ಜೀವನದಲ್ಲಿ ಯಶಸ್ಸು ಸಿಗುವುದೇ ಕಷ್ಟ: ಆದರೆ ಇವರಿಗೆ ಮಾತ್ರ 35 ವಯಸ್ಸಾದ ಬಳಿಕ ಸಿಗುತ್ತದೆ ಸುಲಭ ಯಶಸ್ಸು. ಯಾರ್ಯಾರಿಗೆ ಗೊತ್ತೇ?

ಜೀವನದಲ್ಲಿ ಯಶಸ್ಸು ಸಿಗುವುದೇ ಕಷ್ಟ: ಆದರೆ ಇವರಿಗೆ ಮಾತ್ರ 35 ವಯಸ್ಸಾದ ಬಳಿಕ ಸಿಗುತ್ತದೆ ಸುಲಭ ಯಶಸ್ಸು. ಯಾರ್ಯಾರಿಗೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ಹುಟ್ಟಿರುವ ಪ್ರತಿಯೊಬ್ಬ ಮನುಷ್ಯನು ಕೂಡ ಜೀವನದಲ್ಲಿ ಹಣ ಹಾಗೂ ಸಮಾಜದಲ್ಲಿ ಪ್ರತಿಷ್ಠೆಯಿಂದ ಹೆಸರು ಗಳಿಸುವ ಮೂಲಕ ಯಶಸ್ವಿ ಜೀವನವನ್ನು ನಡೆಸಬೇಕು ಎನ್ನುವ ಕನಸನ್ನು ಪ್ರತಿಯೊಬ್ಬರು ಕೂಡ ಹುಟ್ಟು ಹಾಕಿಕೊಂಡಿರುತ್ತಾರೆ. ಆದರೆ ಅದರಲ್ಲಿ ಯಶಸ್ಸನ್ನು ಪಡೆದುಕೊಳ್ಳುವವರು ಬೆರಳೆಣಿಕೆಯಷ್ಟು ಜನ ಮಾತ್ರ. ಆದರೆ ಕೆಲವೊಂದು ದಿನಾಂಕದಲ್ಲಿ ಜನಿಸಿದ ಜನರು 35 ವರ್ಷದ ನಂತರ ಜೀವನದಲ್ಲಿ ಯಶಸ್ಸನ್ನು ಹೊಂದುತ್ತಾರೆ ಎನ್ನುವುದಾಗಿ ಸಂಖ್ಯಾಶಾಸ್ತ್ರದ ಮೂಲಕವೇ ತಿಳಿದುಬಂದಿದೆ. ಸಂಖ್ಯಾಶಾಸ್ತ್ರದ ಮೂಲಕ ವ್ಯಕ್ತಿಯ ಭವಿಷ್ಯವನ್ನು ತಿಳಿದುಕೊಳ್ಳಲು ಅವುಗಳನ್ನು ಕೂಡಿಸಲಾಗುತ್ತದೆ.

ಇದನ್ನೇ ರಾಡಿಕ್ಸ್ ಎಂದು ಕರೆಯುತ್ತಾರೆ. ಉದಾಹರಣೆಗೆ ತಿಂಗಳ 8 17 ಹಾಗೂ 26 ನೇ ದಿನಾಂಕದಂದು ಜನಿಸಿದವರು 8ರ ರಾಡಿಕ್ಸ್ ಸಂಖ್ಯೆಯನ್ನು ಹೊಂದಿರುತ್ತಾರೆ. ಇವುಗಳ ಮೇಲೆ ಶನಿದೇವನ ಪ್ರಭಾವ ಬೀರುತ್ತದೆ. ರಾಡಿಕ್ಸ್ 8 ಸಂಖ್ಯೆಯನ್ನು ಹೊಂದಿರುವ 35 ವಯಸ್ಸಿನ ನಂತರ ಯಶಸ್ಸನ್ನು ಪಡೆಯುತ್ತಾರೆ. ಇವರು ತಮ್ಮ ಗುರಿಯನ್ನು ಸಾಧಿಸಲು ಎಂತಹ ಕಷ್ಟವನ್ನು ಎದುರಿಸಲು ಪರಿಶ್ರಮವನ್ನು ಪಡಲು ಸಿದ್ದರಾಗಿರುತ್ತಾರೆ. ಜೀವನದ ಮೊದಲಾರ್ಧದಲ್ಲಿ ಸಾಕಷ್ಟು ಕಷ್ಟವನ್ನು ಪಡುತ್ತಾರೆ ಹಾಗೂ ಯಾವುದೇ ಕೆಲಸವನ್ನು ಮಾಡಲು ಸಿದ್ಧರಾಗಿರುತ್ತಾರೆ ಆದರೆ ಜೀವನದ ದ್ವಿತೀಯಾರ್ಧದಲ್ಲಿ ಅದರ ಪ್ರತಿಫಲವನ್ನು ಅನುಭವಿಸುತ್ತಾರೆ.

ಯಾರೊಂದಿಗೂ ಸುಲಭವಾಗಿ ಅವರ ಸ್ನೇಹವನ್ನು ಸಂಪಾದಿಸುವುದಿಲ್ಲ ತಮ್ಮ ಕೆಲಸವನ್ನು ಮೌನವಾಗಿದ್ದುಕೊಂಡೆ ಯಶಸ್ವಿಯಾಗಿ ಪೂರೈಸುತ್ತಾರೆ. ಇವರು ಯಾರೊಂದಿಗೂ ತಮ್ಮ ಮಾತುಗಳನ್ನು ಹಂಚಿಕೊಳ್ಳುವುದಿಲ್ಲ ಸುಮ್ಮನಿದ್ದು ಕೊಂಡೆ ತಮ್ಮ ಗುರಿಯನ್ನು ಸಾಧಿಸಿಬಿಡುತ್ತಾರೆ. ಅದರಲ್ಲೂ ವಿಶೇಷವಾಗಿ ಸ್ಟೀಲ್ ಹಾಗೂ ರಿಯಲ್ ಎಸ್ಟೇಟ್ ವ್ಯಾಪಾರಗಳಲ್ಲಿ ಇವರು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಪಡೆಯುತ್ತಾರೆ ಇದೆ ಅವರ ಪ್ರಮುಖ ಗೆಲುವಿನ ಗುಟ್ಟಾಗಿರುತ್ತದೆ ಎಂದರೆ ತಪ್ಪಾಗಲಾರದು.