ಕೊಹ್ಲಿ ಮಾಡಿದರು ಶಪಥ: ಫಾರ್ಮ್ ನಲ್ಲಿ ಇಲ್ಲದೆ ಇರುವ ಕೊಹ್ಲಿ ಮುಂದಿನ ಟಾರ್ಗೆಟ್ ಇಟ್ಟು ಹೇಳಿದ್ದೇನು ಗೊತ್ತೇ??
ಕೊಹ್ಲಿ ಮಾಡಿದರು ಶಪಥ: ಫಾರ್ಮ್ ನಲ್ಲಿ ಇಲ್ಲದೆ ಇರುವ ಕೊಹ್ಲಿ ಮುಂದಿನ ಟಾರ್ಗೆಟ್ ಇಟ್ಟು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಆಗಿರುವ ವಿರಾಟ್ ಕೊಹ್ಲಿ ಅವರು ಹಲವಾರು ವರ್ಷಗಳಿಂದ ಕಳಪೆ ಫಾರ್ಮ್ ನಿಂದ ಬಳಲುತ್ತಿದ್ದಾರೆ. ನಿಜಕ್ಕೂ ಕೂಡ ಅವರು ಇತ್ತೀಚಿನ ದಿನಗಳಲ್ಲಿ ತೋರಿಸುತ್ತಿರುವ ಬ್ಯಾಟಿಂಗ್ ಪ್ರದರ್ಶನ ತಂಡಕ್ಕೆ ನೆರವಾಗುತ್ತಿಲ್ಲ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ನಾವು ಮಾತನಾಡಲು ಹೊರಟಿರುವುದು ಇತ್ತೀಚಿಗಷ್ಟೇ ವಿರಾಟ್ ಕೊಹ್ಲಿ ರವರು ನೀಡಿರುವ ಹೇಳಿಕೆ ಕುರಿತಂತೆ.
ಹೌದು ಗೆಳೆಯರೇ ಈಗಾಗಲೇ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ವಿರಾಟ್ ಕೊಹ್ಲಿ ರವರು ತಂಡದಿಂದ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಮುಂದಿನ ಜಿಂಬಾಬ್ವೆ ಸರಣಿಯಲ್ಲಿ ವಿರಾಟ್ ಕೊಹ್ಲಿ ರವರು ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರರ ಜೊತೆಗೆ ಆಡಲಿದ್ದಾರೆ. ಇನ್ನು ಟಿ-20ವಿಶ್ವಕಪ್ ಗು ಮುನ್ನ ತಯಾರಿ ಎಂಬಂತೆ ಆಗಸ್ಟ್ 27 ರಿಂದ ಯುಎಇ ನಲ್ಲಿ ಏಷ್ಯಾಕಪ್ ಪ್ರಾರಂಭವಾಗಲಿದೆ. ಟಿ ಟ್ವೆಂಟಿ ವಿಶ್ವಕಪ್ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಇರುವ ಕಾರಣದಿಂದಾಗಿ ಈ ಏಷ್ಯಾಕಪ್ ನಲ್ಲಿ ಕೂಡ ಟಿ-ಟ್ವೆಂಟಿ ಫಾರ್ಮೇಟ್ ಅನ್ನು ಪ್ರಯೋಗಿಸಲಾಗಿದೆ. ಹೀಗಾಗಿ ವಿರಾಟ್ ಕೊಹ್ಲಿ ರವರು ಏಷ್ಯಾ ಕಪ್ ತಂಡಕ್ಕೆ ಆಗಬಹುದಾದ ಹಿನ್ನೆಲೆಯಲ್ಲಿ ಅವರಿಗೊಂದು ಅವಕಾಶ ಸಿಕ್ಕಿದೆ ಎಂದು ಹೇಳಬಹುದಾಗಿದೆ.
ಸಂದರ್ಶನದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ ರವರು ಏಷ್ಯಾಕಪ್ ಹಾಗೂ ವಿಶ್ವಕಪ್ನಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ನೆರವಾಗುವ ಪ್ರದರ್ಶನವನ್ನು ನೀಡುವುದು ನನ್ನ ಗುರಿ ಎಂಬುದಾಗಿ ಹೇಳಿದ್ದಾರೆ. ಏಷ್ಯಾಕಪ್ ನಲ್ಲಿ ತಂಡದ ಪರವಾಗಿ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದರೆ ಮಾತ್ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅವರಿಗೆ ಸ್ಥಾನ ಸಿಗಲಿದೆ. ಹೀಗಾಗಿ ಏಷ್ಯಾಕಪ್ ಆಗಸ್ಟ್ 27 ರಿಂದ ಪ್ರಾರಂಭವಾಗಲಿದೆ ಇದು ವಿರಾಟ್ ಕೊಹ್ಲಿ ರವರಿಗೆ ಕೊನೆಯ ಅವಕಾಶ ಎಂದರೆ ತಪ್ಪಾಗಲಾರದು.