ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಮತ್ತೊಮ್ಮೆ ಭವಿಷ್ಯ ನುಡಿದ ರಿಕ್ಕಿ ಪಾಂಟಿಂಗ್: ಈ ತಂಡ ಫೈನಲ್ ನಲ್ಲಿ ಭಾರತವನ್ನು ಸೋಲಿಸಿ ವಿಶ್ವಕಪ್ ಗೆಲ್ಲಲಿದೆ ಎಂದು ಆಯ್ಕೆ ಮಾಡಿದ ತಂಡ ಯಾವುದು ಗೊತ್ತೆ?

3,376

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ವಿಶ್ವಕ್ರಿಕೆಟ್ ನಲ್ಲಿ ಅತ್ಯಂತ ಹೆಚ್ಚು ವಿಶ್ವಕಪ್ ಗೆದ್ದಿರುವ ನಾಯಕ ಯಾರು ಎಂಬುದನ್ನು ನಾವು ನೋಡುವುದಾದರೆ ಆ ಸಾಲಿನಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಈ ಬಾರಿ ಅಕ್ಟೋಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಪ್ರಾರಂಭವಾಗಲಿರುವ ಟಿ-20ವಿಶ್ವಕಪ್ ಕುರಿತಂತೆ ತಮ್ಮ ಅಭಿಪ್ರಾಯವನ್ನು ಕೂಡ ಹೊರಹಾಕಿದ್ದಾರೆ. ಹೌದು ಗೆಳೆಯರೇ ಈ ಬಾರಿ ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಕಾರಣದಿಂದಾಗಿ ಟಿ-ಟ್ವೆಂಟಿ ವಿಶ್ವಕಪ್ ಬಹಳಷ್ಟು ವಿಶೇಷತೆಯಿಂದ ಕೂಡಿದ ಯಾಕೆಂದರೆ ಕಳೆದ ಬಾರಿ ಆಸ್ಟ್ರೇಲಿಯಾ ಚಾಂಪಿಯನ್ ಆಗಿತ್ತು.

ಇನ್ನು ರಿಕಿ ಪಾಂಟಿಂಗ್ ರವರ ಪ್ರಕಾರ ಈ ಬಾರಿಯ ಟಿ20 ವಿಶ್ವಕಪ್ ನಲ್ಲಿ ಮೂರು ಬಲಿಷ್ಠ ತಂಡಗಳು ಎಂದರೆ ಅದು ಇಂಗ್ಲೆಂಡ್ ಭಾರತ ಹಾಗೂ ಆಸ್ಟ್ರೇಲಿಯಾ ಎಂಬುದಾಗಿ ಹೆಸರಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಫೈನಲ್ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಸೋಲಿಸಿ ಈ ಒಂದು ತಂಡ ಈ ಬಾರಿ ಚಾಂಪಿಯನ್ ಆಗಲಿದೆ ಎಂಬುದಾಗಿ ಕೂಡ ಈಗಾಗಲೇ ಭವಿಷ್ಯವನ್ನು ಕೂಡ ನುಡಿದಿದ್ದಾರೆ. ಹಾಗಿದ್ದರೆ ರಿಕಿ ಪಾಂಟಿಂಗ್ ರವರ ಪ್ರಕಾರ ಈ ಬಾರಿ ಚಾಂಪಿಯನ್ ಆಗಲಿರುವ ತಂಡ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

ರಿಕಿ ಪಾಂಟಿಂಗ್ ಅವರ ಪ್ರಕಾರ ಫೈನಲ್ನಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ತವರು ನೆಲದ ಲಾಭವನ್ನು ಪಡೆದು ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಸೋಲಿಸಿ ಫೈನಲ್ ನಲ್ಲಿ ಚಾಂಪಿಯನ್ ಆಗಿ ಮೆರೆಯಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ಇನ್ನು ಭಾರತ ಕ್ರಿಕೆಟ್ ತಂಡ ಪಾಕಿಸ್ತಾನವನ್ನು ತನ್ನ ಮೊದಲ ಪಂದ್ಯದಲ್ಲಿ ಎದುರಿಸುವ ಮೂಲಕ ಟಿ-ಟ್ವೆಂಟಿ ವಿಶ್ವಕಪ್ಪನ್ನು ಪ್ರಾರಂಭಿಸಲಿದೆ. ಕಳೆದ ಬಾರಿ ನಾಕೌಟ್ ಹಂತಕ್ಕೂ ಮುನ್ನವೇ ಟೂರ್ನಿಯಿಂದ ಹೊರಬಿದ್ದ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಕಪ್ ಗೆಲ್ಲಲೇಬೇಕು ಎನ್ನುವ ಹಟಕ್ಕೆ ಬಿದ್ದಿದೆ.

Get real time updates directly on you device, subscribe now.