ಕ್ರಿಕೆಟ್ ಲೋಕದಲ್ಲಿ ದೊರೆಯಾಗಿ ಮೆರೆಯುತ್ತಿರುವ ಟಾಪ್ 5 ಕ್ರಿಕೆಟಿಗರು ನಿವೃತ್ತಿಯ ಹಾದಿಯಲ್ಲಿ? ಸ್ಟೋಕ್ಸ್ ರವರಂತೆ ತೆಗೆದುಕೊಳ್ಳುತ್ತಾರೆ ದಿಡೀರ್ ನಿರ್ಧಾರ??

ಕ್ರಿಕೆಟ್ ಲೋಕದಲ್ಲಿ ದೊರೆಯಾಗಿ ಮೆರೆಯುತ್ತಿರುವ ಟಾಪ್ 5 ಕ್ರಿಕೆಟಿಗರು ನಿವೃತ್ತಿಯ ಹಾದಿಯಲ್ಲಿ? ಸ್ಟೋಕ್ಸ್ ರವರಂತೆ ತೆಗೆದುಕೊಳ್ಳುತ್ತಾರೆ ದಿಡೀರ್ ನಿರ್ಧಾರ??

ನಮಸ್ಕಾರ ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಲೀಗ್ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಟೂರ್ನಮೆಂಟ್ ಗಳ ಒತ್ತಡದಿಂದಾಗಿ ಆಟಗಾರರು ಬಳಲಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಬೆನ್ ಸ್ಟೋಕ್ಸ್ ಕೂಡ ನಾವು ಆಟಗಾರರೇ ಹೊರತು ಪೆಟ್ರೋಲ್ ಡಿಸೈನ್ ಹಾಕಿ ನಡೆಸುವುದಕ್ಕೆ ವಾಹನಗಳು ಅಲ್ಲ ಎಂಬುದಾಗಿ ಆಟಗಾರರು ಎಷ್ಟರಮಟ್ಟಿಗೆ ಒತ್ತಡದಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದರು. ಅಷ್ಟೊಂದು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದ ಬೆನ್ ಸ್ಟೋಕ್ಸ್ ರವರು ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ರೀತಿ ಮುಂದಿನ ದಿನಗಳಲ್ಲಿ ಕೂಡ ನಾವು ಬೇರೆಬೇರೆ ಕ್ರಿಕೆಟಿಗರನ್ನು ಈ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳುವಂತೆ ನೋಡಬಹುದಾಗಿದೆ. ಹಾಗಿದ್ದರೆ ಅಂತಹ ಕ್ರಿಕೆಟಿಗರು ಯಾರೆಲ್ಲಾ ಎಂಬುದನ್ನು ತಿಳಿಯೋಣ ಬನ್ನಿ.

ಟ್ರೆಂಟ್ ಬೋಲ್ಟ್; ಟ್ರೆಂಟ್ ಬೋಲ್ಟ್ ರವರು ನ್ಯೂಜಿಲೆಂಡ್ ರಾಷ್ಟ್ರೀಯ ಕ್ರಿಕೆಟ್ ತಂಡದ ಪರವಾಗಿ ಮತ್ತು ಐಪಿಎಲ್ ನಲ್ಲಿ ಕೂಡ ಆಡುತ್ತಿದ್ದಾರೆ. ಇನ್ನು ಮುಂಬರುವ ಟಿ-ಟ್ವೆಂಟಿ ಹಾಗೂ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಟ್ರೆಂಟ್ ಬೋಲ್ಟ್ ರವರು ಮುಂದಿನ ದಿನಗಳಲ್ಲಿ ಅತಿಶೀಘ್ರವಾಗಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯನ್ನು ಘೋಷಿಸಬಹುದಾದ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. 78 ಟೆಸ್ಟ್ ಪಂದ್ಯಗಳನ್ನು ಆಡಿರುವ ಟ್ರೆಂಟ್ ಬೋಲ್ಟ್ ರವರು ಬರೋಬ್ಬರಿ 318 ವಿಕೆಟ್ಗಳನ್ನು ಕಬಳಿಸಿದ್ದಾರೆ.

ಶಕಿಬ್ ಅಲ್ ಹಸನ್; ಬಾಂಗ್ಲಾ ದೇಶದ ಅತ್ಯಂತ ಜನಪ್ರಿಯ ಹಾಗೂ ಅತ್ಯಂತ ಯಶಸ್ವಿ ಆಲ್ರೌಂಡರ್ ಗಳಲ್ಲಿ ಒಬ್ಬರಾಗಿರುವ ಶಕಿಬ್ ಅಲ್ ಹಸನ್ ರವರು ಈಗಾಗಲೇ ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗಳಲ್ಲಿ ತಮ್ಮ ವೈಯಕ್ತಿಕ ಕಾರಣವನ್ನು ನೀಡಿ ಸರಣಿಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅವರಿಗೆ ಟೆಸ್ಟ್ ಕ್ರಿಕೆಟ್ ಸರಣಿ ಗಳಲ್ಲಿ ಅವಕಾಶ ನೀಡುವುದು ಕಡಿಮೆಯಾಗಿರುವ ಕಾರಣದಿಂದಾಗಿ ಅವರು ಟೆಸ್ಟ್ ಕ್ರಿಕೆಟ್ ನಿಂದ ಹಿಂದೆ ಸರಿಯಲಿದ್ದಾರೆ ಎಂಬುದಾಗಿ ಮಾತುಕತೆ ಕೇಳಿಬರುತ್ತಿದೆ.

