ನಾಯಕ ರೋಹಿತ್ ಗೆ ಕಿಮ್ಮತ್ತು ಬೆಲೆ ಕೊಡುತ್ತಿಲ್ಲವೇ?? ರೋಹಿತ್ ಗೆ ಶಾಕ್ ಮೇಲೆ ಶಾಕ್. ಬಿಸಿಸಿಐ ಇದೀಗ ಏನು ಮಾಡಿದೆ ಗೊತ್ತೆ??

ನಾಯಕ ರೋಹಿತ್ ಗೆ ಕಿಮ್ಮತ್ತು ಬೆಲೆ ಕೊಡುತ್ತಿಲ್ಲವೇ?? ರೋಹಿತ್ ಗೆ ಶಾಕ್ ಮೇಲೆ ಶಾಕ್. ಬಿಸಿಸಿಐ ಇದೀಗ ಏನು ಮಾಡಿದೆ ಗೊತ್ತೆ??

ನಮಸ್ಕಾರ ಸ್ನೇಹಿತರೆ ನಾಯಕ ರೋಹಿತ್ ಶರ್ಮಾ ಎಂತಹ ಗುಣಮಟ್ಟದ ನಾಯಕ ಎನ್ನುವುದನ್ನು ನಾವು ವಿವರಿಸಿ ಹೇಳಬೇಕಾಗಿಲ್ಲ. ಮುಂಬೈ ಐದು ಬಾರಿ ಚಾಂಪಿಯನ್ ತಂಡವಾಗಿದ್ದು ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡ ನಂತರ ಸತತವಾಗಿ 14 ಪಂದ್ಯಗಳನ್ನು ಗೆದ್ದು ವಿಶ್ವದಾಖಲೆಯನ್ನು ಕೂಡ ನಿರ್ಮಿಸಿದ ನಾಯಕನಾಗಿ ರೋಹಿತ್ ಶರ್ಮಾ ರವರು ಕಂಡುಬಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ರವರು ಹೊಗಳುವ ಅಥವಾ ಪ್ರಶಂಸಿಸುವ ಆಟಗಾರರನ್ನು ಬಿಸಿಸಿಐ ನಿಧಾನಗತಿಯಲ್ಲಿ ಕೈ ಬಿಡುತ್ತಿದೆ ಎಂಬುದಾಗಿ ತಿಳಿದುಬಂದಿದೆ.

ಹೌದು ಗೆಳೆಯರೇ ಇತ್ತೀಚಿಗಷ್ಟೇ ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನವನ್ನು ನೀಡುವ ಮೂಲಕ ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದ ಕಾಶ್ಮೀರ ಮೂಲದ ಯುವ ವೇಗಿ ಉಮ್ರಾನ್ ಮಲಿಕ್ ಉತ್ತಮ ಆಟಗಾರ ಆಗಿದ್ದು ವಿಶ್ವಕಪ್ ದೃಷ್ಟಿಯಲ್ಲಿ ಅವರು ಕೂಡ ಪ್ರಮುಖವಾಗಿದ್ದು ಅವರಿಗೆ ನಾವು ಮಾರ್ಗದರ್ಶನವನ್ನು ನೀಡಬೇಕಾಗಿರುವುದು ಅಗತ್ಯವಾಗಿದೆ ಎಂದಿದ್ದರು. ಆದರೆ ಅವರು ಐರ್ಲೆಂಡ್ ಹಾಗೂ ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನೀಡಿರಲಿಲ್ಲ ಹೀಗಾಗಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಡ್ರಾಪ್ ಔಟ್ ಆಗಿದ್ದರು. ಇನ್ನು ಸಂಜು ಸ್ಯಾಮ್ಸನ್ ರವರ ಕುರಿತಂತೆ ಕೂಡ ರೋಹಿತ್ ಶರ್ಮಾ ಮೆಚ್ಚುಗೆ ಮಾತುಗಳನ್ನಾಡಿದ್ದರು. ಅವರು ಕೂಡ ತಂಡದಿಂದ ಆಗಾಗ ಹೊರ ಬೀಳುತ್ತಿರುವುದನ್ನು ನೀವೇ ಗಮನಿಸುತ್ತಿರಬಹುದು.

ಇನ್ನು ಇತ್ತೀಚಿಗಷ್ಟೇ ಕೊಹ್ಲಿ ರವರ ಕಳಪೆ ಫಾರ್ಮ್ ಇದ್ದರೂ ಕೂಡ ಅವರು ಕ್ವಾಲಿಟಿ ಆಟಗಾರ ಅವರಿಗೆ ಖಂಡಿತವಾಗಿ ಸಪೋರ್ಟ್ ಮಾಡುತ್ತೇವೆ ಎಂಬುದಾಗಿ ಪರೋಕ್ಷವಾಗಿಯೇ ರೋಹಿತ್ ಶರ್ಮ ಹೇಳಿದ್ದರು ಈಗ ನೋಡಿದರೆ ವಿರಾಟ್ ಕೊಹ್ಲಿ ಅವರನ್ನು ಕೂಡ ವೆಸ್ಟ್ಇಂಡೀಸ್ ಪ್ರವಾಸದಿಂದ ಹೊರಗಿರಿಸಲಾಗಿದೆ. ಈ ಮೂಲಕ ರೋಹಿತ್ ಶರ್ಮ ಹೊಗಳುವ ಆಟಗಾರರನ್ನು ಬಿಸಿಸಿಐ ತಂಡದಿಂದ ಕೈ ಬಿಡುತ್ತಿದೆ ಎಂಬುದಾಗಿ ಕಾಕತಾಳಿಯ ದಂತೆ ಕಂಡುಬರುತ್ತಿದೆ. ಈ ಕುರಿತಂತೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮೂಲಕ ತಿಳಿಸಿ.