ಪ್ರಭಾಸ್ ಜೊತೆ ನಟನೆ ಮಾಡಲು ಸಿದ್ದ ಎಂದ ಸುದೀಪ್, ಆದರೆ ಅದೊಂದು ಕಂಡೀಶನ್ ಒಪ್ಪಿಕೊಂಡರೆ ಮಾತ್ರ. ಯಾವುದು ಅಂತೇ ಗೊತ್ತೆ??

ಪ್ರಭಾಸ್ ಜೊತೆ ನಟನೆ ಮಾಡಲು ಸಿದ್ದ ಎಂದ ಸುದೀಪ್, ಆದರೆ ಅದೊಂದು ಕಂಡೀಶನ್ ಒಪ್ಪಿಕೊಂಡರೆ ಮಾತ್ರ. ಯಾವುದು ಅಂತೇ ಗೊತ್ತೆ??

ನಮಸ್ಕಾರ ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ಈಗಾಗಲೇ ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿ ದಾಖಲೆಯ ಬಾಕ್ಸಾಫೀಸ್ ಕಲೆಕ್ಷನ್ ಮಾಡುವುದರತ್ತ ಅಡಿಯಿಟ್ಟಿದೆ ಎಂದು ಹೇಳಬಹುದು. ಹೌದು ಗೆಳೆಯರೇ ಈಗಾಗಲೇ ಮೊದಲ ದಿನದ ಮೊದಲ ಶೋನಿಂದ ಹಿಡಿದು ಈಗಾಗಲೇ ಪ್ರತಿಯೊಬ್ಬ ಪ್ರೇಕ್ಷಕನೂ ಕೂಡ ಚಿತ್ರದ ಕುರಿತಂತೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಸಹಸ್ರಾರು ಪರದೆಗಳ ಮೇಲೆ ದಾಖಲೆಯ ಪ್ರದರ್ಶನವನ್ನು ಕಾಣುತ್ತಿರುವ ವಿಕ್ರಾಂತ್ ರೋಣ ಮೊದಲ ದಿನವೇ ದಾಖಲೆಯ ಕಲೆಕ್ಷನ್ ಅನ್ನು ಬಾಕ್ಸಾಫೀಸ್ ರೆಕಾರ್ಡ್ ನಲ್ಲಿ ಬರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಇಂದು ವಿಕ್ರಾಂತ್ ರೋಣ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಪಿಂಕ್ ವಿಲ್ಲ ಗೆ ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಸಂದರ್ಶಕರು ಪ್ರಭಾಸ್ ರವರನ್ನು ಜೊತೆಗೆ ನಟನೆಯ ಅವಕಾಶ ಸಿಕ್ಕರೆ ಮತ್ತೊಮ್ಮೆ ನಟಿಸುತ್ತೀರಾ ಎಂಬುದಾಗಿ ಪ್ರಶ್ನೆಯನ್ನು ಹಾಕುತ್ತಾರೆ. ಈಗಾಗಲೇ ನೀವು ತಿಳಿದಿರುವ ಹಾಗೆ ಬಾಹುಬಲಿಯ ಮೊದಲ ಭಾಗದಲ್ಲಿ ಸುದೀಪ್ ರವರು ಅಸ್ಲಾಂ ಖಾನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂದರ್ಶಕರ ಈ ಪ್ರಶ್ನೆಗೆ ಉತ್ತರ ನೀಡುತ್ತಾ ಸುದೀಪ್ ರವರು ನಿಮಗೆ ನಾವಿಬ್ಬರೂ ಶತ್ರುವಿನಂತೆ ಕಾಣಿಸುತ್ತಿವಾ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅವಕಾಶ ಸಿಕ್ಕರೆ ಹಾಗೂ ಅತ್ಯುತ್ತಮ ಕಂಟೆಂಟ್ ಸಿಕ್ಕರೆ ಖಂಡಿತ ನಟಿಸುತ್ತೇವೆ ಎಂಬುದಾಗಿ ಹೇಳಿದ್ದಾರೆ.

ಆದರೆ ಅದರಲ್ಲೂ ಕೂಡ ಒಂದು ಶರತ್ತನ್ನು ವಿಧಿಸಿದ್ದಾರೆ. ಅದೇನೆಂದರೆ ಸಂಪೂರ್ಣ ವಿಲನ್ ಪಾತ್ರದಲ್ಲಿ ನಟಿಸುವುದಿಲ್ಲ ಬದಲಾಗಿ ಅದು ಪ್ರಮುಖವಾಗಿದ್ದರೆ ಮಾತ್ರ ಆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಇದುವರೆಗೂ ನಾನು ಕೇವಲ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಲ್ಮಾನ್ ಖಾನ್ ನಟನೆಯ ದಬಾಂಗ್-3 ಸಿನಿಮಾದಲ್ಲಿ ಮಾತ್ರ ಅದು ಕೇವಲ ಸಲ್ಮಾನ್ ಖಾನ್ ಅವರಿಗಾಗಿ ಎಂಬುದಾಗಿ ಸುದೀಪ್ ಹೇಳಿದ್ದಾರೆ. ಒಂದು ವೇಳೆ ಅತ್ಯುತ್ತಮ ಕಥೆ ಹಾಗೂ ಪಾತ್ರಕ್ಕೆ ಪ್ರಾಮುಖ್ಯತೆ ಸಿಕ್ಕರೆ ಕಂಡಿತವಾಗಿ ಪ್ರಭಾಸ್ ಸಿನಿಮಾದಲ್ಲಿ ನಟಿಸಲು ನನಗೇನು ಅಡ್ಡಿಯಿಲ್ಲ ಎಂಬುದನ್ನು ಕಿಚ್ಚ ಇಲ್ಲಿ ಖಡಕ್ ಆಗಿ ಹೇಳಿದ್ದಾರೆ.