ಟಾಪ್ ನಾಲ್ವರು ಆಟಗಾರರ ಭವಿಷ್ಯ ಅಪಾಯದಲ್ಲಿ. ಎಷ್ಟೇ ಉತ್ತಮವಾಗಿ ಆಡಿದರೂ ಕೂಡ ಗಾಯವೇ ಇವರಿಗೆ ವಿಲ್ಲನ್. ಯಾರ್ಯಾರು ಲಿಸ್ಟ್ ನಲ್ಲಿ ಇದ್ದಾರೆ ಗೊತ್ತೇ??

ಟಾಪ್ ನಾಲ್ವರು ಆಟಗಾರರ ಭವಿಷ್ಯ ಅಪಾಯದಲ್ಲಿ. ಎಷ್ಟೇ ಉತ್ತಮವಾಗಿ ಆಡಿದರೂ ಕೂಡ ಗಾಯವೇ ಇವರಿಗೆ ವಿಲ್ಲನ್. ಯಾರ್ಯಾರು ಲಿಸ್ಟ್ ನಲ್ಲಿ ಇದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕ್ರೀಡೆಯಲ್ಲಿ ಆಟಗಾರರ ದೈಹಿಕ ಸಾಮರ್ಥ್ಯಕ್ಕೆ ಹೆಚ್ಚು ಬೆಲೆ ಇದೆ. ಯಾವ ಆಟಗಾರ ಉತ್ತಮ ದೈಹಿಕ ಸಾಮರ್ಥ್ಯ ಹೊಂದಿರುತ್ತಾನೋ ಆತ ಮಾತ್ರ ಹೆಚ್ಚು ಕಾಲ ತಂಡದಲ್ಲಿ ಇರಲು ಸಾಧ್ಯ. ಈ ಮಧ್ಯೆ ಆಟಗಾರರಿಗೆ ಆಗಾಗ ಗಾಯದ ಸಮಸ್ಯೆಗಳು ಬರುತ್ತವೆ. ಒಮ್ಮೆ ಗಾಯಕ್ಕೆ ತುತ್ತಾದರೇ ಪದೇ ಪದೇ ಗಾಯಕ್ಕೆ ಒಳಗಾಗಬೇಕಿರುತ್ತದೆ. ಗಾಯದಿಂದ ಗುಣಮುಖರಾದ ನಂತರ ಪುನಃ ದೈಹಿಕ ಸಾಮರ್ಥ್ಯ ಸಾಬೀತುಪಡಿಸಿ ಕ್ರೀಡೆಗೆ ಮರಳಬೇಕಾಗುತ್ತದೆ. ಇವರ ಸ್ಥಾನಕ್ಕೆ ಬೇರೆಯವರು ಬಂದರೇ ಆಗ ಶಾಶ್ವತವಾಗಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸ್ಥಿತಿ ಇರುತ್ತದೆ. ಸದ್ಯ ಗಾಯಗೊಂಡು ಭಾರತೀಯ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿರುವ ಟಾಪ್ 3 ಆಟಗಾರರು ಯಾರು ಎಂಬುದನ್ನು ತಿಳಿಯೋಣ ಬನ್ನಿ.

1.ಕೆ.ಎಲ್.ರಾಹುಲ್ : ಕನ್ನಡಿಗ, ಭಾರತ ಕ್ರಿಕೆಟ್ ತಂಡದ ಉಪನಾಯಕರಾಗಿದ್ದ ಕೆ.ಎಲ್.ರಾಹುಲ್ ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ವರ್ಷದಲ್ಲಿ ಆರು ತಿಂಗಳ ಕಾಲ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿಯುತ್ತಾರೆ. ಇದು ಮುಂದುವರೆದರೇ ರಾಹುಲ್ ಟೀಂ ಇಂಡಿಯಾದಲ್ಲಿ ಸ್ಥಾನವನ್ನು ಪುನಃ ಪಡೆದುಕೊಳ್ಳುವುದು ಕಷ್ಟವಾಗುತ್ತದೆ.

2.ದೀಪಕ್ ಚಾಹರ್ : ಭಾರತ ತಂಡದ ಸ್ವಿಂಗ್ ಹಾಗೂ ವೇಗದ ಬೌಲರ್ ಆಗಿರುವ ದೀಪಕ್ ಚಾಹರ್ ಆಲ್ ರೌಂಡರ್ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೇ ಐಪಿಎಲ್ ಸಮಯದಲ್ಲಿ ಗಾಯಕ್ಕೆ ತುತ್ತಾದ ದೀಪಕ್ ಇಂದಿಗೂ ಗುಣಮುಖರಾಗಿಲ್ಲ. ಹಾಗಾಗಿ ದೀಪಕ್ ಬದಲು ಹಲವಾರು ಜನ ಯುವ ಬೌಲರ್ ಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ದೀಪಕ್ ಚಾಹರ್ ಕಮ್ ಬ್ಯಾಕ್ ಮಾಡುವುದು ಕಷ್ಟಸಾಧ್ಯವಾಗಬಹುದು.

3.ಕುಲದೀಪ್ ಯಾದವ್ : ಕಳಪೆ ಫಾರ್ಮ್ ನಿಂದ ತಂಡದಿಂದಲೇ ಹೊರಬಿದ್ದಿದ್ದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್, ಐಪಿಎಲ್ ನಲ್ಲಿ ಪುನಃ ತಮ್ಮ ಫಾರ್ಮ್ ಕಂಡುಕೊಂಡು ತಂಡಕ್ಕೆ ಮರಳಿದ್ದರು. ಆದರೇ ಈಗ ಪುನಃ ಮೊಣಕೈಗೆ ಗಾಯ ಮಾಡಿಕೊಂಡಿದ್ದಾರೆ. ಹಾಗಾಗಿ ಗಾಯದಿಂದ ಗುಣಮುಖರಾಗಿ ಪುನಃ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಕಷ್ಟಸಾಧ್ಯವಾಗಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.