ಯೋಗರಾಜ್ ಭಟ್ ಅವರ ಸಾಹಿತ್ಯದಲ್ಲಿ ಬಂದ ದೇವ್ಲೆ ದೇವ್ಲೆ ಹಾಡು ಸಖತ್ ಹಿಟ್, ಎಲ್ಲರ ಬಾಯಲ್ಲೂ ಈಗ ಇದೆ ಹಾಡು !!

ಯೋಗರಾಜ್ ಭಟ್ ಅವರ ಸಾಹಿತ್ಯದಲ್ಲಿ ಬಂದ ದೇವ್ಲೆ ದೇವ್ಲೆ ಹಾಡು ಸಖತ್ ಹಿಟ್, ಎಲ್ಲರ ಬಾಯಲ್ಲೂ ಈಗ ಇದೆ ಹಾಡು !!

ಗೋಲ್ಡನ್ ಸ್ಟಾರ್ ಗಣೇಶ್ ಅವರ ಅಭಿನಯದ 38ನೆಯ ಸಿನಿಮಾ ಆಗಿರುವ ಗಾಳಿಪಟ 2 ಇನ್ನೇನು ಮುಂದಿನ ತಿಂಗಳು ಆಗಸ್ಟ್ 12 ರಂದು ಭರ್ಜರಿಯಾಗಿ ಬಿಡುಗಡೆಯಾಗಲಿದೆ. ಹೌದು ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ಶರಣ್, ರಂಗಾಯಣ ರಘು, ಅನಂತ್ ನಾಗ್, ಸಂಯುಕ್ತ ಮೆನನ್, ನಿಶ್ವಿಕಾ ನಾಯ್ಡು, ವೈಭವಿ, ಶರ್ಮಿಳಾ ಮಾಂಡ್ರೆ, ಸುಧಾ ಬೆಳವಾಡಿ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ.

ಹಾಗೆಯೇ ಈ ಸಿನಿಮಾವನ್ನು ರಮೇಶ್ ರೆಡ್ಡಿ ಅವರು ನಿರ್ಮಾಣ ಮಾಡಿದ್ದಾರೆ ಮತ್ತು ನಮ್ಮ ಯೋಗರಾಜ್ ಭಟ್ ಅವರು ನಿರ್ದೇಶನ ಮಾಡಿದ್ದಾರೆ. ಗಣೇಶ್ ಮತ್ತು ಯೋಗರಾಜ್ ಭಟ್ ಅವರ ಕಾಂಬಿನೇಷನ್ ನಲ್ಲಿ ಇದು ನಾಲ್ಕನೇ ಸಿನಿಮಾ ಆದ್ರೆ ದಿಗಂತ್ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಷನ್ ನಲ್ಲಿ ಇದು ಐದನೆಯ ಚಿತ್ರವಾಗಿದೆ. ಇನ್ನು ಈ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಅರ್ಜುನ್ ಜನ್ಯಾ ಅವರು ನೀಡಿದ್ದಾರೆ.

ಗಾಳಿಪಟ 2 ಸಿನಿಮಾದ ಎಕ್ಸಾಮ್ ಸಾಂಗ್, ನಾನಾಡದ ಮಾತೆಲ್ಲವೂ ಹಾಡುಗಳು ಬಿಡುಗಡೆಯಾಗಿವೆ. ಇದರಂತೆಯೇ ಮೂರನೆಯ ಹಾಡಾಗಿರುವ ದೇವ್ಲೆ ದೇವ್ಲೆ ಹಾಡು ಕೂಡ ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆಯಾಗಿದೆ ಕೆಲವೇ ಕ್ಷಣಗಳಲ್ಲಿ ಭಾರಿ ಎತ್ತರಕ್ಕೆ ಹೋಗಿದೆ ಎಂದು ಹೇಳಬಹುದು. ಹೌದು ದೇವ್ಲೆ ದೇವ್ಲೆ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನೂ ಈ ಹಾಡನ್ನು ಹಾಡಿರುವ ವಿಜಯ್ ಪ್ರಕಾಶ್ ಅವರ ಧ್ವನಿಗೆ ಬಹುತೇಕ ಅಭಿಮಾನಿಗಳು ಮನಸೋತಿದ್ದಾರೆ. ಹಾಗೆಯೇ ಪದ ಪ್ರಯೋಗದಲ್ಲಿ ನಮ್ಮ ಯೋಗರಾಜ್ ಭಟ್ ಅವರಿಗೆ ಯಾರೂ ಸರಿಸಾಟಿ ಇಲ್ಲ ಎಂದು ಹೇಳಬಹುದು. ಹೌದು ಇವರ ಮಜವಾದ ಹಾಡುಗಳನ್ನು ಕೇಳುವುದಕ್ಕೇ ಚೆಂದ ಎಂದು ಹೇಳಬಹುದು. ಹಾಗೆಯೇ ದೇವ್ಲೆ ದೇವ್ಲೆ ಹಾಡನ್ನು ಲಾಕ್ ಡೌನ್ ಸಮಯದಲ್ಲಿ ಶೂಟಿಂಗ್ ಮಾಡಲಾಗಿದೆ. ಅದರಲ್ಲೂ ಹೆಚ್ಚು ಶೀತದ ವಾತಾವರಣ ಹೊಂದಿರುವ ಕಜಕಿಸ್ತಾನ್ ದೇಶದಲ್ಲಿ ಶೂಟಿಂಗ್ ಮಾಡಿದ್ದಾರೆ.

ಇನ್ನು ದೇವ್ಲೆ ದೇವ್ಲೆ ಹಾಡನ್ನು ಕೇಳಿದ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವುದಕ್ಕೆ ಶುರು ಮಾಡಿಕೊಂಡಿದ್ದಾರೆ. ಹೌದು ವಿಜಯ್ ಪ್ರಕಾಶ್ ಅವರು ಹಾಡಿರುವ ಈ ಹಾಡು ಈಗ ಎಲ್ಲ ಕಡೆ ಭಾರೀ ಸದ್ದನ್ನೇ ಮಾಡುತ್ತಿದೆ. ಇನ್ನು ಗಣೇಶ್ ಅವರ ಅಭಿಮಾನಿಗಳು ಗಾಳಿಪಟ 2 ಸಿನಿಮಾದ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ.