ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಒಂದು ಕಡೆ ಎಲ್ಲರೂ ಟೀಕೆ ಮಾಡುತ್ತಿರುವಾಗ ಕಡಿಮೆ ರನ್ ಗೆ ಔಟ್ ಆದ ಕೊಹ್ಲಿ ಕಂಡು ಇಂಗ್ಲೆಂಡ್ ನಾಯಕ ಬಟ್ಲರ್ ಹೇಳಿದ್ದೇನು ಗೊತ್ತೇ?

510

Get real time updates directly on you device, subscribe now.

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಅವರು ಹಲವಾರು ವರ್ಷಗಳಿಂದ ಕಳಪೆ ಫಾರ್ಮ್ ನಲ್ಲಿ ಇದ್ದಾರೆ. ಒಂದು ಕಾಲದಲ್ಲಿ ಬೌಲರ್ಗಳ ಬೆವರನ್ನು ಇಳಿಸುತ್ತಿದ್ದ ವಿರಾಟ್ ಕೊಹ್ಲಿ ಈಗ ಬೌಲರ್ ಗಳಿಂದ ತಮ್ಮ ಫಾರ್ಮ್ ಅನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ 2019 ರಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದ್ದೇ ಕೊನೆ.

ಅದಾದ ಮೇಲಿಂದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಾಗಲಿ ಅಥವಾ ಐಪಿಎಲ್ ನಲ್ಲಾಗಲಿ ವಿರಾಟ್ ಕೊಹ್ಲಿ ಅವರು ಯಾವುದೇ ಗಮನಾರ್ಹ ಪ್ರದರ್ಶನಗಳನ್ನು ನೀಡಿಲ್ಲ ಎನ್ನುವುದು ನಿಜಕ್ಕೂ ಕೂಡ ಒಬ್ಬ ಕ್ರಿಕೆಟ್ ಅಭಿಮಾನಿಯಾಗಿ ಎಲ್ಲರೂ ಕೂಡ ಬೇಸರ ವ್ಯಕ್ತಪಡಿಸಿ ಬೇಕಾಗಿರುವಂತಹ ವಿಚಾರ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರವರು ತೊಡೆಸಂದು ಇಂಜುರಿಯ ಕಾರಣದಿಂದಾಗಿ ತಂಡದಿಂದ ಹೊರಗೆ ಇದ್ದರು. ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ರವರು ತಂಡದಲ್ಲಿ ಸೇರಿಕೊಂಡರು ಕೂಡ ಮೂರು ಬೌಂಡರಿಗಳನ್ನು ಸತತವಾಗಿ ಬಾರಿಸಿದರು ನಂತರ 16 ರನ್ನುಗಳನ್ನು ಗಳಿಸಿ ಮತ್ತೆ ಔಟ್ ಆಗುತ್ತಾರೆ.

ಇದರಿಂದಾಗಿ ಕಳಪೆ ಫಾರ್ಮ್ ನಿಂದ ವಿರಾಟ್ ಕೊಹ್ಲಿ ಹೊರಬರುತ್ತಾರೆ ಎನ್ನುವುದನ್ನು ಅವರ ಸಮರ್ಥಕರು ಆಸೆ ಬಿಟ್ಟಂತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇಂಗ್ಲೆಂಡ್ ತಂಡದ ಕಪ್ತಾನ ಆಗಿರುವ ಜಾಸ್ ಬಟ್ಲರ್ ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಅವರ ಸಪೋರ್ಟ್ ಗೆ ನಿಂತಿದ್ದಾರೆ. ವಿಶ್ವದಲ್ಲೇ ನಂಬರ್ ವನ್ ಆಟಗಾರ ಆಗಿರುವ ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಬ್ಯಾಟ್ಸ್ಮನ್ ಅವರಿಂದ ಅತಿಶೀಘ್ರದಲ್ಲಿ ಅಮೋಘ ಇನ್ನಿಂಗ್ಸ್ ಮೂಡಿಬರಲಿದೆ ಎಂಬುದಾಗಿ ಹೇಳಿದ್ದಾರೆ. ಜಾಸ್ ಬಟ್ಲರ್ ರವರ ವಿರಾಟ್ ಕೊಹ್ಲಿ ಬಗೆಗಿನ ಈ ಹೇಳಿಕೆಯ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Get real time updates directly on you device, subscribe now.