ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಒಂದೆರಡು ಸಿನಿಮಾ ಯಶಸ್ಸು ಗಳಿಸಿದ ತಕ್ಷಣವೇ ತೆಲುಗಿನ ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ವಿಜಯ್ ದೇವರಕೊಂಡ. ಹೇಳಿದ್ದೇನು ಗೊತ್ತೇ??

ಒಂದೆರಡು ಸಿನಿಮಾ ಯಶಸ್ಸು ಗಳಿಸಿದ ತಕ್ಷಣವೇ ತೆಲುಗಿನ ಸ್ಟಾರ್ ನಟರಿಗೆ ಟಾಂಗ್ ಕೊಟ್ಟ ವಿಜಯ್ ದೇವರಕೊಂಡ. ಹೇಳಿದ್ದೇನು ಗೊತ್ತೇ??

1,997

ನಮಸ್ಕಾರ ಸ್ನೇಹಿತರೆ ತೆಲುಗು ಚಿತ್ರರಂಗದ ಉದಯೋನ್ಮುಖ ನಟನಾಗಿರುವ ವಿಜಯ್ ದೇವರಕೊಂಡ ಅವರು ಒಂದು ಅರ್ಜುನ್ ರೆಡ್ಡಿ ಎನ್ನುವ ಸಿನಿಮಾದ ಮೂಲಕ ಇಡೀ ಭಾರತೀಯ ಚಿತ್ರರಂಗದ ಹಿಂದಿರುಗಿ ನೋಡುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಈ ಚಿತ್ರದ ನಂತರ ಅವರು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಬಹುತೇಕ ಎಲ್ಲಾ ಸಿನಿಮಾಗಳಲ್ಲಿ ಕೂಡ ಯಶಸ್ಸನ್ನು ಸಾಧಿಸಿದ್ದಾರೆ. ಇಂದು ನಾವು ಮಾತನಾಡುವುದು ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಮಿಂಚಿರುವ ವಿಜಯ್ ದೇವರಕೊಂಡ ಲೈಗರ್ ಸಿನಿಮಾದ ಮೂಲಕ ಬಾಲಿವುಡ್ ಗೆ ಕೂಡ ಕಾಲಿಟ್ಟಿದ್ದಾರೆ.

Follow us on Google News

ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಇತ್ತೀಚಿಗಷ್ಟೇ ಲೈಗರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು ಪ್ರತಿಯೊಂದು ಭಾಷೆಗಳಲ್ಲಿ ಕೂಡ ಪ್ರತಿಯೊಬ್ಬ ಸ್ಟಾರ್ ನಟರು ಟ್ರೈಲರ್ ಅನ್ನು ಬಿಡುಗಡೆ ಮಾಡಿ ಶುಭಾಶಯ ಕೋರಿದರು. ಈ ಸಂದರ್ಭದಲ್ಲಿ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ವಿಜಯ್ ದೇವರಕೊಂಡ ನೀಡಿರುವ ಹೇಳಿಕೆ ಈಗ ದೊಡ್ಡಮಟ್ಟದ ಗದ್ದಲಕ್ಕೆ ಕಾರಣವಾಗಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ವಿಜಯ್ ದೇವರಕೊಂಡ ರವರು ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದ ಕುಟುಂಬದಿಂದ ಬಂದವರು.

ಹೀಗಾಗಿಯೇ ಟ್ರೈಲರ್ ಲಾಂಚ್ ಸಂದರ್ಭದಲ್ಲಿ ವಿಜಯ್ ದೇವರಕೊಂಡ ನನ್ನ ತಾತ ಅಪ್ಪ ಯಾರು ಎಂದು ಗೊತ್ತಿಲ್ಲದೆ ಇದ್ದರೂ ಕೂಡ ನೀವು ನನ್ನನ್ನು ಸಪೋರ್ಟ್ ಮಾಡಿ ಬೆಳೆಸಿದ್ದೀರಿ ನಿಮಗೆ ಧನ್ಯವಾದಗಳು ಎಂಬುದಾಗಿ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಮೂಲಕ ಸಿನಿಮಾ ಹಿನ್ನೆಲೆಯಿಂದ ಬಂದಿರುವ ಜೂನಿಯರ್ ಎನ್ಟಿಆರ್ ರಾಮ್ ಚರಣ್ ಅಲ್ಲು ಅರ್ಜುನ್ ಅವರಂತಹ ನಟರಿಗೆ ಪರೋಕ್ಷವಾಗಿಯೇ ವಿಜಯ್ ದೇವರಕೊಂಡ ಟಾಂಗ್ ನೀಡಿದ್ದಾರೆ ಎಂಬುದಾಗಿ ಸ್ಟಾರ್ ನಟರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.