ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮಾರಕ ಬೌಲರ್ ನ ಕ್ರಿಕೆಟ್ ಜೀವನವನ್ನು ಮುಗಿಸುತ್ತಿರುವರೇ ದ್ರಾವಿಡ್ ಹಾಗೂ ರೋಹಿತ್. ಕಷ್ಟದಲ್ಲಿ ಬೆಳೆದ ಪ್ರತಿಭೆ ಮಂಕಾಗಿದ್ದು ಹೇಗೆ??

ಮಾರಕ ಬೌಲರ್ ನ ಕ್ರಿಕೆಟ್ ಜೀವನವನ್ನು ಮುಗಿಸುತ್ತಿರುವರೇ ದ್ರಾವಿಡ್ ಹಾಗೂ ರೋಹಿತ್. ಕಷ್ಟದಲ್ಲಿ ಬೆಳೆದ ಪ್ರತಿಭೆ ಮಂಕಾಗಿದ್ದು ಹೇಗೆ??

11,196

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡ ಸದ್ಯಕ್ಕೆ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಮುಗಿಸಿ ಟಿ-ಟ್ವೆಂಟಿ ಸರಣಿಗೆ ತಯಾರಾಗುತ್ತಿದೆ. ಈ ಎಲ್ಲಾ ವಿದೇಶಿ ಸರಣಿಗಳು ಮುಂದೆ ವಿಶ್ವಕಪ್ ಹಾಗೂ ಏಷ್ಯಾಕಪ್ ತಂಡಗಳನ್ನು ಆಯ್ಕೆ ಮಾಡುವುದಕ್ಕಾಗಿ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ದಿನಗಳಲ್ಲಿ ಒಬ್ಬ ಭಾರತೀಯ ವೇಗದ ಬೌಲರ್ ನ ಕರಿಯರ್ ನಿಜಕ್ಕೂ ಕೂಡ ಡೋಲಾಯಮಾನವಾಗಿದೆ ಎಂದು ಹೇಳಬಹುದಾಗಿದೆ.

Follow us on Google News

ವಿರಾಟ್ ಕೊಹ್ಲಿ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ ಇವರು ಜಸ್ಪ್ರೀತ್ ಬುಮ್ರಾ ಅವರ ಶೈಲಿಯಲ್ಲಿ ಬೌಲಿಂಗ್ ಹಾಗೂ ಅದರಲ್ಲು ವಿಶೇಷವಾಗಿ ಯಾರ್ಕರ್ ಗಳನ್ನು ಎಸೆಯುವುದರ ಮೂಲಕ ಎದುರಾಳಿ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕವನ್ನು ಹುಟ್ಟಿಸುವಂತೆ ಮಾಡುತ್ತಿದ್ದರು ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ನಾಯಕರಾದ ಮೇಲೆ ಹಾಗೂ ರಾಹುಲ್ ದ್ರಾವಿಡ್ ಕೋಚ್ ಆದಮೇಲೆ ನಿಜಕ್ಕೂ ಕೂಡ ಈ ಆಟಗಾರ ಅವಕಾಶಕ್ಕಾಗಿ ಕಾಯುವಂತಾಗಿದೆ ಎಂದು ಹೇಳಬಹುದಾಗಿದೆ.

ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಈ ಆಟಗಾರನ ಕರಿಯರ್ ಅನು ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಸೇರಿಕೊಂಡು ಮುಗಿಸುತ್ತಿದ್ದಾರೆ ಎಂಬುದಾಗಿ ಆರೋಪವನ್ನು ಮಾಡುತ್ತಿರುವುದು ಕೂಡ ಕೇಳಿ ಬರುತ್ತಿದೆ. ಹೌದು ಗೆಳೆಯರೇ ನಾವು ಮಾತನಾಡುತ್ತಿರುವುದು ತಮಿಳುನಾಡು ಮೂಲದ ಪ್ರತಿಭಾನ್ವಿತ ವೇಗಿಯಾಗಿರುವ ಟಿ ನಟರಾಜನ್ ಕುರಿತಂತೆ. ನಟರಾಜನ್ ಈಗ ಅವಕಾಶಕ್ಕಾಗಿ ಕಾಯುವಂತಾಗಿದೆ. ಒಂದು ವರ್ಷ ಇಂಜುರಿ ಯಿಂದ ಕೂಡ ಅವರ ತಂಡದಿಂದ ಹೊರಗುಳಿಯುವಂತಾಗಿತ್ತು. ಐಪಿಎಲ್ ನಲ್ಲಿ 11 ಪಂದ್ಯಗಳಿಂದ 18 ವಿಕೆಟ್ ಗಳನ್ನು ಕಬಳಿಸಿದ್ದರು ಕೂಡ ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಅವರ ಆಯ್ಕೆ ಆಗುತ್ತಿಲ್ಲ ಇದಕ್ಕೆ ಭಾರತೀಯ ಆಯ್ಕೆಗಾರರು ಹಾಗೂ ತಂಡದ ನಾಯಕ ಮತ್ತು ಕೋಚ್ ಕಾರಣ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಮುಂದಿನ ಗಳಲ್ಲಿ ಇದು ಎಷ್ಟು ಸತ್ಯವಾಗಿ ಪರಿಣಮಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.