ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ ರಾಸ್ ಟೇಲರ್: ಎಲ್ಲರ ಮನೆಗೆದ್ದಿರುವ ನ್ಯೂಜಿಲೆಂಡ್ ತಂಡದ ಕರಾಳ ಮುಖವನ್ನು ತೆರೆದಿಟ್ಟು ಹೇಳಿದ್ದೇನು ಗೊತ್ತೇ??
ಕ್ರಿಕೆಟ್ ಲೋಕವನ್ನೇ ಬೆಚ್ಚಿ ಬೀಳಿಸಿದ ರಾಸ್ ಟೇಲರ್: ಎಲ್ಲರ ಮನೆಗೆದ್ದಿರುವ ನ್ಯೂಜಿಲೆಂಡ್ ತಂಡದ ಕರಾಳ ಮುಖವನ್ನು ತೆರೆದಿಟ್ಟು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಕ್ರಿಕೆಟ್ ಎನ್ನುವುದು ಫುಟ್ಬಾಲ್ ಬಿಟ್ಟರೆ ಇಡೀ ಕ್ರೀಡಾ ಜಗತ್ತಿನಲ್ಲಿ ಅತ್ಯಂತ ಜನಪ್ರಿಯ ಕ್ರೀಡೆ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಕ್ರಿಕೆಟ್ ಜಗತ್ತಿನಲ್ಲಿ ಯಾವುದೇ ಹೇಟರ್ಸ್ಗಳು ಇಲ್ಲದೆ ಇರುವ ಒಂದೇ ಒಂದು ತಂಡ ಇದೆ ಎಂದರೆ ಖಂಡಿತವಾಗಿ ಅದನ್ನು ನ್ಯೂಜಿಲ್ಯಾಂಡ್ ತಂಡ ಎಂದು ಹೇಳಬಹುದು. ಯಾಕೆಂದರೆ ಇದುವರೆಗೂ ಕೂಡ ನ್ಯೂಜಿಲ್ಯಾಂಡ್ ತಂಡ ವಿವಾದಾತ್ಮಕ ವಿಚಾರಗಳಿಗಾಗಿ ಸುದ್ದಿ ಆಗಿರುವುದು ಅತ್ಯಂತ ವಿರಳಾತೀವಿರಳ.
ಆದರೆ ಇತ್ತೀಚಿಗಷ್ಟೇ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ನಾಯಕ ಆಗಿರುವ ರಾಸ್ ಟೈಲರ್ ರವರು ಯಾರಿಗೂ ಗೊತ್ತಿಲ್ಲದ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಒಂದು ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ ಅದು ಕೂಡ ತಮ್ಮ ಆತ್ಮಕಥನದಲ್ಲಿ. ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿರುವ ಸ್ಟಾರ್ ಆಟಗಾರರಲ್ಲಿ ರಾಸ್ ಟೈಲರ್ ಕೂಡ ಒಬ್ಬರಾಗಿದ್ದಾರೆ. ಹಲವಾರು ವರ್ಷಗಳಿಂದ ನ್ಯೂಜಿಲ್ಯಾಂಡ್ ರಾಷ್ಟ್ರೀಯ ಕ್ರಿಕೆಟ್ ತಂಡ ಸೇರಿದಂತೆ ಐಪಿಎಲ್ ನಂತಹ ಟೂರ್ನಮೆಂಟ್ ಗಳಲ್ಲಿ ಕೂಡ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ನೀಡಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡವರು. ಅವರು ತಮ್ಮ ರಾಸ್ ಟೈಲರ್ ಬ್ಲಾಕ್ ಅಂಡ್ ವೈಟ್ ಎನ್ನುವ ಆತ್ಮಕಥನ ಪುಸ್ತಕದಲ್ಲಿ ನ್ಯೂಜಿಲ್ಯಾಂಡ್ ತಂಡದ ಡ್ರೆಸ್ಸಿಂಗ್ ರೂಮ್ ನಲ್ಲಿ ನಡೆಯುವ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ವಿದಾಯವನ್ನು ಘೋಷಿಸಿರುವ ರಾಸ್ ಟೈಲರ್ ರವರ ತಮ್ಮ ಆತ್ಮಕಥನದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಡ್ರೆಸ್ಸಿಂಗ್ ರೂಮ್ ನಲ್ಲಿ ಸಹ ಆಟಗಾರರು ಜನಾಂಗೀಯ ವರ್ಣಭೇದವನ್ನು ಮಾಡುತ್ತಿದ್ದರು ಎಂಬುದಾಗಿ ಬಯಲಿಗೆ ಎಳೆದಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಕ್ರಿಕೆಟ್ ಬಿಳಿಯರ ಆಟ ನೀನು ಅರ್ಧ ನಮ್ಮವ ಅರ್ಧ ಬೇರೆಯವ ಎಂಬುದಾಗಿ ರಾಸ್ ಟೈಲರ್ ಅವರನ್ನು ಟೀಕಿಸುತ್ತಿದ್ದರಂತೆ. ಇದು ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು ಮುಂದಿನ ದಿನಗಳಲ್ಲಿ ಯಾರು ಯಾವ ರೀತಿಯಲ್ಲಿ ಪ್ರತಿಕ್ರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.