ಬಿಡುಗಡೆಯಾಯಿತು ಕನ್ನಡದ ಬಹುನಿರೀಕ್ಷಿತ ಟಾಪ್ ನಟಿಯರ ಪಟ್ಟಿ: ಯಾವೆಲ್ಲ ನಟಿಯರಿಗೆ ಎಷ್ಟನೇ ಸ್ಥಾನ ಗೊತ್ತೇ?? ದಿಡೀರ್ ಎಂದು ಎಂಟ್ರಿ ಕೊಟ್ಟ ರಮ್ಯಾ.

ಬಿಡುಗಡೆಯಾಯಿತು ಕನ್ನಡದ ಬಹುನಿರೀಕ್ಷಿತ ಟಾಪ್ ನಟಿಯರ ಪಟ್ಟಿ: ಯಾವೆಲ್ಲ ನಟಿಯರಿಗೆ ಎಷ್ಟನೇ ಸ್ಥಾನ ಗೊತ್ತೇ?? ದಿಡೀರ್ ಎಂದು ಎಂಟ್ರಿ ಕೊಟ್ಟ ರಮ್ಯಾ.

ನಮಸ್ಕಾರ ಸ್ನೇಹಿತರೆ ಆರ್ಮಾಕ್ಸ್ ಮೀಡಿಯಾ ಇತ್ತೀಚಿಗಷ್ಟೇ ತನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪೋಸ್ಟ್ ಪ್ರಕಾರ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಟಾಪ್ 5 ಜನಪ್ರಿಯ ನಟಿಯರು ಯಾರು ಎಂಬ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಈ ಲಿಸ್ಟಿನಲ್ಲಿ ಆಶ್ಚರ್ಯ ಎನ್ನುವಂತೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಅನಭಿಷಕ್ತ ರಾಣಿಯಾಗಿ ಮಿಂಚಿ ಮೆರೆದಿದ್ದ ನಟಿ ರಮ್ಯಾ ರವರು ಕೂಡ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ರಮ್ಯಾರವರು ಕೂಡ ಶೇರ್ ಮಾಡಿಕೊಳ್ಳುತ್ತಾ ಎಂಟು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರೂ ಕೂಡ ಇಂದಿನ ನಟಿಯರೊಂದಿಗೆ ಈ ಸ್ಥಾನವನ್ನು ಹಂಚಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ ಎಂಬುದಾಗಿ ಹೇಳುವ ಮೂಲಕ ಅತಿ ಶೀಘ್ರದಲ್ಲಿ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವ ಸಾಧ್ಯತೆ ಇಲ್ಲ ಎಂಬುದನ್ನು ಕೂಡ ಪರೋಕ್ಷವಾಗಿ ಹೇಳಿದ್ದಾರೆ ಎಂದು ಹೇಳಬಹುದು.

ಇನ್ನು ಈ ಟಾಪ್-5 ಜನಪ್ರಿಯ ನಟಿಯರ ಲಿಸ್ಟಿನಲ್ಲಿ ಐದನೇ ಸ್ಥಾನದಲ್ಲಿ ಪಟಾಕಿ ಪೋರಿ ಆಶಿಕಾ ರಂಗನಾಥ್ ಅವರು ಕಾಣಿಸಿಕೊಳ್ಳುತ್ತಾರೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಎಲ್ಲರ ನೆಚ್ಚಿನ ನಾಯಕ ನಟಿ ಆಗಿರುವ ರಮ್ಯಾರವರು ಕಾಣಿಸಿಕೊಳ್ಳುತ್ತಾರೆ. ಮೂರನೇ ಸ್ಥಾನದಲ್ಲಿ ಸ್ಯಾಂಡಲ್ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಕಾಣಿಸಿಕೊಳ್ಳುತ್ತಾರೆ. ರಾಧಿಕಾ ಪಂಡಿತ್ ಕೂಡ ಮಕ್ಕಳಾದ ನಂತರ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.

ಇದಾದ ನಂತರ ಈ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಾಯಕನಟಿ ಆಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಕಾಣಿಸಿಕೊಳ್ಳುತ್ತಾರೆ. ಮೊದಲ ಸ್ಥಾನದಲ್ಲಿ ಬಹುಭಾಷಾ ತಾರೆ ಆಗಿರುವ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಾರೆ. ಇವರಲ್ಲಿ ನಿಮ್ಮ ನೆಚ್ಚಿನ ನಾಯಕ ನಟಿ ಯಾರು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸುವುದನ್ನು ಮರೆಯಬೇಡಿ.