ಕೇನ್ ವಿಲಿಯಂಸನ್; ನ್ಯೂಜಿಲೆಂಡ್ ಕ್ರಿಕೆಟ್ ತಂಡ ಕಂಡಂತಹ ಅತ್ಯಂತ ಯಶಸ್ವಿ ನಾಯಕರಲ್ಲಿ ಅಗ್ರಗಣ್ಯನಾಗಿ ಕಾಣಿಸಿಕೊಳ್ಳುವ ಕೇನ್ ವಿಲಿಯಮ್ಸನ್ ಇತ್ತೀಚಿನ ದಿನಗಳಲ್ಲಿ ಟಿ-ಟ್ವೆಂಟಿ ಮಾದರಿಯ ಕ್ರಿಕೆಟ್ ನಲ್ಲಿ ಲಯ ಕಳೆದುಕೊಂಡಂತೆ ಕಂಡುಬರುತ್ತಿದ್ದಾರೆ. ಹೀಗಾಗಿ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಮುಗಿದ ನಂತರ ಅವರು ತಂಡದಿಂದ ನಿವೃತ್ತಿ ಘೋಷಿಸಿ ಆ ನಾಯಕನ ಸ್ಥಾನವನ್ನು ಮಿಚೆಲ್ ಸ್ಯಾಂಟ್ನರ್ ಅವರಿಗೆ ನೀಡುವ ಒಳ ಸುದ್ದಿಗಳು ಈಗಾಗಲೇ ಕೇಳಿ ಬರುತ್ತಿದೆ.

ಸ್ಟೀವ್ ಸ್ಮಿತ್; ಆಸ್ಟ್ರೇಲಿಯ ತಂಡದ ಅತ್ಯಂತ ಅಗ್ರೆಸ್ಸಿವ್ ಬ್ಯಾಟ್ಸ್ಮನ್ ಹಾಗೂ ನಾಯಕ ಆಗಿದ್ದ ಸ್ಟೀವ್ ಸ್ಮಿತ್ ಏಕದಿನ ಹಾಗೂ ಟೆಸ್ಟ್ ಪಂದ್ಯಗಳಲ್ಲಿ ತಮ್ಮದೇ ಆದಂತಹ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ ಆದರೆ ಟಿ-ಟ್ವೆಂಟಿ ಮಾದರಿಯ ಪಂದ್ಯಗಳಲ್ಲಿ ಅಷ್ಟೊಂದು ಹೇಳಿಕೊಳ್ಳುವ ಪ್ರದರ್ಶನವನ್ನು ನೀಡಿಲ್ಲ. 57 ಟಿ20 ಪಂದ್ಯಗಳಿಂದ ಕೇವಲ 928 ರನ್ನುಗಳನ್ನು ಕಲೆ ಹಾಕಿದ್ದಾರೆ. ಹೀಗಾಗಿ ಈ ಬಾರಿಯ ವಿಶ್ವಕಪ್ ನಂತರ ಅವರು ಟಿ-ಟ್ವೆಂಟಿ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

ಇನ್ನು ಈ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮತ್ತೊಬ್ಬ ಪ್ರಮುಖ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ. ಇತ್ತೀಚಿಗೆ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲ ವಿಫಲವಾಗುತ್ತಿದೆ ಎಂಬುದಾಗಿ ಯಾವುದೇ ಅನುಮಾನವಿಲ್ಲದೆ ಹೇಳಬಹುದು. ಇತ್ತೀಚಿಗೆ ಆಡಿರುವ ಬಹುತೇಕ ಎಲ್ಲಾ ಸರಣಿಗಳಲ್ಲಿ ಕೂಡ ಕಳೆದು ಪ್ರದರ್ಶನವನ್ನು ನೀಡಿರುವ ವಿರಾಟ್ ಕೊಹ್ಲಿ ರವರು ಮುಂದಿನ ದಿನಗಳಲ್ಲಿ ಕೇವಲ ಟೆಸ್ಟ್ ಹಾಗೂ ಏಕದಿನ ತಂಡಗಳಲ್ಲಿ ಕಾಣಿಸಿಕೊಂಡು ಟಿ-ಟ್ವೆಂಟಿ ಕ್ರಿಕೆಟ್ ತಂಡದಿಂದ ನಿವೃತ್ತಿಯನ್ನು ಘೋಷಿಸುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಕೇಳಿಬರುತ್ತಿದೆ. ಖಂಡಿತವಾಗಿ ಎಲ್ಲಾ ಆಟಗಾರರು ನಿವೃತ್ತಿಯನ್ನು ಪಡೆದುಕೊಂಡರೆ ಅವರ ಅಭಿಮಾನಿಗಳಿಗೆ ದುಃಖ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.