ಇರಲಾದೇ ಇರುವೆ ಬಿಟ್ಟುಕೊಳ್ಳುವುದು ಅಂದ್ರೆ ಇದೇನಾ?? ಸೌತ್ ಆಫ್ರಿಕಾ ತಂಡಕ್ಕೆ ಶಾಕ್. ತಂಡವೇ ವಿಶ್ವಕಪ್ ನಿಂದ ಔಟ್?? ಏನಾಗಿದೆ ಗೊತ್ತೇ?

ಇರಲಾದೇ ಇರುವೆ ಬಿಟ್ಟುಕೊಳ್ಳುವುದು ಅಂದ್ರೆ ಇದೇನಾ?? ಸೌತ್ ಆಫ್ರಿಕಾ ತಂಡಕ್ಕೆ ಶಾಕ್. ತಂಡವೇ ವಿಶ್ವಕಪ್ ನಿಂದ ಔಟ್?? ಏನಾಗಿದೆ ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಟಿ-20ವಿಶ್ವಕಪ್ ಪ್ರಾರಂಭವಾಗಲಿದೆ. ಇದಕ್ಕಾಗಿ ಈಗಾಗಲೇ ಬಹುತೇಕ ಎಲ್ಲಾ ತಂಡಗಳು ಕೂಡ ಶಿಸ್ತಿನಿಂದ ಪ್ರಾಕ್ಟಿಸ್ ಮಾಡಿಕೊಂಡಿದ್ದಾರೆ. ಈ ಬಾರಿ ವಿಶ್ವಕಪ್ ಅನ್ನು ಗೆಲ್ಲಲು ಉತ್ತಮ ತಂಡವನ್ನು ಸಜ್ಜು ಮಾಡಲು ಸಿದ್ಧರಾಗಿದ್ದಾರೆ. ಆದರೆ ಈಗ ನಾವು ಮಾತನಾಡಲು ಹೇಳುತ್ತಿರುವುದು ಟಿ20ವಿಶ್ವಕಪ್ ಕುರಿತಂತೆ ಅಲ್ಲ ಬದಲಾಗಿ ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕುರಿತಂತೆ.

ಕೊನೆಯ ಬಾರಿಗೆ ಭಾರತೀಯ ಕ್ರಿಕೆಟ್ ತಂಡ ಏಕದಿನ ವಿಶ್ವಕಪ್ ಅನ್ನು ಮಹೇಂದ್ರ ಸಿಂಗ್ ಧೋನಿ ರವರ ನಾಯಕತ್ವದಲ್ಲಿ 2011 ರಲ್ಲಿ ಗೆದ್ದುಕೊಂಡಿತ್ತು. ಮುಂದಿನ ಬಾರಿ ರೋಹಿತ್ ಶರ್ಮಾ ರವರಿಗೆ ಏಕದಿನ ವಿಶ್ವಕಪ್ ಭಾರತದಲ್ಲಿಯೇ ನಡೆಯುತ್ತಿರುವ ಕಾರಣದಿಂದಾಗಿ ಗೆಲ್ಲುವ ಸದಾವಕಾಶವಿದೆ. ಆದರೆ ಇದರ ನಡುವೆ ಪ್ರತಿಷ್ಠಿತ ಕ್ರಿಕೆಟ್ ತಂಡವೊಂದು ಮುಂದಿನ ಏಕದಿನ ವಿಶ್ವಕಪ್ ನಿಂದ ಹೊರಹೋಗುವ ಭೀತಿಯನ್ನು ಎದುರಿಸುತ್ತಿದೆ. ಹೌದು ಗೆಳೆಯರೇ ಆ ತಂಡ ಇನ್ಯಾವುದು ಅಲ್ಲ ಸೌತ್ ಆಫ್ರಿಕಾ ತಂಡ. ಸೌತ್ ಆಫ್ರಿಕಾ ಈಗಾಗಲೇ ಏಕದಿನ ರಾಂಕಿಂಗ್ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ.

ನಿಯಮಗಳ ಪ್ರಕಾರ ಅಗ್ರ ಎಂಟು ತಂಡಗಳಿಗೆ ಮಾತ್ರ ಏಕದಿನ ವಿಶ್ವಕಪ್ ಟೂರ್ನಮೆಂಟಿಗೆ ಆಹ್ವಾನ ನೀಡಲಾಗುತ್ತದೆ. ಹೀಗಾಗಿ ಮುಂದಿನ ವರ್ಷ ಜನವರಿಯಲ್ಲಿ ಪ್ರಾರಂಭವಾಗುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಸೌತ್ ಆಫ್ರಿಕಾ ಆಡಬೇಕಾಗಿತ್ತು ಆದರೆ ದೇಶಿಯ ಟಿ-ಟ್ವೆಂಟಿ ಕ್ರಿಕೆಟ್ ಲೀಗ್ ಕಾರಣದಿಂದಾಗಿ ಈ ಸರಣಿಯನ್ನು ಮುಂದೂಡುವ ಪ್ರಪೋಸಲ್ ಅನ್ನು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಎದುರು ಸೌತ್ಆಫ್ರಿಕಾ ಇಟ್ಟಿದೆ. ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಇದಕ್ಕೆ ನಿರಾಕರಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ಇಷ್ಟು ಮಾತ್ರವಲ್ಲದೆ ದಿನಾಂಕವನ್ನು ಮುಂದೂಡುವಂತೆ ಹಲವಾರು ಸರಣಿಗಳು ಇರುವುದು ಕೂಡ ಇದಕ್ಕೆ ಕಷ್ಟವಾಗಿ ಪರಿಣಮಿಸಿದೆ. ಒಂದು ವೇಳೆ ಇದನ್ನು ಮಿಸ್ ಮಾಡಿಕೊಂಡರೆ ಅಗ್ರ 8 ಸ್ಥಾನದ ಒಳಗೆ ಸೌತ್ ಆಫ್ರಿಕಾ ತಂಡ ಬರುವುದು ಕಷ್ಟಸಾಧ್ಯವಾಗುತ್ತದೆ.