ಭಾರತ ತಂಡದ ಭವಿಷ್ಯದ ಟೆಸ್ಟ್ ನಾಯಕನನ್ನು ಆಯ್ಕೆ ಮಾಡಿದ ರಾಬಿನ್ ಉತ್ತಪ್ಪ, ಈತ ಬೇಡ, ಅರ್ಹನಲ್ಲ ಎಂದ ಕನ್ನಡಿಗರು. ಯಾರು ಗೊತ್ತೆ??

ಭಾರತ ತಂಡದ ಭವಿಷ್ಯದ ಟೆಸ್ಟ್ ನಾಯಕನನ್ನು ಆಯ್ಕೆ ಮಾಡಿದ ರಾಬಿನ್ ಉತ್ತಪ್ಪ, ಈತ ಬೇಡ, ಅರ್ಹನಲ್ಲ ಎಂದ ಕನ್ನಡಿಗರು. ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೆ ಸದ್ಯದ ಮಟ್ಟಿಗೆ ರೋಹಿತ್ ಶರ್ಮ ಅವರ ನಂತರ ಭಾರತೀಯ ಕ್ರಿಕೆಟ್ ತಂಡದ ವಿವಿಧ ಫಾರ್ಮೆಟ್ ಗಳಲ್ಲಿ ಯಾರನ್ನು ನಾಯಕರನ್ನಾಗಿ ಆಯ್ಕೆ ಮಾಡುವುದು ಎನ್ನುವುದರ ಕುರಿತಂತೆ ಈಗಾಗಲೇ ಮಾಜಿ ಕ್ರಿಕೆಟಿಗರು ಚರ್ಚೆಯನ್ನು ಮಾಡಲು ಆರಂಭಿಸಿದ್ದಾರೆ. ತಮ್ಮದೇ ಆದಂತಹ ಅಭಿಪ್ರಾಯಗಳನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಂದು ನಾವು ಮಾತನಾಡುತ್ತಿರುವುದು ಕರ್ನಾಟಕ ಮೂಲದ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಂಡಿರುವ ರಾಬಿನ್ ಉತ್ತಪ್ಪ ರವರು ವ್ಯಕ್ತಪಡಿಸಿರುವ ಅಭಿಪ್ರಾಯದ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ಗೆಳೆಯರೆ ರಾಬಿನ್ ಉತ್ತಪ್ಪ ರೋಹಿತ್ ಶರ್ಮಾ ಅವರ ನಿವೃತ್ತಿಯ ನಂತರ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ಆಟಗಾರನನ್ನು ನೋಡಲು ಇಷ್ಟಪಡುತ್ತೇನೆ ಎಂಬುದಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಆ ಆಟಗಾರ ಇನ್ಯಾರೂ ಅಲ್ಲ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ನಾಯಕತ್ವವನ್ನು ವಹಿಸಿದ್ದ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪರಿಣಾಮಕಾರಿ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ. ಹೌದು ರಾಬಿನ್ ಉತ್ತಪ್ಪ ರವರು ಟೆಸ್ಟ್ ಕ್ರಿಕೆಟ್ನಲ್ಲಿ ಮುಂದಿನ ದಿನಗಳಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ನಾಯಕನನ್ನಾಗಿ ನೋಡಲು ಇಷ್ಟಪಡುತ್ತಿದ್ದಾರಂತೆ.

ಈ ಉತ್ತರವನ್ನು ಕೇಳಿ ಕನ್ನಡಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಗೆಲ್ಲುವ ಪಂದ್ಯವನ್ನು ಸೋತಿದ್ದ ನ್ನು ನೋಡಿ ಇದೆಂತಹ ಆಯ್ಕೆ ಎಂಬುದಾಗಿ ಮೂಗು ಮುರಿದಿದ್ದಾರೆ. ಆದರೆ ರಾಬಿನ್ ಉತ್ತಪ್ಪ ಅವರು ಹೇಳುವ ಪ್ರಕಾರ ಟೆಸ್ಟ್ ಕ್ರಿಕೆಟ್ಗೆ ಹೇಳಿ ಮಾಡಿಸಿರುವ ಅಂತಹ ನಾಯಕತ್ವದ ಮನೋಭಾವನೆ ಅವರಲ್ಲಿ ಇರುವುದನ್ನು ನಾನು ನೋಡಿದ್ದೇನೆ ಎಂಬುದಾಗಿ ಹೇಳಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಸೋತಿದ್ದರು ಕೂಡ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ಕ್ರಿಕೆಟ್ ತಂಡ ಡಾಮಿನೇಷನ್ ಮಾಡಲು ತುಂಬಾ ಸಹಾಯಕರಾಗಿದ್ದರು ಎಂಬುದನ್ನು ಕೂಡ ನಾವು ನೆನಪಿಸಿಕೊಳ್ಳ ಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.