿ ಎಂದು ಬಿಸಿಸಿಐ ಆಯ್ಕೆಗಾರರ ಮೂಲದಿಂದ ಕೇಳಿಬರುತ್ತಿದೆ. ಹಾಗಿದ್ದರೆ ಅದೇನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ಗೆಳೆಯರೆ ಆಗಸ್ಟ್ ನಿಂದ ಪ್ರಾರಂಭವಾಗಲಿರುವ ಏಷ್ಯಾಕಪ್ ಟಿ20 ಟೂರ್ನಮೆಂಟ್ ಯುಎಇ ನಲ್ಲಿ ಪ್ರಾರಂಭವಾಗಲಿದ್ದು ಶ್ರೀಲಂಕಾ ಇದರ ಆಥಿತ್ಯವನ್ನು ವಹಿಸಿಕೊಂಡಿದೆ. ಬಿಸಿಸಿಐ ಆಯ್ಕೆಗಾರರು ಹೇಳಿರುವ ಪ್ರಕಾರ ವಿರಾಟ್ ಕೊಹ್ಲಿ ರವರು ಇದೇ ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಆಗುವ ಮೂಲಕ ದೀರ್ಘ ವಿರಾಮದಿಂದ ಮತ್ತೆ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳಿ ಬರಲಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಕಾದು ನೋಡಬೇಕಾಗಿದೆ.