ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ತಂಡ ಘೋಷಣೆ ಮಾಡಿದ ಬಿಸಿಸಿಐ: ಹಲವಾರು ಬದಲಾವಣೆ. ಯಾರಿಗೆಲ್ಲ ಅವಕಾಶ ನೀಡಲಾಗಿದೆ ಗೊತ್ತೇ?
ವೆಸ್ಟ್ ಇಂಡೀಸ್ ವಿರುದ್ಧ ಸರಣಿಗೆ ತಂಡ ಘೋಷಣೆ ಮಾಡಿದ ಬಿಸಿಸಿಐ: ಹಲವಾರು ಬದಲಾವಣೆ. ಯಾರಿಗೆಲ್ಲ ಅವಕಾಶ ನೀಡಲಾಗಿದೆ ಗೊತ್ತೇ?
ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಇನ್ನೇನ್ ನೆಲದಲ್ಲಿ ಸಾಕಷ್ಟು ಯಶಸ್ವಿಯಾಗಿ ಪ್ರದರ್ಶನ ನೀಡುತ್ತಿದೆ ಇದರ ಬೆನ್ನಲ್ಲೇ ಭಾರತೀಯ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೂಡ ಆಡಬೇಕಾಗಿದೆ. ಹೀಗಾಗಿ ಬಿಸಿಸಿಐ ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಸರಣಿಗೆ ತಂಡವನ್ನು ಈಗಾಗಲೇ ಅಧಿಕೃತವಾಗಿ ಘೋಷಣೆ ಮಾಡಿದೆ. ಹಾಗಿದ್ದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾರಲ್ಲಿ ಆಡಲಿದ್ದಾರೆ ಹಾಗೂ ಯಾರೆಲ್ಲ ಹೊರಗುಳಿಯಲಿದ್ದಾರೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಹಲವಾರು ಸಮಯಗಳ ನಂತರ ಇಂಜುರಿ ಯಿಂದ ಗುಣಮುಖರಾಗಿರುವ ಇಬ್ಬರು ಸ್ಟಾರ್ ಆಟಗಾರರು ಈ ಸಂದರ್ಭದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಸ್ಟಾರ್ ಬ್ಯಾಟ್ಸ್ಮನ್ ಹಾಗೂ ತಂಡದ ಉಪನಾಯಕ ಆಗಿರುವ ಕೆ ಎಲ್ ರಾಹುಲ್ ಹಾಗೂ ಚೈನಮನ್ ಸ್ಪಿನ್ ಬೌಲರ್ ಆಗಿರುವ ಕುಲದೀಪ್ ಯಾದವ್. ಇನ್ನು ತಂಡದಿಂದ ಹೊರಗುಳಿದಿರುವ ನಾಲ್ಕು ಆಟಗಾರರ ಎಂದರೆ ಕಳಪೆ ಫಾರ್ಮ್ ನಲ್ಲಿ ಬಳಲುತ್ತಿರುವ ವಿರಾಟ್ ಕೊಹ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಚಹಲ್. ನಾಲ್ಕನೇ ಆಟಗಾರನಾಗಿ ಯುವ ಉದಯೋನ್ಮುಖ ವೇಗಿಯಾಗಿರುವ ಉಮ್ರನ್ ಮಲಿಕ್. ಇನ್ನು ಈ ಸಂದರ್ಭದಲ್ಲಿ ರವಿಚಂದ್ರನ್ ಅಶ್ವಿನ್ ಕೂಡ ತಂಡವನ್ನು ಸೇರಿಕೊಂಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರೇ ನಾಯಕನಾಗಿ ಕಾಣಿಸಿಕೊಳ್ಳಲಿದ್ದು ದೀಪಕ್ ಹೂಡ ಅವರಿಗೂ ಕೂಡ ತಂಡದಲ್ಲಿ ಅವಕಾಶವನ್ನು ನೀಡಲಾಗಿದೆ. ವಿಶ್ವಕಪ್ ಅನ್ನು ದೃಷ್ಟಿಯಲ್ಲಿರಿಸಿಕೊಂಡು ತಂಡದಲ್ಲಿ ಹಲವಾರು ಬದಲಾವಣೆಗಳು ಹಾಗೂ ಪ್ರಯೋಗಾತ್ಮಕ ಪ್ರಯತ್ನಗಳು ಕೂಡ ನಡೆಯುತ್ತವೆ ಎಂಬುದನ್ನು ಈ ಮೂಲಕ ನಾವು ಕಂಡುಕೊಳ್ಳಬಹುದಾಗಿದೆ. ಕೋಚ್ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ರವರ ಈ ಪ್ರಯತ್ನ ಯಾವ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.