ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಟಿ 20 ವಿಶ್ವಕಪ್ ಗೆ ಈತ ಆಯ್ಕೆಯಾಗುವುದು ಡೌಟ್: ಈ ರೀತಿಯ ಆಟಗಾರರನ್ನು ಆಯ್ಕೆ ಮಾಡುವುದಿಲ್ಲ ಎಂದ ಪಾರ್ಥಿವ್ ಪಟೇಲ್: ಯಾರು ಗೊತ್ತೇ ಆ ಸ್ಟಾರ್ ಆಟಗಾರ?

1,123

ನಮಸ್ಕಾರ ಸ್ನೇಹಿತರೆ ಮುಂದಿನ ಟಿ20 ವಿಶ್ವಕಪ್ ದೃಷ್ಟಿಯಲ್ಲಿ ಈಗಾಗಲೇ ಬೇರೆ ಬೇರೆ ವಿಭಾಗದಲ್ಲಿ ಆ ವಿಭಾಗದ ಅತ್ಯಂತ ಪರಿಣಿತ ಆಟಗಾರರನ್ನು ಬಿಸಿಸಿಐ ಆಯ್ಕೆ ಮಾಡಲು ಈಗಾಗಲೇ ಈಗ ನಡೆಯುತ್ತಿರುವ ಸರಣಿಗಳನ್ನು ಪ್ರಮುಖ ದೃಷ್ಟಿಕೋನದಲ್ಲಿ ಇರಿಸಿಕೊಂಡಿದೆ ಎಂದರೆ ತಪ್ಪಾಗಲಾರದು.

ಅದರಲ್ಲೂ ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್ ತಂಡದ ಖಾಯಂ ಸದಸ್ಯ ಆಗಿದ್ದ ಒಬ್ಬ ಆಟಗಾರ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಸಂಪೂರ್ಣ ಅನುಮಾನ ಎಂಬುದಾಗಿ ಮಾಜಿ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ರವರು ಹೇಳಿದ್ದಾರೆ. ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಪಿನ್ ಬೌಲರ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಅತ್ಯುತ್ತಮ ಆಲ್-ರೌಂಡರ್ ಪ್ರದರ್ಶನ ನೀಡಿರುವ ರವಿಚಂದ್ರನ್ ಅಶ್ವಿನಿ ಈಗ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಪಂದ್ಯಕ್ಕೆ ಆಯ್ಕೆಯಾಗಿದ್ದು ಮೊದಲ ಪಂದ್ಯದಲ್ಲಿ 22 ರನ್ನುಗಳಿಗೆ ಎರಡು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಹೇಗಿದ್ದರೂ ಕೂಡ ಅವರ ಸ್ಥಾನವನ್ನು ಭಾರತೀಯ ಕ್ರಿಕೆಟ್ ತಂಡದ ಉಳಿದ ಪ್ರತಿಭಾನ್ವಿತ ಯುವ ಸ್ಪಿನ್ನರ್ ಗಳು ಕಬಳಿಸುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಪಾರ್ಥಿವ್ ಪಟೇಲ್ ರವರು ಅಭಿಪ್ರಾಯಪಟ್ಟಿದ್ದಾರೆ.

ಅದರಲ್ಲೂ ಪ್ರಮುಖವಾಗಿ ರವಿ ಬಿಷ್ಣೋಯ್ ಯಜುವೇಂದ್ರ ಚಹಾಲ್ ಹಾಗೂ ಕುಲದೀಪ್ ಯಾದವ್ ರವರು ವ್ರಿಸ್ಟ್ ಸ್ಪಿನ್ನರ್ ಗಳಾಗಿರುವ ಹಿನ್ನೆಲೆಯಲ್ಲಿ ಅವರ ಬೌಲಿಂಗ್ ಕರಾಮತ್ತು ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ನೆರವಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಕಪ್ ತಂಡಕ್ಕೆ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರವಿಚಂದ್ರನ್ ಅಶ್ವಿನ್ ರವರಿಗೆ ವಿಶ್ವಕಪ್ ತಂಡದಲ್ಲಿ ಜಾಗ ಸಿಗುವುದು ಸಂಪೂರ್ಣ ಅನುಮಾನ ಎಂಬುದಾಗಿ ಪಾರ್ಥಿಯ ಪಟೇಲ್ ರವರು ಹೇಳಿದ್ದಾರೆ. ಪಾರ್ಥಿವ್ ಪಟೇಲ್ ರವರ ಈ ಹೇಳಿಕೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.