ಬಿಗ್ ನ್ಯೂಸ್: ಬಹಿರಂಗ ಅಸಮಾಧಾನ ಹೊರಹಾಕಿದ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್. ನಿಜಕ್ಕೂ ಬೇಜಾರಾಯ್ತು ಎಂದದ್ದು ಯಾಕೆ ಗೊತ್ತೇ??

ಬಿಗ್ ನ್ಯೂಸ್: ಬಹಿರಂಗ ಅಸಮಾಧಾನ ಹೊರಹಾಕಿದ ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್. ನಿಜಕ್ಕೂ ಬೇಜಾರಾಯ್ತು ಎಂದದ್ದು ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಸದ್ಯಕ್ಕೆ ಭಾರತೀಯ ಕ್ರಿಕೆಟ್ ತಂಡ ಶಿಖರ್ ಧವನ್ ರವರ ನಾಯಕತ್ವದಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಅದರಲ್ಲೂ ಈ ಸರಣಿಯಲ್ಲಿ ಒಬ್ಬ ಆಟಗಾರನ ವಿಶೇಷ ಪ್ರದರ್ಶನದ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಗೆಳೆಯರೆ ನೀವು ಇಂಗ್ಲೆಂಡ್ ಸರಣಿಯನ್ನು ಗಮನಿಸಿದರೆ ವಿರಾಟ್ ಕೊಹ್ಲಿ ರವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಬಂದ ಶ್ರೇಯಸ್ ಅಯ್ಯರ್ ಅಷ್ಟೊಂದು ಚೆನ್ನಾಗಿ ಪ್ರದರ್ಶನವನ್ನು ನೀಡಿರಲಿಲ್ಲ.

ಈ ಮೂಲಕ ಶ್ರೇಯಸ್ ಅಯ್ಯರ್ ಅವರ ಮತ್ತೊಬ್ಬ ಮನೀಶ್ ಪಾಂಡೆ ಆಗುತ್ತಾರೆ ಎಂಬುದಾಗಿ ಎಲ್ಲರೂ ಕೂಡ ಮಾತನಾಡಿಕೊಂಡಿದ್ದರು. ಸಿಕ್ಕಿರುವ ಅವಕಾಶವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಬದಲು ಕಳಪೆ ಪ್ರದರ್ಶನ ನೀಡುತ್ತಾರೆ ಎಂಬುದಾಗಿ ಭಾವಿಸಲಾಗಿತ್ತು ಆದರೆ ಸದ್ಯಕ್ಕೆ ವೆಸ್ಟ್ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅವರ ಬ್ಯಾಟಿಂಗ್ ಪ್ರದರ್ಶನ ನಿಜಕ್ಕೂ ಕೂಡ ಪ್ರಶಂಸಾರ್ಹವಾಗಿದೆ. ಹೌದು ಗಳೆಯರ 71 ಎಸೆತ ಗಳ ಮುಂದೆ ಬರೋಬ್ಬರಿ 63 ರನ್ನುಗಳನ್ನು ಶ್ರೇಯಸ್ ಅಯ್ಯರ್ ಅವರು ಬಾರಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಆರಂಭಿಕ ವಿಕೆಟ್ಗಳು ಉದುರಿದ ನಂತರವೂ ಕೂಡಾ ಭಾರತೀಯ ಕ್ರಿಕೆಟ್ ತಂಡವನ್ನು ಶ್ರೇಯಸ್ ಅಯ್ಯರ್ ರವರು ಆಧರಿಸಿ ಆಧಾರ ಸ್ತಂಭವಾಗಿ ನಿಂತುಕೊಂಡಿದ್ದರು.

ಆದರೂ ಕೂಡ ಈ ಸಂದರ್ಭದಲ್ಲಿ ತಮಗೆ ಬೇಸರವಾಯಿತು ಎಂಬುದಾಗಿ ಹೇಳಿಕೊಂಡಿದ್ದಾರೆ. ಹೌದು ಗೆಳೆಯರೇ ಶತಕದಿಂದ ವಂಚಿತರಾದರೂ ಕೂಡ ಮುಂದಿನ ಪಂದ್ಯದಲ್ಲಿ ಶತಕ ಬಾರಿಸುವ ಭರವಸೆಯನ್ನು ವ್ಯಕ್ತಪಡಿಸಿರುವ ಶ್ರೇಯಸ್ ಅಯ್ಯರ್ ರವರು ತಾವು ಔಟ್ ಆಗಿರುವ ರೀತಿಯ ಕುರಿತಂತೆ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಸುಲಭವಾಗಿ ಗುರಿ ಮುಟ್ಟುವವರೆಗೂ ಔಟಾಗದೆ ರನ್ ಗಳಿಸುವ ಅವಕಾಶವಿದ್ದರೂ ಕೂಡ ಔಟ್ ಆಗಿರುವ ರೀತಿಗೆ ನನಗೆ ಬೇಸರವಾಗಿದೆ ಎಂಬುದಾಗಿ ಶ್ರೇಯಸ್ ಐಯ್ಯರ್ ಹೇಳಿದ್ದಾರೆ.