ಹುಡುಗನ ಬಳಿ ಹಣವಿಲ್ಲ ಇಲ್ಲ, ಪ್ರೀತಿ ಬ್ರೇಕ್ ಮಾಡಿ ಕೈ ಕೊಟ್ಟ ಯುವತಿ. ಹಣವಿಲ್ಲ ಎಂದವಳಿಗೆ ಬುದ್ದಿ ಕಲಿಸಲು ಏನು ಮಾಡಿದ್ದಾನೆ ಗೊತ್ತೇ?

ಹುಡುಗನ ಬಳಿ ಹಣವಿಲ್ಲ ಇಲ್ಲ, ಪ್ರೀತಿ ಬ್ರೇಕ್ ಮಾಡಿ ಕೈ ಕೊಟ್ಟ ಯುವತಿ. ಹಣವಿಲ್ಲ ಎಂದವಳಿಗೆ ಬುದ್ದಿ ಕಲಿಸಲು ಏನು ಮಾಡಿದ್ದಾನೆ ಗೊತ್ತೇ?

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಿಜವಾದ ಪ್ರೀತಿ ಪ್ರೇಮ ಹಾಗೂ ಸಂಬಂಧಗಳ ಬಾಂಧವ್ಯ ಎನ್ನುವುದು ನಿಜಕ್ಕೂ ಕೂಡ ಅರ್ಥ ಹೀನವಾಗಿದೆ ಎಂದು ಹೇಳಬಹುದಾಗಿದೆ. ಇಂದು ಪ್ರೀತಿ ಮಾಡಿದರೆ ನಾಳೆ ಬ್ರೇಕಪ್ ಮಾಡೋ ಕಾಲ ಇದಾಗಿದೆ ಎಂದು ಹೇಳಬಹುದು ಇದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಹುಡುಗನ ಬಳಿ ಹಣ ಇದ್ದರೆ ಮಾತ್ರ ಹುಡುಗಿಯರು ಆತನನ್ನು ಪ್ರೀತಿಸುತ್ತಾರೆ ಇಲ್ಲದಿದ್ದರೆ ಹಣ ಕಾಲಿ ಆದಮೇಲೆ ಆತನನ್ನು ಬಿಟ್ಟು ಹೋಗುವುದು ಹಲವಾರು ಸುದ್ದಿ ವಿಚಾರಗಳಿಂದ ನಾವು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕೇಳುತ್ತಲೇ ಇರುತ್ತೇವೆ.

ಹೌದು ಇನ್ನು ನಾವು ಮಾತನಾಡಲು ಹೊರಟಿರುವುದು ಮುಂಬೈ ಮೂಲದ ಕಥೆಯೊಂದರ ಕುರಿತಂತೆ. ಪ್ರೀತಿ ಮಾಂಜ್ರೇಕರ್ ಎನ್ನುವ ಹುಡುಗ ಶ್ರೀಮಂತ ಮನೆತನದ ಹುಡುಗಿಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಈತ ನಾನಂದುಕೊಂಡಷ್ಟು ಶ್ರೀಮಂತನಲ್ಲ ಎಂಬುದಾಗಿ ತಿಳಿದು ಆತನೊಂದಿಗೆ ಬ್ರೇಕಪ್ ಮಾಡಿಕೊಳ್ಳುತ್ತಾಳೆ. ಇದಾದ ನಂತರ ತನ್ನ ಬಡತನದ ವಿಚಾರ ತಿಳಿದು ಪ್ರೀತಿಯಿಂದ ದೂರಾದದ್ದು ನೋಡಿ ಆತನಿಗೆ ಸಹಿಸಲು ಸಾಧ್ಯವಾಗಲಿಲ್ಲ. ಇದಕ್ಕಾಗಿಯೇ ಆಕೆಯ ಮನೆಯ ಡುಬ್ಲಿಕೇಟ್ ಕೀ ಮಾಡಿ ಆಕೆಯ ಮನೆಯವರು ಹೊರಹೋದ ಸಂದರ್ಭದಲ್ಲಿ ಆಕೆಯನ್ನು ಹೋಟೆಲ್ಗೆ ಕರೆಸಿಕೊಂಡು ನಂತರ ಡುಬ್ಲಿಕೇಟ್ ಕೀಯನ್ನು ತನ್ನ ಸ್ನೇಹಿತರಿಗೆ ನೀಡಿ ಆಕೆಯ ಮನೆಯನ್ನು ದೋಚು ವಂತೆ ಮಾಡಿದ್ದಾನೆ.

ನಂತರ ಆಕೆಯ ಜೊತೆಗೆ ಹೋಟೆಲಿನಿಂದ ವಾಪಸ್ ಅವರ ಮನೆಗೆ ಹೋಗಿ ಕಳ್ಳತನ ಆದ ಕುರಿತಂತೆ ಮೊದಲಬಾರಿಗೆ ತಿಳಿದವನಂತೆ ಅವಳ ಜೊತೆಗೆ ಹೋಗಿ ಪೊಲೀಸ್ ದೂರನ್ನು ಕೂಡ ನೀಡುತ್ತಾನೆ. ಪ್ರೀತೇಶ್ ನ ಸ್ನೇಹಿತರನ್ನು ಹಿಡಿದ ಪೊಲೀಸರಿಗೆ ಇದರ ಹಿಂದಿನ ಮಾಸ್ಟರ್ ಪ್ಲಾನ್ ಯಾರದು ಎಂಬುದನ್ನು ತಿಳಿದುಕೊಳ್ಳಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಆತನಿಗೆ ಯಾಕೆ ಈ ರೀತಿ ಮಾಡಿಸಿದೆ ಎಂದು ಕೇಳಿದಾಗ ಅವಳು ನನ್ನನ್ನು ದುಡ್ಡಿಲ್ಲ ಎಂಬುದಾಗಿ ಹೇಳಿ ಬಿಟ್ಟು ಹೋಗುತ್ತಾಳೆ ಇದಕ್ಕಾಗಿಯೇ ಅವಳ ಬಳಿ ಇರುವ ಎಲ್ಲ ಹಣವನ್ನು ನಾನೇ ದೋಚಿದ್ರೆ ಖಂಡಿತವಾಗಿ ಆಕೆ ನನ್ನ ಬಳಿ ಬರುತ್ತಾಳೆ ಎಂಬುದಾಗಿ ಈ ರೀತಿ ಮಾಡಿದೆ ಎಂಬುದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ. ಈ ಕಥೆಯನ್ನು ಕೇಳಿ ಪೋಲಿಸರಿಗೂ ಕೂಡ ಹುಡುಗನ ಮೇಲೆ ಕನಿಕರ ಬಂದದ್ದಂತೂ ಸುಳ್ಳಲ್ಲ.