ಈ ಭಾರತ ತಂಡವೇ, ಮುಂದಿನ ಚಾಂಪಿಯನ್ ಟ್ರೋಫಿ, ಟಿ೨೦-ಏಕದಿನ ವಿಶ್ವಕಪ್ ಮೂರನ್ನು ಗೆಲ್ಲಲೇ ಬೇಕು ಎಂದ ಮೈಕಲ್ ವಾನ್. ಯಾಕೆ ಅಂತೇ ಗೊತ್ತೇ??

ಈ ಭಾರತ ತಂಡವೇ, ಮುಂದಿನ ಚಾಂಪಿಯನ್ ಟ್ರೋಫಿ, ಟಿ೨೦-ಏಕದಿನ ವಿಶ್ವಕಪ್ ಮೂರನ್ನು ಗೆಲ್ಲಲೇ ಬೇಕು ಎಂದ ಮೈಕಲ್ ವಾನ್. ಯಾಕೆ ಅಂತೇ ಗೊತ್ತೇ??

ನಮಸ್ಕಾರ ಸ್ನೇಹಿತರೆ ಮೊನ್ನೆಯಷ್ಟೇ ನಡೆದಿರುವ ಏಕದಿನ ಕ್ರಿಕೆಟ್ ಪಂದ್ಯಾಟದಲ್ಲಿ ಭಾರತೀಯ ಕ್ರಿಕೆಟ್ ತಂಡ ಬಲಿಷ್ಠ ಇಂಗ್ಲೆಂಡ್ ತಂಡದ ವಿರುದ್ಧ ಅವರ ತವರು ನೆಲದಲ್ಲಿಯೇ 10 ವಿಕೆಟ್ಗಳ ದೊಡ್ಡಮಟ್ಟದ ಭರ್ಜರಿ ಗೆಲುವು ಸಾಧಿಸಿರುವುದು ನಿಜಕ್ಕೂ ಕೂಡ ಅತಿಥೇಯ ಆಂಗ್ಲರಿಗೆ ಮುಖಭಂಗವನ್ನು ತಂದಿದೆ ಎಂದರೆ ತಪ್ಪಾಗಲಾರದು.

ಇನ್ನು ಸಾಮಾನ್ಯವಾಗಿ ನೀವು ಸೋಶಿಯಲ್ ಮೀಡಿಯಾ ಗಮನಿಸಿದರೆ ಮೈಕಲ್ ವಾನ್ ಪ್ರತಿಬಾರಿ ಭಾರತದ ವಿರುದ್ಧ ತಮ್ಮ ವ್ಯಂಗ್ಯಾತ್ಮಕ ಟೀಕೆಯನ್ನು ವ್ಯಕ್ತಪಡಿಸುತ್ತಾ ತಂಡದ ವಿರುದ್ಧ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ಈ ಬಾರಿ ಭಾರತ ಕ್ರಿಕೆಟ್ ತಂಡದ ಪರವಾಗಿ ಮೈಕಲ್ ವಾನ್ ಗುಣಗಾನವನ್ನು ಮಾಡುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಬಲಿಷ್ಠ ಭಾರತೀಯ ಕ್ರಿಕೆಟ್ ತಂಡ ಖಂಡಿತವಾಗಿ ಈ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20ವಿಶ್ವಕಪ್ ನಂತರ ಚಾಂಪಿಯನ್ಸ್ ಟ್ರೋಫಿ ಮತ್ತು ಏಕದಿನ ವಿಶ್ವಕಪ್ ಅನ್ನು ಕೂಡ ಗೆಲ್ಲಲೇಬೇಕು ಅಷ್ಟರಮಟ್ಟಿಗೆ ಬಲಿಷ್ಠವಾಗಿದೆ. ಮೊನ್ನೆ ನಡೆದಿರುವ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಸರ್ವತೋಮುಖವಾಗಿ ಸಮತೋಲಿತ ಪ್ರದರ್ಶನವನ್ನು ನೀಡುವ ಮೂಲಕ ನಿಜವಾದ ಚಾಂಪಿಯನ್ ತಂಡ ಎನಿಸಿಕೊಂಡಿದೆ.

ಬೌಲಿಂಗ್ನಲ್ಲಿ ಆಕ್ರಮಕ ಶೈಲಿ ಕ್ಷೇತ್ರ ರಕ್ಷಣೆಯಲ್ಲಿ ಕೂಡ ಎಲ್ಲೂ ಕೊರತೆ ಇರಲಿಲ್ಲ. ಯಾವುದೇ ಪರಿಸ್ಥಿತಿಯಲ್ಲೂ ಕೂಡ ಯಾವುದೇ ಎದುರಾಳಿಯನ್ನು ಸೋಲಿಸಬಲ್ಲ ಶಕ್ತಿ ಭಾರತೀಯ ತಂಡಕ್ಕಿದೆ. ಅದರಲ್ಲೂ ಈ ವರ್ಷ ಆಸ್ಟ್ರೇಲಿಯ ನೆಲದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಭಾರತ ನನ್ನ ಕಪ್ ಗೆಲ್ಲುವ ನೆಚ್ಚಿನ ತಂಡ ಎಂಬುದಾಗಿ ಮೈಕಲ್ ವಾನ್ ಹೇಳಿದ್ದಾರೆ.