ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಅವರು ಇವರು ಅಲ್ಲಾ, ಭಾರತ ವಿಶ್ವಕಪ್ ಗೆ ಈತನನ್ನು ಆಯ್ಕೆ ಮಾಡಲೇಬೇಕು ಎಂದು ಹೇಳಿಕೆ ನೀಡಿದ ಪಾಕ್ ಆಟಗಾರ ದಿನೇಶ್ ಕನಿರಿಯ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

159

ನಮಸ್ಕಾರ ಸ್ನೇಹಿತರೇ ಭಾರತ ತಂಡ ವೆಸ್ಟ್ಇಂಡೀಸ್ ವಿರುದ್ಧದ ಸರಣಿಯಲ್ಲಿ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಜಯಗಳಿಸುವ ಮೂಲಕ ಐತಿಹಾಸಿಕ ದಾಖಲೆ ಸೃಷ್ಟಿಸಿದೆ. ಈ ನಡುವೆ ಮುಂಬರುವ ಏಷ್ಯಾ ಕಪ್ ಹಾಗೂ ಟಿ 20 ವಿಶ್ವಕಪ್ ನಲ್ಲಿ ಭಾರತ ತಂಡಕ್ಕೆ ಉತ್ತಮ ಅಭ್ಯಾಸ ಆಗುವ ನಿಟ್ಟಿನಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಐದು ಪಂದ್ಯಗಳ ಟಿ 20 ಸರಣಿ ಆರಂಭವಾಗಲಿದೆ. ಈ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿ ವಾಪಸ್ ಆಗಲಿದ್ದು, ಟಿ 20 ತಂಡದ ಪ್ರಮುಖರೆಲ್ಲಾ ವಾಪಸ್ ಆಗಲಿದ್ದಾರೆ.

ಇನ್ನು ಭಾರತ ತಂಡದ ಟಿ 20 ವಿಶ್ವಕಪ್ ಹಾಗೂ ಏಷ್ಯಾ ಕಪ್ ಗೆಲ್ಲುವ ದೃಷ್ಟಿಯಿಂದ ಪಾಕಿಸ್ತಾನ ತಂಡದ ಮಾಜಿ ಆಟಗಾರ ದ್ಯಾನಿಶ್ ಕನೇರಿಯಾ ತಮ್ಮ ಯೂ ಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಒಂದು ಮಹತ್ವದ ಸಲಹೆ ನೀಡಿದ್ದಾರೆ. ಹೌದು ಅದೆನೆಂದರೇ ಭಾರತ ತಂಡ, ತನ್ನ ತಂಡದ ಆಯ್ಕೆ ವೇಳೆಯಲ್ಲಿ ಏಡಗೈ ವೇಗದ ಬೌಲರ್ ಗಳಿಗೆ ಆದ್ಯತೆ ನೀಡಬೇಕು. ಸದ್ಯ ಭಾರತ ತಂಡ ಆಡಿಸುವ ವೇಗದ ಬೌಲರ್ ಗಳು ಎಲ್ಲರೂ ಬಲಗೈ ಬೌಲರ್ ಗಳು.

ಎಡಗೈ ವೇಗಿಗಳಿಗೆ ಸ್ಥಾನ ನೀಡಿದ್ದೇ, ಆದರೇ ತಂಡದ ಸಂಯೋಜನೆಯಲ್ಲಿ ಬಲ ತುಂಬುತ್ತದೆ. ಅದರಲ್ಲೂ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ಏಡಗೈ ವೇಗಿ ಅರ್ಶದೀಪ್ ಸಿಂಗ್ ಗೆ ಸ್ಥಾನ ನೀಡಬೇಕು. ಅವರು ಪವರ್ ಪ್ಲೇ, ಡೆತ್ ಓವರ್, ಮಿಡಲ್ ಓವರ್ ಹೀಗೆ ಮೂರು ವಿಭಾಗದಲ್ಲಿ ಬೌಲಿಂಗ್ ಮಾಡಲು ಸಮರ್ಥರಾಗಿದ್ದಾರೆ. ಹೀಗಾಗಿ ಅವರನ್ನು ಭಾರತ ತಂಡ ಆಡುವ ಹನ್ನೊಂದರ ಬಳಗದಲ್ಲಿ ಆಡಿಸಬೇಕು ಎಂದು ಹೇಳಿದ್ದಾರೆ. ಇದರ ಜೊತೆ ಮತ್ತೊಬ್ಬ ಎಡಗೈ ವೇಗಿ ಟಿ.ನಟರಾಜನ್ ಸಹ ತಂಡದಲ್ಲಿ ಸ್ಥಾನ ಪಡೆಯಬೇಕು ಎಂಬ ಆಸೆ ನನ್ನದು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.