ಒಂದೊಂದು ದಿನಕ್ಕೆ ಒಂದೊಂದು ಹೇಳಿಕೆ: ಈಗ ಕೊಹ್ಲಿ ಜೊತೆ 20 ನಿಮಿಷ ಕೊಡಿ, ಎಂದು ಷಾಕಿಂಗ್ ಹೇಳಿಕೆ ನೀಡಿದ ಗವಾಸ್ಕರ್. ಯಾಕೆ ಅಂತೇ ಗೊತ್ತೇ??

ಒಂದೊಂದು ದಿನಕ್ಕೆ ಒಂದೊಂದು ಹೇಳಿಕೆ: ಈಗ ಕೊಹ್ಲಿ ಜೊತೆ 20 ನಿಮಿಷ ಕೊಡಿ, ಎಂದು ಷಾಕಿಂಗ್ ಹೇಳಿಕೆ ನೀಡಿದ ಗವಾಸ್ಕರ್. ಯಾಕೆ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯ ವಿಶ್ವ ಕ್ರಿಕೆಟ್ ನಲ್ಲಿ ಬಹುಚರ್ಚಿತ ವಿಷಯವೆಂದರೇ ಅದು ರನ್ ಮೆಷಿನ್ ಎಂದೇ ಹೆಸರುವಾಸಿಯಾಗಿದ್ದ ವಿರಾಟ್ ಕೊಹ್ಲಿಯ ಕಳಪೆ ಫಾರ್ಮ್ ಬಗ್ಗೆ. ಹೌದು ವಿಶ್ವದ ಈಗಿನ ಕ್ರಿಕೇಟರ್ ಗಳು ಹಾಗೂ ಮಾಜಿ ಕ್ರಿಕೇಟರ್ ಗಳೂ ಎಲ್ಲರೂ ಸಹ ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆ ಮಾತನಾಡುತ್ತಿದ್ದಾರೆ. ಕೆಲವು ಆಟಗಾರರು ವಿರಾಟ್ ಪರವಾಗಿ ಮಾತನಾಡಿದರೇ, ಕೆಲವರು ವಿರಾಟ್ ವಿರುದ್ಧವಾಗಿ ಮಾತನಾಡುತ್ತಿದ್ದಾರೆ.

ಆದರೇ ಈ ನಡುವೆ ಭಾರತ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸುನಿಲ್ ಗವಾಸ್ಕರ್ ಮಾತ್ರ ಬೇರೆಯದೇ ವರಾತ ತೆಗೆದಿದ್ದಾರೆ. ವಿರಾಟ್ ಕೊಹ್ಲಿ ನಿಮ್ಮ 20 ನಿಮಿಷ ಸಮಯ ನನಗೆ ಕೊಡಿ, ನಿಮ್ಮ ಫಾರ್ಮ್ ನ್ನು ನಾನು ನಿಮಗೆ ವಾಪಸ್ ಕೊಡಿಸುವಂತೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ ಈ ಹೇಳಿಕೆ ಏಕೆ ಹೇಳಿದ್ದಾರೆಂದು ರನ್ನು ತಿಳಿಯೋಣ ಬನ್ನಿ.

ಗವಾಸ್ಕರ್ ಪ್ರಕಾರ ವಿರಾಟ್ ಕೊಹ್ಲಿ ಸದ್ಯ ಆಫ್ ಸ್ಟಂಪ್ ನಿಂದ ಹೊರಹೋಗುವ ಚೆಂಡುಗಳನ್ನು ಕೆಣಕಿ ಬಹಳ ಸಲ ಔಟಾಗಿದ್ದಾರೆ. ಆಫ್ ಸ್ಟಂಪ್ ನಿಂದ ಹೊರಹೋಗುವ ಎಸೆತಗಳನ್ನು ಎದುರಿಸಲು ಅವರು ಬೇರೆಯದೇ ಟೆಕ್ನಿಕ್ ಬಳಸಬೇಕು. ಆಗ ಆ ಥರದ ಎಸೆತಗಳನ್ನು ಸುಲಭವಾಗಿ ಬೌಂಡರಿಯತ್ತ ಬಾರಿಸಬಹುದು. ವಿರಾಟ್ ಕೊಹ್ಲಿ ನನ್ನ ಜೊತೆ 20 ನಿಮಿಷ ಸಮಯ ಕಳೆದರೇ ನಾನು ಆ ಟೆಕ್ನಿಕ್ ನ್ನು ಅವರಿಗೆ ಹೇಳಿಕೊಡಬಲ್ಲೆ, ಆದರೇ ಅದು ವರ್ಕೌಟ್ ಆಗುವುದೋ ಬಿಡುವುದೋ ಎಂಬುದು ಕೊಹ್ಲಿ ಯವರು ಅಳವಡಿಸಿಕೊಳ್ಳುವುದರ ಮೇಲೆ ಬಿಟ್ಟಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.