ಭಾರತ ತಂಡ ಕೊಹ್ಲಿ ನಾಯಕತ್ವದಲ್ಲಿ ನಡೆದ 2019,2021 ರ ವಿಶ್ವಕಪ್ ಸೋಲಲು ಆತನೊಬ್ಬನೇ ಕಾರಣ ಎಂದ ರವಿಶಾಸ್ತ್ರಿ. ಯಾರಂತೆ ಗೊತ್ತೇ??
ಭಾರತ ತಂಡ ಕೊಹ್ಲಿ ನಾಯಕತ್ವದಲ್ಲಿ ನಡೆದ 2019,2021 ರ ವಿಶ್ವಕಪ್ ಸೋಲಲು ಆತನೊಬ್ಬನೇ ಕಾರಣ ಎಂದ ರವಿಶಾಸ್ತ್ರಿ. ಯಾರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡ ಸದ್ಯ ವಿಶ್ವದ ಅತ್ಯುತ್ತಮ ಕ್ರಿಕೆಟ್ ತಂಡ. ಹೊರ ದೇಶಗಳಲ್ಲಿಯೂ ಸಹ ಐತಿಹಾಸಿಕ ಸಾಧನೆಗೈಯುತ್ತಿದೆ. ಸೇನಾದೇಶಗಳಲ್ಲಿ ಟೆಸ್ಟ್ ಗೆಲ್ಲುವುದರ ಜೊತೆ ಟೆಸ್ಟ್ ಸರಣಿಗಳನ್ನು ಸಹ ವಶಪಡಿಸಿಕೊಳ್ಳುತ್ತಿದೆ. ಅದಲ್ಲದೇ ಏಕದಿನ ಹಾಗೂ ಟಿ 20 ಸರಣಿಗಳಲ್ಲಿಯೂ ಸಹ ಅದೇ ರೀತಿ ಕಮ್ ಬ್ಯಾಕ್ ಮಾಡಿದೆ. ಆದರೇ ಭಾರತ ಸುಮಾರು ವರ್ಷಗಳಿಂದ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ.
2019ರ ಏಕದಿನ ವಿಶ್ವಕಪ್ ಹಾಗೂ 2021ರ ಟಿ 20 ವಿಶ್ವಕಪ್ ನಲ್ಲಿ ಸಹ ಹೀನಾಯ ಪ್ರದರ್ಶನ ನೀಡಿತು. ಈಗ ಭಾರತದ ಆ ಸೋಲುಗಳಿಗೆ ಅಸಲಿ ಕಾರಣವನ್ನು ಆಗ ತಂಡದ ಕೋಚ್ ಆಗಿದ್ದ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ತಿಳಿಸಿದ್ದಾರೆ. ಬನ್ನಿ ಆ ಕಾರಣ ಏನೆಂಬುದನ್ನು ತಿಳಿಯೋಣ.
ರವಿಶಾಸ್ತ್ರಿ ಪ್ರಕಾರ ಎರಡು ಸರಣಿಗಳಲ್ಲಿ ಭಾರತ ತಂಡ ಸೋಲಲು ಪ್ರಮುಖ ಕಾರಣವೆಂದರೇ ಅದು ತಂಡದಲ್ಲಿ ಆರನೇ ಬೌಲರ್ ಕೊರತೆ. ಹೌದು ಐದು ಬೌಲರ್ ಗಳಿಂದ ನಾವು ಆಡಿದೆವು. ಆರನೇ ಬೌಲರ್ ಹಾಗೂ ಆಲ್ ರೌಂಡರ್ ಆಗ ನಮ್ಮ ತಂಡಕ್ಕೆ ಸಿಗಲಿಲ್ಲ. ಈ ಕಾರಣ ಮಹತ್ವದ ಪಂದ್ಯಗಳಲ್ಲಿ ನಾವು ಸೋತು ಟೂರ್ನಿಯಿಂದ ಹೊರಬೀಳಬೇಕಾಯಿತು. ಈ ಬಗ್ಗೆ ನಾನು ತಂಡ ಆಯ್ಕೆ ಮಾಡುವಾಗ ಆಯ್ಕೆದಾರರ ಬಳಿ ಚರ್ಚಿಸಿದೆ. ಆದರೇ ಅವರಿಗೂ ಅಂತಹ ಆಟಗಾರ ಸಿಗಲಿಲ್ಲ.ಇದು ತಂಡಕ್ಕೆ ಹಿನ್ನಡೆಯಾಯಿತು ಎಂದು ಹೇಳಿದರು. ಸದ್ಯ ಆರನೇ ಬೌಲರ್ ಆಗಿ ಹಾರ್ದಿಕ್ ಪಾಂಡ್ಯ ಫಿಟ್ ಆಗಿದ್ದು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ಉತ್ತಮ ಪ್ರದರ್ಶನ ಮುಂದುವರೆದರೇ ಮುಂದಿನ ಐಸಿಸಿ ಟ್ರೋಫಿಯನ್ನು ಭಾರತ ಗೆಲ್ಲಬಹುದು ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