ವೆಸ್ಟ್ ಇಂಡೀಸ್ ವಿರುದ್ಧ ಟಿ 20 ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಔಟ್

ವೆಸ್ಟ್ ಇಂಡೀಸ್ ವಿರುದ್ಧ ಟಿ 20 ಸರಣಿ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ ಬಿಗ್ ಶಾಕ್: ಪ್ರಮುಖ ಆಟಗಾರ ಔಟ್

ನಮಸ್ಕಾರ ಸ್ನೇಹಿತರೇ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಇಂಗ್ಲೆಂಡ್ ಸರಣಿಯ ನಂತರ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ಕೂಡ ಗೆದ್ದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಏಕದಿನ ಸರಣಿಯಲ್ಲಿ ಮುನ್ನಡೆಯನ್ನು ಪಡೆದಿದ್ದು ಇದೇ ಜುಲೈ 29 ರಿಂದ ಪ್ರಾರಂಭವಾಗುವ ಟಿ ಟ್ವೆಂಟಿ ಸರಣಿಯನ್ನು ಕೂಡ ಗೆದ್ದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.

Follow us on Google News

ಇನ್ನು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಒಟ್ಟಾರೆಯಾಗಿ 5 ಪಂದ್ಯಗಳ ಟಿ-20 ಸರಣಿ ಎರಡು ವಿಧಗಳಲ್ಲಿ ವಿಂಗಡನೆ ಆಗಲಿದೆ. ಮೊದಲ 3 ಟಿ-ಟ್ವೆಂಟಿ ಪಂದ್ಯಗಳು ವೆಸ್ಟ್ ಇಂಡೀಸ್ ನಲ್ಲಿ ಅಂದರೆ ಟ್ರಿನಿಡಾಡ್ ಹಾಗೂ ಸೆಂಟ್ ಕಿಟ್ಸ್ ನಲ್ಲಿ ಆಡಿಸಲಾಗುವುದು. ಉಳಿದ ಎರಡು ಪಂದ್ಯಗಳನ್ನು ಅಮೇರಿಕಾದ ಲ್ಯಾಂಡರ್ ಹಿಲ್ನಲ್ಲಿ ಆಡಿಸಲಾಗುತ್ತದೆ. ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಮೊದಲ 3 ಟಿ ಟ್ವೆಂಟಿ-20 ಗಳಿಗೆ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಗೈರು ಹಾಜರಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೇ ಇಂಜುರಿ ಯಿಂದಾಗಿ ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಪಡೆದುಕೊಂಡು ಬಂದಿರುವ ಕೆ ಎಲ್ ರಾಹುಲ್ ರವರು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಮೂರು ಟಿ-ಟ್ವೆಂಟಿ ಪಂದ್ಯಗಳಿಗೆ ಮಹಾಮಾರಿಯ ಕಾರಣದಿಂದಾಗಿ ಗೈರು ಹಾಜರಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಅಮೇರಿಕಾದ ಲ್ಯಾಂಡರ್ ಹಿಲ್ನಲ್ಲಿ ನಡೆಯಲಿರುವ ಎರಡು ಟಿ-ಟ್ವೆಂಟಿ ಪಂದ್ಯಗಳಿಗೆ ಕೆ ಎಲ್ ರಾಹುಲ್ ರವರು ಭಾರತೀಯ ಕ್ರಿಕೆಟ್ ತಂಡದ ಭಾಗವಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಕಳೆದ ಬಾರಿ ಕೂಡ ಅಮೆರಿಕದ ಲ್ಯಾಂಡರ್ ಹಿಲ್ನಲ್ಲಿ ಪಂದ್ಯ ನಡೆದಿದ್ದಾಗ ಕೆಎಲ್ ರಾಹುಲ್ ರವರು ಶತಕವನ್ನು ಬಾರಿಸಿದ ಎಂಬುದನ್ನು ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಹಲವಾರು ಪಂದ್ಯಗಳಿಂದ ಇಂಜುರಿಯ ಕಾರಣದಿಂದಾಗಿ ಗೈರು ಹಾಜರಾಗಿರುವ ಕೆ ಎಲ್ ರಾಹುಲ್ ಅವರು ಈ ಸರಣಿಯಲ್ಲಿ ತಮ್ಮ ಲಯಕ್ಕೆ ಮರಳಿ ಬಂದರೆ ಏಷ್ಯಾಕಪ್ ಹಾಗೂ ವಿಶ್ವಕಪ್ ಗೆ ತಮ್ಮ ತಯಾರಿಯನ್ನು ಪೂರ್ಣಪ್ರಮಾಣದಲ್ಲಿ ನಡೆಸಿ ಕೊಂಡಂತಾಗುತ್ತದೆ.